ನೋಡೆ ಗೋಪೀ ಗೋಕುಲದೊಳುಹರಿ|ಮಾಡುವ ಲೀಲೆಗಳ ಪ್ರತಿಯಮ್ಮ ಪರಂಗನೆತ್ತಿ ಸಂಭ್ರಮದಿಂದಲಿ |ಅಂಗಣದೊಳಗೆ ನಿಂದಾಡಿಸಲು ||ತಿಂಗಳ ಬಿಂಬವ ಕಂಡಾಕ್ಷಣ ತ-|ನ್ನಂಗೈಯೊಳಗೇ ನಿಲಿಸಿಕೊಡೆಂಬ 1ಚಿನ್ನನು ನೋಡಲಿ ಎಂದಕ್ಕರದಲಿ |ಕನ್ನಡಿಯನು ತಂದು ಕೈಯಲಿ ಕೊಡಲು ||ತನ್ನ ಮುಖದ ಪ್ರತಿಬಿಂಬವ ಕಂಡು ಅ-|ದನ್ನು ಕರೆದು ಬಳಿಯಿರಿಸಿರಿಯೆಂಬ 2ಅರಿಯದೆ ದೀಪವ ಕೆಂಪಗೆ ಕಂಡು |ಸೆರಗಿನಲ್ಲಿ ಕೊಡು ಆಡುವೆನೆಂಬ ||ಕರುವಿನಂತೆ ತನ್ನನು ಕೊಂಡೊಯ್ದು |ತುರುಗಳ ಮೊಲೆಯನು ಉಣಿಸಿರಿಯೆಂಬ 3ಪರಿಪರಿಯಿಂದಲಿ ಗೋಡೆಯ ಮೇಲೆ |ಬರೆದಿಹ ಚಿತ್ರದ ಗೊಂಬೆಯ ನೋಡಿ ||ಕರವಪಿಡಿದು ಎಳೆತಂದು ತನ್ನಯನೆರೆಯಲ್ಲಿಯೆ ನೀವಿರಿಸಿರಿಯೆಂಬ 4ತರುಣಿ ನಿನ್ನಯ ಸುಕೃತದ ಫಲವು |ಹರುಷವೆಮಗೆ ಅಭಿವೃದ್ಧಿಯಾಗಿಹುದು ||ಪುರಂದರವಿಠಲನ ಚರಿಯವ ನೋಡಲು |ಧರೆಯೊಳಗಿನ ಬಾಲಕರಂತಲ್ಲವೆ 5