ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳೆ ಕೊಳಲಿನ ದನಿಯ ಸಖಿಯೆ ನಾಳೆಯೆಂದೆನಬೇಡವೆ ಪ ಹೇಳೆ ಕೊಳಲಿನ ನಾದ ಸೇರಲಿ ತಾಳವನು ಬಿಡಬೇಡವೆ ಬಾಳು ಹಸನಾಗಿರಲು ಗಾನವು ಮೇಳವಿಸಬೇಕಲ್ಲವೆ ಅ.ಪ ಗಾನವೇ ಸುಖಸಂಪದದ ನೆಲೆ ಗಾನವೆ ಶಿಶುಲಾಲನೆ ಗಾನವೇ ಫಣಿಗಿಷ್ಟವಲ್ಲವೇ ಗಾನವೇ ಪಶುಪಾಲನೆ ಗೋಪಿ ನಲಿದಳು ಗಾನ ವೇದದ ಸಾಧನೆ 1 ವೈರಿ ಅಂಗಜಾತನ ಪಿತನ ಕೊಳಲಿನ ಗಾನವೇ ಮಧುಪಾನವು ಮಂಗಳಾಂಗನ ಪಾದಸೇವೆಗೆ ಮಾಂಗಿರೀಶನ ನಾಮವು 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಾಕು ಜನ್ಮದ ಸುಖವು ಸಾಕಿನ್ನು ಹರಿಯೇ ಪ ಅನೇಕ ಜನ್ಮದ ಸುಖ ಬೇಡ ಹರಿಯೇ ಅ.ಪ ಹದಿನೆಂಟು ಸಾಸಿರ ವಿಧವಿಧ ಜನ್ಮವ ಮೊದಲು ಕಳೆಯುತಲೀಗ ನರನಾಗಿ ಜನಿಸೀ ಕ್ರೋಧ ಲೋಭಗಳಿಂದ ಮದ ಮಾತ್ಸರ್ಯಗಳಿಂದ ಅಧಿಕ ಮೋಹಿತನಾದೆ ಪದುಮಾಕ್ಷ ಪರಂಧಾಮಾ 1 ನರಜನ್ಮ ಹಿರಿದೆಂದು ಅರಿತವÀರು ಪೇಳ್ವರು ಹರಿ ನಿನ್ನ ನುತಿಸಿ ಪಾಡುವ ಭಕ್ತ ಜನಕೆ ಪರಮಪಾತಕ ಗೈದು ನರಕಕೆ ಪೋಪೆನ್ನ ಮರಳಿ ಕಳುಹಲಿಬೇಡ ಧರಣಿಗೆ ದೇವ ದೇವ 2 ನರಕದೆ ಸುಖವುಂಟು ಧರೆಯಲ್ಲಿ ಸುಖವಿಲ್ಲ ಕರುಣಾಕರ ದೇವ ಸಿರಿಕಾಂತನೇ ಧರೆಯೊಳು ನಾನಿಹೆ ಅರೆಘಳಿಗೇ ನಿನ್ನ ಪರಮನಾಮಾವಳಿಯ ಸ್ಮರಣೆಯ ಕೊಡುಸಾಕು 3 ಗಂಗೆಯ ಜನಕನೆ ಮಂಗಳ ಮೂರುತಿ ಮಾಂಗಿರಿವರವಾಸ ಶ್ರೀಶ್ರೀನಿವಾಸ ಅಂಗಜಾತನ ತಾತ ಶೃಂಗಾರ ಪೂರಿತ ಭಂಗ ಮಾಡಿಸಬೇಡ ರಂಗೇಶ ಭವಬೇಡ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್