ಅವನೆವೆ ಧನ್ಯ ನೋಡಿ
ಅವನ ದರುಶನ ಮಾಡಿ ಪ.
ಹರಿಧ್ಯಾನ ಹೃದಯದಲ್ಲಿ |
ಹರಿನಾಮ ಜಿವ್ಹದಲಿ |
ಹರಿಕಥೆ ಶ್ರವಣದಲ್ಲಿ|
ಹರಿಯಾ ಸೇವೆ ಅಂಗದಲ್ಲಿ1
ಹರಿಭಕ್ತಿಯೊಳು ಕೂಡಿ |
ಹರಿ ಕೀರ್ತನೆಯ ಮಾಡಿ |
ಹರಿ ಪ್ರೇಮ ತುಳಕಾಡಿ |
ಹೊರಳುವ ನಲಿದಾಡಿ 2
ತಂದೆ ಮಹಿಪತಿ ದಯಾ
ದಿಂದ ಪಡೆದು ವಿಜಯಾ
ಹೊಂದುವ ತಿಳಿದು ನೆಲಿಯಾ
ಛಂದವಾದಾ ಪುಣ್ಯಕಾಯಾ 3