ಮಾತುಮಾತಿಗೆ ಮರೆಯಬೇಡ ಸೀತಾರಾಮನ ಪ
ಮಾತರಿಶ್ವನಾಥನು ಪ್ರೀತನಾಗುವ ಅ.ಪ.
ಹನುಮ ತಾನು ಭಕ್ತಿಯಿಂದ ನೆನೆದು ಸುಖಿಸುತ
ವನಜ ಸಂಭವ ಪದವಿ ಪೊಂದಿದ ಘನತರನ ಮಾತ 1
ಅಬಲೆಯನ್ನು ಕುಲಕೆ ತಂದ ಪ್ರಬಲನ ಮಾತ
ಶಬರಿಯೆಂಬ ಭಕ್ತಳಿಗೆ ಅಭಯವಿತ್ತನ ಮಾತ 2
ಅಂಗಜವೈರಿ ಶ್ರೀ ಶಿವನು ಹಿಂಗದೆ ಭಜಿಪ
ರಂಗೇಶವಿಠಲನೆಂಬುವ ಮಂಗಳನ ಮಾತ 3