ಒಟ್ಟು 19 ಕಡೆಗಳಲ್ಲಿ , 11 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂದಕುಮಾರಾ ಮುಕುಂದಾ ಜನಾರ್ದನ ಮಂದರಧರ ಗೋವಿಂದ ಹರೇ ಪ ಸುಂದರ ಗೋಪಿ ಮಾಧವ ಕೇಶವಪತೇ ನಮೋ ಸಾಮಜಪಾಲನ ನಾಮಾ ನಮೋ ಭೂಮಿ ಸುತಾನ್ವಿತ ರಾಮಾ ನಮೋ ನಮೋ ಕಾಮಿತದಾತಾ ಪರೇಶಾ ನಮೋ ನಮೋ 1 ಅಕ್ಷಯಾತ್ಮ ಸುರಪಕ್ಷಾ ನಮೋ ನಮೋ ಪಕ್ಷಿಗಮನ ಪದುಮಾಕ್ಷಾ ನಮೋ ನಮೋ ಲಕ್ಷರೂಪ ಖಳಶಿಕ್ಷಾ ನಮೋ ನಮೋ [ರಕ್ಷಕ ಪಾಂಡವ ಪಕ್ಷ ನಮೋ] 2 ತುಂಗ ಕೃಪಾಂಬಕ ರಾಮಾ ನಮೋ ನಮೋ [ಮಂಗಳದಾಯಕ ಕೃಷ್ಣನಮೋ] ಅಂಗಜಾತ ಪಿತ ರಂಗ ನಮೋ ನಮೋ ಮಾಂಗಿರಿವಾಸ ಕೃಪಾಂಗಾ ನಮೋ ನಮೋ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೇಳೆ ಕೊಳಲಿನ ದನಿಯ ಸಖಿಯೆ ನಾಳೆಯೆಂದೆನಬೇಡವೆ ಪ ಹೇಳೆ ಕೊಳಲಿನ ನಾದ ಸೇರಲಿ ತಾಳವನು ಬಿಡಬೇಡವೆ ಬಾಳು ಹಸನಾಗಿರಲು ಗಾನವು ಮೇಳವಿಸಬೇಕಲ್ಲವೆ ಅ.ಪ ಗಾನವೇ ಸುಖಸಂಪದದ ನೆಲೆ ಗಾನವೆ ಶಿಶುಲಾಲನೆ ಗಾನವೇ ಫಣಿಗಿಷ್ಟವಲ್ಲವೇ ಗಾನವೇ ಪಶುಪಾಲನೆ ಗೋಪಿ ನಲಿದಳು ಗಾನ ವೇದದ ಸಾಧನೆ 1 ವೈರಿ ಅಂಗಜಾತನ ಪಿತನ ಕೊಳಲಿನ ಗಾನವೇ ಮಧುಪಾನವು ಮಂಗಳಾಂಗನ ಪಾದಸೇವೆಗೆ ಮಾಂಗಿರೀಶನ ನಾಮವು 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಯ ರಮಾದೇವಿ ಸಾಗರ ಕನ್ನಿಕೆ ಪ ಪದ್ಮ ಪದ್ಮಾಲಯೇ ಪದ್ಮದಳಲೋಚನೆ | ಪದ್ಮಪ್ರಿಯೆ ದಿವ್ಯ ಪದ್ಮವದನೆ | ಪದ್ಮವಕ್ಷೋಜಾತಿ ಪದ್ಮಕಲ ಶೋಭಿತೆ | ಪದ್ಮಾಸನಾದೆನುತ ಪದ್ಮಚರಣೆ 1 ಮಂಗಲಾತ್ಮಕ ನೀಲಭ್ರಂಗ ಕುಂತಲಶಶಿ ಪ- ತಂಗ ಸನ್ನಿಭ ಕೋಮಲಾಂಗಿ ವರದೆ || ಗಾಂಗೆಯ ವಸನ ಸರ್ವಾಂಗ ರತ್ನಾಭರಣೆ | ಅಂಗಜಾಜನನಿ ಶ್ರೀರಂಗಪ್ರಿಯೆ 2 ಸತತ ಜಗದುತ್ಪತೆ ಸ್ಥಿತಿಯಂತೆ ಕಾರಿಣೆ | ನುತಗುಣ ಮಹಿಮಾಯ ಶ್ರುತಿ ಪೂಜಿತೆ || ಪತಿತಪಾವನ ಮಹೀಪತಿನಂದನಿಷ್ಟ | ದೇ ವತಿ ಭಕ್ತ ಜನಸುಖದಿ ಮತಿದಾಯಿತೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧ್ಯಾನ ಮಾಡಿರೊ ರಂಗಯ್ಯನ ಪ ಗಾನ ವಿಲೋಲನ ದೀನಾರ ಪೊರೆವೊನ ಅ.ಪ. ಮೀನ ರೂಪವ ತಾಳಿ ದಾನವಾಖ್ಯನ ಸೀಳಿ ಮಾನವ ಪೊಂದಿದ ಜಾಣ ರಂಗೈಯ್ಯನ 1 ಕೂರ್ಮ ತಾನಾಗಿ ಗಿರಿಯ ಬೆನ್ನಲಿ ಪೊತ್ತು ಸುರರನ್ನೆ ಪೊರೆದ ಗಂಭೀರ ರಂಗೈಯ್ಯನ 2 ವರಾಹ ರೂಪದಿ ಕೋರೆಯ ಕೊನೆಯಲಿ ಧರಣಿಯನೆತ್ತಿದ ಶೂರ ರಂಗೈಯ್ಯನ 3 ನರಹರಿ ರೂಪದಿ ಘೋರ ದೈತ್ಯನ ಸೀಳಿ ತರಳನ ಸಲಹಿದ ಕರುಣಿ ರಂಗೈಯ್ಯನ 4 ಪುಟ್ಟ ಹಾರುವನಾಗಿ | ದಿಟ್ಟ ಬಲಿಗೆ ಒಲಿದು ಕೊಟ್ಟ ವರಗಳ ದಿಟ್ಟ ರಂಗೈಯ್ಯನ 5 ಪರಶು ಪಿಡಿದು ಭೂವರರ ಗೆಲಿದು ಭೂ ಸುರರನ್ನೆ ಸಲಹಿದ ಧೀರ ರಂಗೈಯ್ಯನ6 ಮಾನವ ರೂಪದಿ ದಾನವಾಂತಕನಾಗಿ ದೀನರ ಪೊರೆದ ಸುಜ್ಞಾನಿ ರಂಗೈಯ್ಯನ 7 ಕಂಸನ ವಂಶ ನಿರ್ವಂಶಾಕೋಸುಗ ಯದು ವಂಶದೊಳು ತಾನು ಜನಸಿದನು ಹಿಂಸೆ ಮಾಡುತಲಿರ್ದ ಹಂಸ ಡಿಬಿಕರನ್ನು ಧ್ವಂಸ ಮಾಡಿದ ಮುರಧ್ವಂಸಿ ಕೃಷ್ಣಗೆ 8 ಸತಿಯರ ವ್ರತದಿಂದ ಪತಿತರಳಿಯದಿರೆ ಗತಿ ತೋರದೆ ಭವಕಾತರಿಸೆ ಅತಿ ನಗ್ನದಿ ಬಂದು ವ್ರತಭಂಗ ಮಾಡಿದ ಸಿರಿ ಕಂಠÀನುತನಾದ ಸಿತವಾಹನ ಸಖನ 9 ವೇದ ಬಾಹಿತರನ್ನು ಭೂದೇವಿ ಧರಿಸದೆ ಮಾಧವ ಪೊರೆಯೆಂದು ಮೊರೆಯಿಡಲು ಚದುರತನದಿ ಸತಿಯ ಕುದುರೆಯ ಮಾಡಿತಾ ಕೊಂಡ ಕದನದಿ ಕೊಂದವನ 10 ಮಂಗಳ ಮಹಿಮನ ಶೃಂಗಾರ ಪ್ರಿಯನ ಅಂಗಜಾರಿಯ ಧನುರ್ಭಂಗನ ಅಂಗಳದೊಳು ಮೂರ್ಲೋಕಂಗಳ ತೋರಿದ ತುಂಗ ವಿಕ್ರಮನಾದ ರಂಗೇಶವಿಠಲನ 11
--------------
ರಂಗೇಶವಿಠಲದಾಸರು
ಪರಮೇಶ್ವರಾ ಸೋಮಶೇಖರಾ ಪ ಗಿರಿಜಾವರಾ ಕರುಣಾಕರಾ ಅ.ಪ ಆದಿಮೂಲಾ ದೇವಾದಿದೇವಾ ಶಿವ ನಾದರೂಪ ಜೀವಾದಿಜೀವ ಶಿವ ವೇದವಿದಿತ ವೇದಾಂತರೂಪ ಶಿವ ವಾದವಾಕ್ಯ ಮಹಾಹ್ಲಾದ ವೈಭವಾ 1 ಅಂಗಜಾರಿ ಚರ್ಮಾಂಬರಧಾರಿ ರಂಗನಾಥ ಮಾಂಗಿರಿ ಸಂಚಾರಿ ಪಾತಕ ಪರಿಹಾರಿ ಲಿಂಗರೂಪ ಶುಭಕಾರಕ ಶೌರಿ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭಾರತೀಶನ ಸೇರಿರೋ ಭವವಾರಿಧಿ ದಾಟುವರೆ ಸಾರ ತೋರುವ ಪ. ತುಂಗ ವಿಷಯಾಂಗಜನಿತೋತ್ತುಂಗ ತರಂಗದೊಳು ಅಂಗಜಾತ ತಿಮಿಂಗಿಲನು ತಾನುಂಗುವ ನಿಮಿಷದೊಳು ಮಂಗಳಾತ್ಮಕ ಮಾರುತನ ಸದಪಾಂಗಲೇಶವನೈದೆ ಸುಲಭದಿ ರಂಗನಿರವನು ತೋರಿ ಸಲಹುವ 1 ತ್ರೇತೆಯೊಳಗಿನ ಜಾತನಿಗೆ ರಘುನಾಥನ ತೋರಿಸಿದ ಕಾತುರದ ಪುರಹೂತನನು ಯದುನಾಥನಿಗೊಪ್ಪಿಸಿದಾ ಭೂತನಾಥನ ವಾಕ್ಯಬಲದಿಂದಾತ್ಮ ಜೀರಿಗೈಕ್ಯಪೇಳುವ ಪಾತಕಿಗಳನು ಗೆದ್ದು ತ್ರಿಜಗನ್ನಾಥ ಮುತ್ತಿದನೆಂದು ಮೆರಸಿದಿ 2 ಸೂತ್ರನಾಮಕ ಪ್ರಣವನಾಯಕ ಕ್ಷತ್ರಪುರದೊಳಿರುವಾ ಶತ್ರುತಾಪನ ಶೇಷಗಿರಿ ಪತಿಪುತ್ರನೆನಿಸಿ ಮೆರೆವಾ ಚಿತ್ರಕರ್ಮ ಚಿರಂತನಾಣುಗ ಪುತ್ರಮಿತ್ರಕಳತ್ರ ಭಾಗ್ಯದ ನೇತ್ರ ವಿಷಯ ಪರತ್ರ ರಕ್ಷಕ ಧಾತ್ರಪದಸತ್ಪಾತ್ರನೆನಿಸುವ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಲಂ ಮಹಾಲಿಂಗ ದೇವನಿಗೆ ಗಂಗೋತ್ತಮಾಂಗಗೆ ಪ. ತುಂಗಬಲ ಭದ್ರಾಂಗ ಸದಯಾ- ಪಾಂಗ ಭಕ್ತಜನಾಂಗರಕ್ಷಗೆ ಅಂಗಜಾರಿ ಕುರಂಗಹಸ್ತಗೆ ಸಂಗೀತ ಪ್ರೇಮಾಂತರಂಗ ನಿಸ್ಸಂಗಗೆ 1 ವಾಮದೇವಗೆ ವಾಸವಾದಿ ಸು- ಧಾಮ ವಿಬುಧಸ್ತೋಮ ವಿನುತಗೆ ವ್ಯೋಮಕೇಶಗೆ ಸೋಮಚೂಡಗೆ ಭೀಮವಿಕ್ರಮಗೆ ಹೈಮವತಿಪತಿಗೆ 2 ಪ್ರಾಣಪತಿ ಲಕ್ಷ್ಮೀನಾರಾಯಣ- ಧ್ಯಾನಪರಗೆ ಪಾವಂಜೆಗ್ರಾಮ ಪ್ರ- ಧಾನಪುರುಷಗೆ ದೀನಜನಸಂ- ತಾನಗೀಶಾನಗೆ ಜ್ಞಾನಿ ಜಗದ್ಗುರುವಿಗೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳನಾಮಾ ನಮೋ ನಮೋ ಪ ಮಾಂಗಿರಿಧಾಮಾ ನಮೋ ನಮೋ ಅ.ಪ ಅಂಗಜಾತ ಪಿತ ಸುರಪತಿವಿನುತಾ ತುಂಗ ಕೃಪಾಂಬಕ ನಮೊ ನಮೋ 1 ರಂಗನಾಥ ನೀಲಾಂಗ ಮಹಾದ್ಭುತ ಸಿಂ[ಗಾನ]ನ ಹರೇ ನಮೋ ನಮೋ 2 ನಾಗಾಲಂಕೃತ ಸರೋಜ ಭೂಷಿತ ಕಮಲಭವಾನತ ನಮೋ ನಮೋ 3 ತಾರಕ ನಾಮ ನಮೋ ನಮೋ ರಘುರಾಮಾ ನಮೋ ನಮೋ 4 ಸುರಮುನಿ ನಾರದ ಗೌತಮ ಪ್ರೇಮಾ ಧರೆಗಭಿರಾವೂ ನಮೋ ನಮೋ 5 ಗಿರಿಜಾಧವನುತ ಗುಣ ಮಣಿಧಾಮಾ ರಾಕ್ಷಸ ಭೀಮಾ ನಮೋ ನಮೋ 6 ರಾಮಾ ರಘುರಾಮ ಕ್ಷೀರಾಬ್ಧಿಶಾಯಿ ಸೋಮಾ ಮಾಂಗಿರಿವರ ನಮೋ ನಮೋ7
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಂಗಳಾಂಗ ಕರುಣಾಪಾಂಗ ಅಂಗಜಾರಿಪ್ರಿಯತುರಂಗ ಸಂಗ ರೂಪಜಿತ ಭವಭಂಗ ಗಂಗಾ ಜನಕ ಜಯ ಶ್ರೀರಂಗ ಪ ದೇವ ದೇವ ದಿವ್ಯ ಪ್ರಭಾವ ಭಾವನಾದಿ ದೂರ ಭಾವ ಪಾವನೈಕ ರೂಪ ನಿರ್ಲೇಪ ಶ್ರಿವಧೂಕುಚ ಕುಂಕುಮ ದೀಪ 1 ಇಂದಿರಾ ಮುಖ ಪಂಕಜಸೂರ್ಯ ಮಂದಹಾಸ ಪೂರಿತಾಸ್ಯ ಕುಂದರದನ ದಿವ್ಯಹಾರ ಬೃಂದಾವನ ವಿಹಾರಶೂರ 2 ಮುರಳೀಧರ ಗೋವಿಂದ ಮುರಾರೆ ಶರಣಜನ ಸಂರಕ್ಷಕ ಶೌರೆ ದುರಿತ ದೂರ ವರಧೇನುನಗರ ಪುರವಿಹಾರ ಪಾಲಿಸು ವೀರ 3
--------------
ಬೇಟೆರಾಯ ದೀಕ್ಷಿತರು
ಮಂಗಳಾಂಬಕೀ ವರಲಕ್ಷ್ಮೀ ಮಂಗಳಂ ಜಯ ಪ ಅಂಗಜಾದಿ ಪ್ರೇಮಜನನಿ ಭೃಂಗವೇಣಿಯೆ ಜಯ ಅ.ಪ. ಬಿಂಬರದನವಸನ ಭೂಷ್ಯೆ ಅಂಬುಜಾಂಬಕಿ ಅಂಬ ಪಾಹಿಮಾಂ ಜಯ 1 ಕುಂಕುಮಾಕ್ತ ಫಾಲಶೋಭೆ ಕಿಂಕಿಣೀರವೆ ಪಂಕಜಾತ ಶೋಭಮಾನ ಹಸ್ತಪಲ್ಲವೆ ಜಯ 2 ರತ್ನನಿಚಯ ಭಾಸಮಾನ ರತ್ನಕಿಂಕಿಣೀ ರತ್ನರಾಜಪುತ್ರಿ ಕಮಲೆ ಭಕ್ತವತ್ಸಲೆ ಜಯ 3 ನಿತ್ಯ ನಿನ್ನನು ಯತ್ನದಿಂದ ಧೇನುನಗರ ವಾಸೆ ಪಾಲಿಸು 4
--------------
ಬೇಟೆರಾಯ ದೀಕ್ಷಿತರು
ರಕ್ಷಿಸು ಪರಮೇಶ್ವರ ದೇವ ಸಂ- ರಕ್ಷಿಸು ಪರಮೇಶ್ವರ ದೇವ ಪ ಗಂಗಾಧರ ಜಟಾಜೂಟ ಮನೋಹರ ರಂಜಿತ ಕೇಶಾಲಂಕೃತ ಶಶಿಧರ ಭಸ್ಮೋದ್ಧೂಳಿತ ಭವ್ಯ ಶರೀರ ಆಬ್ಜ ಪ್ರಭಾಕರ ಅನಲ ತ್ರಿನೇತ್ರ ಸದ್ಯೋಜಾತನೆ ಪರಮ ಪವಿತ್ರ 1 ಮಂಡಿತ ಹಾಸೋನ್ಮುಖ ಮುಖ ಮಂಡಲ ಕುಂಡಲಿ ಭೂಷಿತ ಕರ್ಣಕುಂಡಲ ವಿಷಧರ ಕಂಧರ ಕಂಧರ ಮಾಲ ಭಕ್ತಾ ಭಯಕರ ಕರಧೃತ ಶೂಲ ವಾಮದೇವ ದೇವೋತ್ತಮ ಲೋಲ 2 ಘೋರ ಕಪಾಲ ಖಟ್ವಾಂಗ ಡಮರುಗ ಅಕ್ಷಮಾಲ ಪಾಶಾಂಕುಶ ಸಾರಗ ಖಡ್ಗ ಧನುಶ್ಯರ ಖೇಟಕ ಭುಜಗ ಸಾಯಕ ಧೃತಕರ ಜಗ ದೇಕವೀರ ಅಘೋರನೆ ಸುಭಗ 3 ಗಜ ಶಾರ್ದೂಲಾ ಜಿನಧರ ಸದ್ಗುಣ ಅಣಿಮಾದ್ಯಷ್ಟೈಶ್ವರ್ಯ ನಿಷೇವಣ ಅಂಕಾರೋಹಿತ ಅಗಜಾ ವೀಕ್ಷಣ ಸನಾಕಾದ್ಯರ್ಚಿತ ಪಾವನ ಚರಣ ತತ್ಪುರಷನೆ ನಮೋ ಕರುಣಾಭರಣ 4 ರುದ್ರಾದಿತ್ಯ ಮರುದ್ಗಣ ಸೇವಿತ ನಂದೀಶಾದಿ ಪ್ರಮಥಗಣ ವಂದಿತ ನಾರದ ಮುಖ ಸಂಗೀತ ಸುಪ್ರೀತ ನಿಗಮ ಪರಾರ್ಥ ದಾತ 5
--------------
ಲಕ್ಷ್ಮೀನಾರಯಣರಾಯರು
ರಂಗನಾಥಾ ಅಂಗಜಾಪಿತಾ [ಮಾ] ವಂದಿತ ಪ ಜಗದಾದಿ ಮೂಲಕಾರಣ ನಗಧರಾಘ ನಿವಾರಣ ಖಗನುತಾ ಭಕ್ತಕಂಕಣ 1 ದೀನಪಾಲ ಸ್ವರ್ಣಮೇಖಲಾ | ಗಾನಲೋಲಾನುಪಮಲೀಲಾ ಕರುಣಾಲವಾಲ 2 ತಾಮಸನಿಕರಮಾನಿತಾ ಶ್ಯಾಮಲಾಂಗಾ ಪೊರೆ ಶ್ರೀಯುತಾ ರಾಮದಾಸಾರ್ಚಿತ [ಮಾಂಗಿರೀಶ] 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಾರಿಜ ಮುಖಿ ವಾರಿಜಾಕ್ಷಿ ವಾರಿಜ ಗಂಧಿ ವಾರಿಸನಳಿಯನನುಓರಂತೆ ನೀ ಪೋಗಿ ಕರೆತಾರೆನ್ನಯ ಪ್ರಾಣಾಧಾರ ಕೇಶವ ಮೂರ್ತಿಯ ಪ ನಗ ವೈರಿಯಣುಗನಣ್ಣನಯ್ಯನಾಪ್ತಗೆ ಮಿಗೆ ಹುಟ್ಟಿದನ ತಮ್ಮನಸೊಗಸು ವಸ್ತ್ರಕೆ ಸೋತನ ಸುರಪುತ್ರನ ವಾಜಿಯನಿವ ವೈರಿಯ ಪಗೆಯಜಗದೊಳಗೆ ಹಾಟಿದೊಳೇರಾಟದ ವನವ... ನವನಿಂದ ನಗೆತೋರಿನಾವುನಿನಗೆಅಗಣಿತಾಭರಣವೀವೆನು ಅಂಗಜಾಗ್ನಿಯ ತಗಹ ಬಿಡಿಸೆ ತರುಣಿ 1 ಮಿಹಿರ ನಂದನನ ತಂದೆಯ ಪಗೆಯವನ ಮಾವನ ಹಿತನ ಮನೆವೆಸರಮಹಿ ವನ ಕೃತಿಗೊಡೆಯನ ಬಂಟನನುಜನ ಸಹಿಸಿ ತಮ್ಮನ ಮಿತ್ರನ ಕುಹಕದಿ ಶಾಪವಡೆದಳು ಪ್ರಸ್ತರವಾಗಿ ಗಗನ ಮಧ್ಯದೊಳಿರಲು...ಸಿ ಶಾಪವ ದನುಜ... ಕ್ಷಿತಿಯೊಳು ವಿವರಿಸುವವನ ಕರೆತಾರೆ 2 ಸುರಭೇದ ಪ್ರಥಮ ದಾಸಿಯ ಪೆಸರನ ವಾಜಿಯರಸನ ನಖವೈರಿಯಮರೆಯ ಮಾರ್ಗದಿ ಗಮಿಸುವನಾಪ್ತನ ತಾಯ ಧರಿಸಿದಾತನ ಮಿತ್ರನಪೊರೆಯ ದೆಸೆಯ ದಿಕ್ಕರಿಯ ಕೋಪದಿ ಸೀಳ್ದನರಸಿಯಣ್ಣನನೀಕ್ಷಣಕರೆತಂದೆನಗೆ ಕೂಡಿಸು ಕಾಗಿನೆಲೆಯಾದಿಕೇಶವನ 3
--------------
ಕನಕದಾಸ
ಶೌರಿ ನಿನ್ನಯ ಭಕ್ತ ನಾನೆನ್ನಿಸೊ ಪ ಇಂದುವರನಂದದಲಿ ಬಂದೆ ನೀ ಕನಸಿನಲಿ ಇಂದಿರಾಪತಿಯೆಂದೆ | ಹುಸಿನಗೆಯಲಿ ಒಂದು ಶಿವಚರಿತೆ ಪೇಳೆಂದು ಗುರುರೂಪದಲಿ ಅಂದಿತ್ತ ದರ್ಶನವೆ ಸಾಕು ಎನಗೆ 1 ವಾರಿನಿಧಿಯೊಳು ಮುಳುಗಿ ದಾರಿಕಾಣದ ಮುನಿಗೆ ತೋರಿದಾ ಶಿಶುರೂಪ ಸಾಕು ಎನಗೆ ಘೋರ ಕಾನನದಲ್ಲಿ ಜಾನಿಸಿದ ಬಾಲನಿಗೆ ಸಿರಿ ಮೊಗವೆ ಸಾಕು ಎನಗೆ 2 ಅರಸಿಯಾಲಿಂಗನವ ಅರೆಘಳಿಗೆ ಬಿಡದವಗೆ ಕರುಣದಿಂ ನೀತೋರ್ದ ಚರಣ ಸಾಕೆನಗೆ ಪರರ ದಂಡಿಸಿ ಧನವ ಅಪಹರಿಸಿದಾತಂಗೆ ಗುರುವೆನಿಸಿದಾ ರೂಪ ಸಾಕು ಎನಗೆ 3 ಘೋರ ರೂಪವ ಗಳಿಸಿ ನಾರಣಾಯೆಂದವಗೆ ತೋರಿದಾ ಕಾರುಣ್ಯವಿರಲಿ ಎನ್ನೊಳಗೆ [ಹದಿ ನಾ]ರು ಸಾಸಿರ ಜನರ ಗುಂಪಿಂದಲೈತಂದು ತೋರಿದಾ ದ್ವಿಜರೂಪ ಸಾಕು ಎನಗೆ4 ರಂಗನಾಥನು ನೀನೆ ಗಂಗಾಧರನು ನೀನೇ ಮಾಂಗಿರಿಯ ಶೃಂಗಾರ ನಿಲಯ ನೀನೇ ಅಂಗಜನ ಪಿತನೀನೆ | ಅಂಗಜಾರಿಯು ನೀನೆ ಮಂಗಳಾಂಗನೆ ಭವದ ಹಂಗ ಬಿಡಿಸೋ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀ ಸತ್ಯಸಂಧರು ಸತ್ಯ ಬೋಧರ ಕಂಡ | ಯತಿವರ್ಯ ಸತ್ಯಸಂಧ ಕೃತ್ಯ ನಿಮ್ಮದು ಆನಂದಾ ಪ ಸ್ತುತ್ಯುಯತ್ಯಾಶ್ರಮವ ವಹಿಸುತಪ್ರತ್ಸಹತ ಸಚ್ಚಾಸ್ತ್ರ ಬೋಧಕಪ್ರತ್ಯರ್ಥಿ ಮಾಯ್ಗಳ ಖಂಡಿಸುತಭೃತ್ಯ ಜನಕಭೀಷ್ಟ ಗರೆವಾ ಅ.ಪ. ಗಂಗೆಮೀಯಲು ಸಾಧು ಸಂಗದಿ ತೆರಳುತ್ತಅಂಗಜಾರಿಯ ಪುರದೀ |ಮಂಗಳಾಂಗನು ಹರಿಪದಾಬ್ಜದಿಬೃಂಗರೆನಿಸುತ ಪೂಜೆಯ ಗೈಯ್ಯಲುರಂಗ ಹರಿಪಾದಾರವಿಂದವಕಂಗಳಿಂದಲಿ ಕಂಡಯತಿಯ 1 ಗಯ ಗಧಾದರ ನಂಘ್ರಿಪ್ರಿಯವಿಂದ ಭಜಿಸಲುನಯಸುತ್ತ ಪರಿವಾರವಾ |ಮಾಯಿಗಳ ದುರ್ವಾದ ಖಂಡಿಸಿಹೇಯಮತವಿದ್ವಂಸ ಗೈಯ್ಯುತರಾಯದಶರಥ ಸುತನು ರಾಮಗೆಜಯಪತ್ರಾರ್ಪಿಸಿದ ಮಹಿಮ 2 ವಿಷ್ಣುಪಾದವ ಮನ ಮುಟ್ಟಿ ಭಜಿಸಲು ಪೋಗೆದುಷ್ಟಗಯಾಳವಾರರು |ದಿಟ್ಟತನದಲಿ ಕದವಮುಚ್ಚಲು |ಶ್ರೇಷ್ಠ ಯತಿಗಳ ಭಕ್ತಿಗೊಲಿಯುತಥಟ್ಟನೇ ಕದತೆರೆಯಲಂದಿನಅಟ್ಟಹಾಸದಿ ಪೂಜೆಗೈದ 3 ಬಾಳಲಜ್ಜೆಲಿಗಯ | ವಾಳರು ಶರಣೆನ್ನೆಲಾಲಿಸುವರ ಭಿನ್ನ ಪ |ಮೂಲರಾಮರ ಸೇವೆಯನುಗಯೆವಾಳರೆಲ್ಲರು ಮಾಡಲೆನುತಲೀಲೆಯಿಂ ಮುದ್ರಾಂಕಗೈದಘಜಾಲವನು ತಾ ಕಳೆದ ಯತಿಯ 4 ಮಹಿಷಿ ಕ್ಷೇತ್ರದಿಅಂಗವೃಂದಾವನವ ಪೊಗಿಸುತರಂಗಗುರು ಗೋವಿಂದ ವಿಠಲನಮಂಗಳ ಧ್ಯಾನದಲಿರುತಿಹ 5
--------------
ಗುರುಗೋವಿಂದವಿಠಲರು