ಮಂಗಲಂ ಮಂಗಲಂ ಭವತು ತೇಮಂಗಲಂ ಮಂಗಲಂ ಪ.ಅಂಗಜರೂಪಗೆ ಅಖಿಲ ಲೋಕೇಶಗೆಶೃಂಗಾರಮೂರ್ತಿಗೆ ಶ್ರೀಕಾಂತಗೆಸಂಗೀತ ಲೋಲಗೆ ಸಾಮಜವರದಗೆಬಂಗಾರಗಿರಿವಾಸ ಭವಭವ ಹರಗೆ 1ಕೃತ್ರಿಮ ರಕ್ಕಸ ಮೊತ್ತ ಸಂಹರಗೆಭಕ್ತರ ಹೃದಯದಿ ಬೆಳಗುವಗೆಸತ್ಯಾತ್ಮಕನಿಗೆ ಸತ್ಯನೇತ್ರನಿಗೆಚಿತ್ತಜಪಿತ ಚಿನುಮಯ ಮೂರ್ತಿಗೆ 2ಉತ್ತಮ ಗೌಡಸಾರಸ್ವತ ವಿಪ್ರರಿಂನಿತ್ಯಪೂಜೆಯಗೊಂಬ ನೀಲಾಂಗಗೆಛತ್ರಾಖ್ಯಪಟ್ಟಣಮಸ್ತಕಮಕುಟಗೆಕರ್ತಲಕ್ಷ್ಮೀನಾರಾಯಣ ಗುಣಾಂಬುಧಿಗೆ3