ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂದಕುಮಾರಾ ಮುಕುಂದಾ ಜನಾರ್ದನ ಮಂದರಧರ ಗೋವಿಂದ ಹರೇ ಪ ಸುಂದರ ಗೋಪಿ ಮಾಧವ ಕೇಶವಪತೇ ನಮೋ ಸಾಮಜಪಾಲನ ನಾಮಾ ನಮೋ ಭೂಮಿ ಸುತಾನ್ವಿತ ರಾಮಾ ನಮೋ ನಮೋ ಕಾಮಿತದಾತಾ ಪರೇಶಾ ನಮೋ ನಮೋ 1 ಅಕ್ಷಯಾತ್ಮ ಸುರಪಕ್ಷಾ ನಮೋ ನಮೋ ಪಕ್ಷಿಗಮನ ಪದುಮಾಕ್ಷಾ ನಮೋ ನಮೋ ಲಕ್ಷರೂಪ ಖಳಶಿಕ್ಷಾ ನಮೋ ನಮೋ [ರಕ್ಷಕ ಪಾಂಡವ ಪಕ್ಷ ನಮೋ] 2 ತುಂಗ ಕೃಪಾಂಬಕ ರಾಮಾ ನಮೋ ನಮೋ [ಮಂಗಳದಾಯಕ ಕೃಷ್ಣನಮೋ] ಅಂಗಜಾತ ಪಿತ ರಂಗ ನಮೋ ನಮೋ ಮಾಂಗಿರಿವಾಸ ಕೃಪಾಂಗಾ ನಮೋ ನಮೋ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೇಳೆ ಕೊಳಲಿನ ದನಿಯ ಸಖಿಯೆ ನಾಳೆಯೆಂದೆನಬೇಡವೆ ಪ ಹೇಳೆ ಕೊಳಲಿನ ನಾದ ಸೇರಲಿ ತಾಳವನು ಬಿಡಬೇಡವೆ ಬಾಳು ಹಸನಾಗಿರಲು ಗಾನವು ಮೇಳವಿಸಬೇಕಲ್ಲವೆ ಅ.ಪ ಗಾನವೇ ಸುಖಸಂಪದದ ನೆಲೆ ಗಾನವೆ ಶಿಶುಲಾಲನೆ ಗಾನವೇ ಫಣಿಗಿಷ್ಟವಲ್ಲವೇ ಗಾನವೇ ಪಶುಪಾಲನೆ ಗೋಪಿ ನಲಿದಳು ಗಾನ ವೇದದ ಸಾಧನೆ 1 ವೈರಿ ಅಂಗಜಾತನ ಪಿತನ ಕೊಳಲಿನ ಗಾನವೇ ಮಧುಪಾನವು ಮಂಗಳಾಂಗನ ಪಾದಸೇವೆಗೆ ಮಾಂಗಿರೀಶನ ನಾಮವು 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭಾರತೀಶನ ಸೇರಿರೋ ಭವವಾರಿಧಿ ದಾಟುವರೆ ಸಾರ ತೋರುವ ಪ. ತುಂಗ ವಿಷಯಾಂಗಜನಿತೋತ್ತುಂಗ ತರಂಗದೊಳು ಅಂಗಜಾತ ತಿಮಿಂಗಿಲನು ತಾನುಂಗುವ ನಿಮಿಷದೊಳು ಮಂಗಳಾತ್ಮಕ ಮಾರುತನ ಸದಪಾಂಗಲೇಶವನೈದೆ ಸುಲಭದಿ ರಂಗನಿರವನು ತೋರಿ ಸಲಹುವ 1 ತ್ರೇತೆಯೊಳಗಿನ ಜಾತನಿಗೆ ರಘುನಾಥನ ತೋರಿಸಿದ ಕಾತುರದ ಪುರಹೂತನನು ಯದುನಾಥನಿಗೊಪ್ಪಿಸಿದಾ ಭೂತನಾಥನ ವಾಕ್ಯಬಲದಿಂದಾತ್ಮ ಜೀರಿಗೈಕ್ಯಪೇಳುವ ಪಾತಕಿಗಳನು ಗೆದ್ದು ತ್ರಿಜಗನ್ನಾಥ ಮುತ್ತಿದನೆಂದು ಮೆರಸಿದಿ 2 ಸೂತ್ರನಾಮಕ ಪ್ರಣವನಾಯಕ ಕ್ಷತ್ರಪುರದೊಳಿರುವಾ ಶತ್ರುತಾಪನ ಶೇಷಗಿರಿ ಪತಿಪುತ್ರನೆನಿಸಿ ಮೆರೆವಾ ಚಿತ್ರಕರ್ಮ ಚಿರಂತನಾಣುಗ ಪುತ್ರಮಿತ್ರಕಳತ್ರ ಭಾಗ್ಯದ ನೇತ್ರ ವಿಷಯ ಪರತ್ರ ರಕ್ಷಕ ಧಾತ್ರಪದಸತ್ಪಾತ್ರನೆನಿಸುವ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳನಾಮಾ ನಮೋ ನಮೋ ಪ ಮಾಂಗಿರಿಧಾಮಾ ನಮೋ ನಮೋ ಅ.ಪ ಅಂಗಜಾತ ಪಿತ ಸುರಪತಿವಿನುತಾ ತುಂಗ ಕೃಪಾಂಬಕ ನಮೊ ನಮೋ 1 ರಂಗನಾಥ ನೀಲಾಂಗ ಮಹಾದ್ಭುತ ಸಿಂ[ಗಾನ]ನ ಹರೇ ನಮೋ ನಮೋ 2 ನಾಗಾಲಂಕೃತ ಸರೋಜ ಭೂಷಿತ ಕಮಲಭವಾನತ ನಮೋ ನಮೋ 3 ತಾರಕ ನಾಮ ನಮೋ ನಮೋ ರಘುರಾಮಾ ನಮೋ ನಮೋ 4 ಸುರಮುನಿ ನಾರದ ಗೌತಮ ಪ್ರೇಮಾ ಧರೆಗಭಿರಾವೂ ನಮೋ ನಮೋ 5 ಗಿರಿಜಾಧವನುತ ಗುಣ ಮಣಿಧಾಮಾ ರಾಕ್ಷಸ ಭೀಮಾ ನಮೋ ನಮೋ 6 ರಾಮಾ ರಘುರಾಮ ಕ್ಷೀರಾಬ್ಧಿಶಾಯಿ ಸೋಮಾ ಮಾಂಗಿರಿವರ ನಮೋ ನಮೋ7
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಾಕು ಜನ್ಮದ ಸುಖವು ಸಾಕಿನ್ನು ಹರಿಯೇ ಪ ಅನೇಕ ಜನ್ಮದ ಸುಖ ಬೇಡ ಹರಿಯೇ ಅ.ಪ ಹದಿನೆಂಟು ಸಾಸಿರ ವಿಧವಿಧ ಜನ್ಮವ ಮೊದಲು ಕಳೆಯುತಲೀಗ ನರನಾಗಿ ಜನಿಸೀ ಕ್ರೋಧ ಲೋಭಗಳಿಂದ ಮದ ಮಾತ್ಸರ್ಯಗಳಿಂದ ಅಧಿಕ ಮೋಹಿತನಾದೆ ಪದುಮಾಕ್ಷ ಪರಂಧಾಮಾ 1 ನರಜನ್ಮ ಹಿರಿದೆಂದು ಅರಿತವÀರು ಪೇಳ್ವರು ಹರಿ ನಿನ್ನ ನುತಿಸಿ ಪಾಡುವ ಭಕ್ತ ಜನಕೆ ಪರಮಪಾತಕ ಗೈದು ನರಕಕೆ ಪೋಪೆನ್ನ ಮರಳಿ ಕಳುಹಲಿಬೇಡ ಧರಣಿಗೆ ದೇವ ದೇವ 2 ನರಕದೆ ಸುಖವುಂಟು ಧರೆಯಲ್ಲಿ ಸುಖವಿಲ್ಲ ಕರುಣಾಕರ ದೇವ ಸಿರಿಕಾಂತನೇ ಧರೆಯೊಳು ನಾನಿಹೆ ಅರೆಘಳಿಗೇ ನಿನ್ನ ಪರಮನಾಮಾವಳಿಯ ಸ್ಮರಣೆಯ ಕೊಡುಸಾಕು 3 ಗಂಗೆಯ ಜನಕನೆ ಮಂಗಳ ಮೂರುತಿ ಮಾಂಗಿರಿವರವಾಸ ಶ್ರೀಶ್ರೀನಿವಾಸ ಅಂಗಜಾತನ ತಾತ ಶೃಂಗಾರ ಪೂರಿತ ಭಂಗ ಮಾಡಿಸಬೇಡ ರಂಗೇಶ ಭವಬೇಡ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್