ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಂಗಾ ಜನಕ ವಿಠಲ | ಅಂಗನೆಯ ಪೊರೆಯೋ ಪ ಮಂಗಳಾಂಗನೆ ದೇವ | ರಂಗ ಭವಹಾರೀ ಅ.ಪ. ವೈರಾಗ್ಯ ಭಾಗ್ಯಗಳ | ಹಾರೈಸುವಂತೆಸಗೋಸಾರಸುಖ ಸಾಂದ್ರ ಹರಿ | ಮಾರಮಣ ದೇವಾ |ಘೋರ ಭವವೆನಿಪ ಕೂ | ಪಾಠ ದಾಟಿಸೊ ಹರಿಯೆಕಾರುಣ್ಯ ಶರಧಿತವ | ಓರೆ ನೋಟದಲೀ1 ಗಣನೆಗೊಳಗಾಗದಿಹ | ಜನನ ಮರಣವು ಬರಲಿತನು ಮನದ ಸಂತಾಪ | ಅಣು ಬೃಹತು ಇರಲೀಗುಣ ಪೂರ್ಣ ಶ್ರೀಹರಿಯೆ | ಗಣನೆಗದು ಸಿಗದ ತೆರಅನನುತನೆ ನಿನ್ನ ಕಾರುಣ್ಯ ಒಂದಿರಲೀ 2 ಅಂಗನೆಗೆ ಸ್ವಪ್ನದಲಿ | ಗಂಗೆ ಮೀಯಿಸಿ ಬಾಲಸಂಗದಲಿ ಧವಳಾಖ್ಯ | ಗಂಗೆ ಸೋಪಾನಾಭಂಗ ವಿಲ್ಲದೆ ಯೇರಿ | ಮಂಗಳಾಂಗೆರ ಕಂಡುಶಿಂಗರದಿ ಪೂಜಿಸಿಹ | ಅಂಗನಾ ಮಣಿಯಾ 3 ಉಚ್ಚ ನೀ ಚಂಗಳನು | ಸ್ವಚ್ಛ ತಿಳಿಸುತ್ತಿವಳಕೃಚ್ಛ್ರಕೇ ಒಲಿಯುತ್ತ | ಲಕ್ಷ್ಮೀ ರಮಣಾಅಚ್ಚ ಭಕುತಿ ಜ್ಞಾನ | ನಿಚ್ಚಳದ ಮನವಿತ್ತುಸಚ್ಚಿದಾನಂದಾತ್ಮ | ಉಚ್ಚಳೆಂದೆನಿಸೋ 4 ವಿಷ್ಣು ಪದಿಧರಸಖನೆ | ದಶರಥಾತ್ಮಜ ಹರಿಯೆಯಶವಂತೆ ಗೃಹಿಣಿ ತವ | ಎಸೆವಪದ ಬಿಸಜವನು ಹಸನು ಸೇರಿಸೊಗುರೂ ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಬಾಯತೋರೋ ರಂಗ ಬಾಯತೋರೋ ಮುದ್ದು ಬಾಯಲಿ ತುತ್ತು ಅನ್ನವನಿಡುವೆ ಬಾಯತೋರೋ ಪ ಕತ್ತಲಿನಂತಿರುವ ತುಟಿಗಳ ತೆರೆಯುತ ಬಾಯತೋರೋ ಜ- ಗತ್ತಿನ ಬೆಳಕನು ನೋಡುವೆ ಒಮ್ಮೆ ಬಾಯತೋರೋ ಒತ್ತೊತ್ತಿನ ತುತ್ತನಿಡಲು ಬಂದಿರುವೆ ಬಾಯತೋರೋ ತುತ್ತೇ ತುತ್ತನು ತಿನ್ನುವೆ ಜಾಣ ಬಾಯತೋರೋ 1 ಭಂಜಿಸಿ ಬಲಿಯ ದಾನವ ಬೇಡಿದ ಬಾಯತೋರೋ ಅಂಜಿದ ನರನಿಗೆ ಗೀತೆ ಬೋಧಿಸಿದ ಬಾಯತೋರೋ ಗಂಜಿಯಕುಚೇಲಗವಲಕ್ಕಿ ಬೇಡಿದ ಬಾಯತೋರೋ ಅಂಜದ ಕರ್ಣಗೆ ಗುಟ್ಟು ಹೇಳಂಜಿಸಿದ ಬಾಯತೋರೋ2 ಅಮ್ಮ ಯಶೋದೆಯ ಮೊಲೆಹಾಲನುಂಡ ಬಾಯತೋರೋ ಗುಮ್ಮ ಪೂತನಿಯ ಅಸುಮೊಲೆ ಜಗಿದ ಬಾಯತೋರೋ ಸುಮ್ಮಸುಮ್ಮನೆ ಅಂಗನೆಗೆ ಮುತ್ತನಿಟ್ಟ ಬಾಯತೋರೋ ಗಮ್ಮನೆ ಅಪ್ಪಿ ಗೋಪಿಯರ ಪೀಡಿಸಿದ ಬಾಯತೋರೋ3 ಮೋಹನಮುರಳಿಯಮೋದದಿನುಡಿಸಿದಬಾಯತೋರೋ ಮೋಹನಾಂಗನೆಯರ ಮಾಟದಿ ಮಿಡಿಸಿದ ಬಾಯತೋರೋ ಮೋಹನ ರಾಗದಿ ಗೋವುಗಳ ಕರೆದ ಬಾಯತೋರೋ ಮೋಹಿಪ ರಾಧೆಯ ಮೈಯುಲಿಯೆ ಪಾಡಿದ ಬಾಯತೋರೋ 4 ಬಳಕುವ ಗೋಪಿಯರ ಚೇಡಿಸಿದಾ ತುಂಟ ಬಾಯತೋರೋ ಬಲರಾಮನನ್ನು ಗೋಳಾಡಿಸಿದ ಆ ಬಾಯತೋರೋ ಬುಳುಬುಳು ಮಣ್ಣನೆ ಮೆಲ್ಲುವಾ ಪುಟ್ಟ ಬಾಯತೋರೋ ಭಲರೆ ಅಮ್ಮನಿಗೆ ಬ್ರಹ್ಮಾಂಡ ತೋರಿದ ಬಾಯತೋರೋ 5 ಪುರಂದರ ಬಾಯಾಗಿ ಹಾಡಿದ ಬಾಯತೋರೋ ಸೂ ಕುಮಾರ ಲಕ್ಷ್ಮೀಶರಲಿ ಬರೆದಾಡಿದ ಬಾಯತೋರೋ ಶ್ರೀಕಾಂತ ನಮ್ಮ ಜಾಜಿಪುರೀಶನೆ ಬಾಯತೋರೋ ಸಾಕಾಯಿತೋ ಭವದ ಬವಣೆನೀಗಲು ಬಾಯತೋರೋ6
--------------
ನಾರಾಯಣಶರ್ಮರು