ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧ್ಯಾನ ಮಾಡಿರೊ ರಂಗಯ್ಯನ ಪ ಗಾನ ವಿಲೋಲನ ದೀನಾರ ಪೊರೆವೊನ ಅ.ಪ. ಮೀನ ರೂಪವ ತಾಳಿ ದಾನವಾಖ್ಯನ ಸೀಳಿ ಮಾನವ ಪೊಂದಿದ ಜಾಣ ರಂಗೈಯ್ಯನ 1 ಕೂರ್ಮ ತಾನಾಗಿ ಗಿರಿಯ ಬೆನ್ನಲಿ ಪೊತ್ತು ಸುರರನ್ನೆ ಪೊರೆದ ಗಂಭೀರ ರಂಗೈಯ್ಯನ 2 ವರಾಹ ರೂಪದಿ ಕೋರೆಯ ಕೊನೆಯಲಿ ಧರಣಿಯನೆತ್ತಿದ ಶೂರ ರಂಗೈಯ್ಯನ 3 ನರಹರಿ ರೂಪದಿ ಘೋರ ದೈತ್ಯನ ಸೀಳಿ ತರಳನ ಸಲಹಿದ ಕರುಣಿ ರಂಗೈಯ್ಯನ 4 ಪುಟ್ಟ ಹಾರುವನಾಗಿ | ದಿಟ್ಟ ಬಲಿಗೆ ಒಲಿದು ಕೊಟ್ಟ ವರಗಳ ದಿಟ್ಟ ರಂಗೈಯ್ಯನ 5 ಪರಶು ಪಿಡಿದು ಭೂವರರ ಗೆಲಿದು ಭೂ ಸುರರನ್ನೆ ಸಲಹಿದ ಧೀರ ರಂಗೈಯ್ಯನ6 ಮಾನವ ರೂಪದಿ ದಾನವಾಂತಕನಾಗಿ ದೀನರ ಪೊರೆದ ಸುಜ್ಞಾನಿ ರಂಗೈಯ್ಯನ 7 ಕಂಸನ ವಂಶ ನಿರ್ವಂಶಾಕೋಸುಗ ಯದು ವಂಶದೊಳು ತಾನು ಜನಸಿದನು ಹಿಂಸೆ ಮಾಡುತಲಿರ್ದ ಹಂಸ ಡಿಬಿಕರನ್ನು ಧ್ವಂಸ ಮಾಡಿದ ಮುರಧ್ವಂಸಿ ಕೃಷ್ಣಗೆ 8 ಸತಿಯರ ವ್ರತದಿಂದ ಪತಿತರಳಿಯದಿರೆ ಗತಿ ತೋರದೆ ಭವಕಾತರಿಸೆ ಅತಿ ನಗ್ನದಿ ಬಂದು ವ್ರತಭಂಗ ಮಾಡಿದ ಸಿರಿ ಕಂಠÀನುತನಾದ ಸಿತವಾಹನ ಸಖನ 9 ವೇದ ಬಾಹಿತರನ್ನು ಭೂದೇವಿ ಧರಿಸದೆ ಮಾಧವ ಪೊರೆಯೆಂದು ಮೊರೆಯಿಡಲು ಚದುರತನದಿ ಸತಿಯ ಕುದುರೆಯ ಮಾಡಿತಾ ಕೊಂಡ ಕದನದಿ ಕೊಂದವನ 10 ಮಂಗಳ ಮಹಿಮನ ಶೃಂಗಾರ ಪ್ರಿಯನ ಅಂಗಜಾರಿಯ ಧನುರ್ಭಂಗನ ಅಂಗಳದೊಳು ಮೂರ್ಲೋಕಂಗಳ ತೋರಿದ ತುಂಗ ವಿಕ್ರಮನಾದ ರಂಗೇಶವಿಠಲನ 11
--------------
ರಂಗೇಶವಿಠಲದಾಸರು
ಶೌರಿ ನಿನ್ನಯ ಭಕ್ತ ನಾನೆನ್ನಿಸೊ ಪ ಇಂದುವರನಂದದಲಿ ಬಂದೆ ನೀ ಕನಸಿನಲಿ ಇಂದಿರಾಪತಿಯೆಂದೆ | ಹುಸಿನಗೆಯಲಿ ಒಂದು ಶಿವಚರಿತೆ ಪೇಳೆಂದು ಗುರುರೂಪದಲಿ ಅಂದಿತ್ತ ದರ್ಶನವೆ ಸಾಕು ಎನಗೆ 1 ವಾರಿನಿಧಿಯೊಳು ಮುಳುಗಿ ದಾರಿಕಾಣದ ಮುನಿಗೆ ತೋರಿದಾ ಶಿಶುರೂಪ ಸಾಕು ಎನಗೆ ಘೋರ ಕಾನನದಲ್ಲಿ ಜಾನಿಸಿದ ಬಾಲನಿಗೆ ಸಿರಿ ಮೊಗವೆ ಸಾಕು ಎನಗೆ 2 ಅರಸಿಯಾಲಿಂಗನವ ಅರೆಘಳಿಗೆ ಬಿಡದವಗೆ ಕರುಣದಿಂ ನೀತೋರ್ದ ಚರಣ ಸಾಕೆನಗೆ ಪರರ ದಂಡಿಸಿ ಧನವ ಅಪಹರಿಸಿದಾತಂಗೆ ಗುರುವೆನಿಸಿದಾ ರೂಪ ಸಾಕು ಎನಗೆ 3 ಘೋರ ರೂಪವ ಗಳಿಸಿ ನಾರಣಾಯೆಂದವಗೆ ತೋರಿದಾ ಕಾರುಣ್ಯವಿರಲಿ ಎನ್ನೊಳಗೆ [ಹದಿ ನಾ]ರು ಸಾಸಿರ ಜನರ ಗುಂಪಿಂದಲೈತಂದು ತೋರಿದಾ ದ್ವಿಜರೂಪ ಸಾಕು ಎನಗೆ4 ರಂಗನಾಥನು ನೀನೆ ಗಂಗಾಧರನು ನೀನೇ ಮಾಂಗಿರಿಯ ಶೃಂಗಾರ ನಿಲಯ ನೀನೇ ಅಂಗಜನ ಪಿತನೀನೆ | ಅಂಗಜಾರಿಯು ನೀನೆ ಮಂಗಳಾಂಗನೆ ಭವದ ಹಂಗ ಬಿಡಿಸೋ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀ ಸತ್ಯಸಂಧರು ಸತ್ಯ ಬೋಧರ ಕಂಡ | ಯತಿವರ್ಯ ಸತ್ಯಸಂಧ ಕೃತ್ಯ ನಿಮ್ಮದು ಆನಂದಾ ಪ ಸ್ತುತ್ಯುಯತ್ಯಾಶ್ರಮವ ವಹಿಸುತಪ್ರತ್ಸಹತ ಸಚ್ಚಾಸ್ತ್ರ ಬೋಧಕಪ್ರತ್ಯರ್ಥಿ ಮಾಯ್ಗಳ ಖಂಡಿಸುತಭೃತ್ಯ ಜನಕಭೀಷ್ಟ ಗರೆವಾ ಅ.ಪ. ಗಂಗೆಮೀಯಲು ಸಾಧು ಸಂಗದಿ ತೆರಳುತ್ತಅಂಗಜಾರಿಯ ಪುರದೀ |ಮಂಗಳಾಂಗನು ಹರಿಪದಾಬ್ಜದಿಬೃಂಗರೆನಿಸುತ ಪೂಜೆಯ ಗೈಯ್ಯಲುರಂಗ ಹರಿಪಾದಾರವಿಂದವಕಂಗಳಿಂದಲಿ ಕಂಡಯತಿಯ 1 ಗಯ ಗಧಾದರ ನಂಘ್ರಿಪ್ರಿಯವಿಂದ ಭಜಿಸಲುನಯಸುತ್ತ ಪರಿವಾರವಾ |ಮಾಯಿಗಳ ದುರ್ವಾದ ಖಂಡಿಸಿಹೇಯಮತವಿದ್ವಂಸ ಗೈಯ್ಯುತರಾಯದಶರಥ ಸುತನು ರಾಮಗೆಜಯಪತ್ರಾರ್ಪಿಸಿದ ಮಹಿಮ 2 ವಿಷ್ಣುಪಾದವ ಮನ ಮುಟ್ಟಿ ಭಜಿಸಲು ಪೋಗೆದುಷ್ಟಗಯಾಳವಾರರು |ದಿಟ್ಟತನದಲಿ ಕದವಮುಚ್ಚಲು |ಶ್ರೇಷ್ಠ ಯತಿಗಳ ಭಕ್ತಿಗೊಲಿಯುತಥಟ್ಟನೇ ಕದತೆರೆಯಲಂದಿನಅಟ್ಟಹಾಸದಿ ಪೂಜೆಗೈದ 3 ಬಾಳಲಜ್ಜೆಲಿಗಯ | ವಾಳರು ಶರಣೆನ್ನೆಲಾಲಿಸುವರ ಭಿನ್ನ ಪ |ಮೂಲರಾಮರ ಸೇವೆಯನುಗಯೆವಾಳರೆಲ್ಲರು ಮಾಡಲೆನುತಲೀಲೆಯಿಂ ಮುದ್ರಾಂಕಗೈದಘಜಾಲವನು ತಾ ಕಳೆದ ಯತಿಯ 4 ಮಹಿಷಿ ಕ್ಷೇತ್ರದಿಅಂಗವೃಂದಾವನವ ಪೊಗಿಸುತರಂಗಗುರು ಗೋವಿಂದ ವಿಠಲನಮಂಗಳ ಧ್ಯಾನದಲಿರುತಿಹ 5
--------------
ಗುರುಗೋವಿಂದವಿಠಲರು