ಹರಿಯೆ ನಿಮ್ಮಯ ಚರಣಕಮಲದಿ
ನಿರುತಭಕುತಲಿ ಬೇಡುವೆ ಪ
ಪರಮ ಕರುಣಾಕರನೆ ತರಳಗೀ
ವರವ ಕರುಣಿಸು ಬೇಗನೆ ಅ.ಪ
ಪರರ ಅಂಗನೆಯರನು ನೋಡಲಿಕ್ಕೆ
ನ್ನೆರಡು ಕಣ್ಣು ಕರುಡಾಗಲಿ
ಪರದ್ರವ್ಯ ಮುಟ್ಟಲಿಕ್ಕೆನ್ನ
ಎರಡುಕರ ಮುರಿದ್ಹೋಗಲಿ 1
ಒಡನೆ ಬಿದ್ದು ಹೋಗಲಿ
ಕೇಡು ಪರರಿಗೆ ಬಗೆವ ಮನ ಎ
ನ್ನೊಡಲೊಳಿಲ್ಲದ್ಹಾಂಗಾಗಲಿ 2
ಮಂಗಳಾಂಗ ನಿಮ್ಮ ಚರಣ ಕಾಣಲೆನ್ನ
ಕಂಗಳೆರಡು ದೃಷ್ಟಿಬಲಿಸಲಿ
ರಂಗ ಶ್ರೀರಾಮನಂಘ್ರಿಕಮಲದ
ಧ್ಯಾನದಲಿ ಮನ ಒಲಿಯಲಿ 3