ಮಂಗಳಾಂಗ ಕರುಣಾಪಾಂಗ ಅಂಗಜಾರಿಪ್ರಿಯತುರಂಗ
ಸಂಗ ರೂಪಜಿತ ಭವಭಂಗ ಗಂಗಾ ಜನಕ ಜಯ ಶ್ರೀರಂಗ ಪ
ದೇವ ದೇವ ದಿವ್ಯ ಪ್ರಭಾವ ಭಾವನಾದಿ ದೂರ ಭಾವ
ಪಾವನೈಕ ರೂಪ ನಿರ್ಲೇಪ ಶ್ರಿವಧೂಕುಚ ಕುಂಕುಮ ದೀಪ 1
ಇಂದಿರಾ ಮುಖ ಪಂಕಜಸೂರ್ಯ ಮಂದಹಾಸ ಪೂರಿತಾಸ್ಯ
ಕುಂದರದನ ದಿವ್ಯಹಾರ ಬೃಂದಾವನ ವಿಹಾರಶೂರ 2
ಮುರಳೀಧರ ಗೋವಿಂದ ಮುರಾರೆ ಶರಣಜನ ಸಂರಕ್ಷಕ ಶೌರೆ
ದುರಿತ ದೂರ ವರಧೇನುನಗರ ಪುರವಿಹಾರ ಪಾಲಿಸು ವೀರ 3