ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣದಿ ಪೊರೆಯೆನ್ನ ಪ್ರಭುವೇ ಮೂಲ ಗುರುವೆ ಪ ಪರಮ ದಯಾನ್ವಿತ ಸುರಕಲ್ಪತರುವೆ ಅ.ಪ. ಅಂಗಜಪಿತನಾಜ್ಞೆ ಹಿಂಗಾದೆ ನೀಯಾಂತು ಅಂಗನೆ ಸೀತೆಯ ಅರಸುತ್ತ ಪೋದೆಯೊ ತುಂಗವಿಕ್ರಮ ನೀನು ಮಂಗಳಾಂಗಿಯ ಕಂಡು ಶೃಂಗಾರವನವನ್ನೆ ಭಂಗಮಾಡಿದೆಯೊ 1 ಕರಿಪುರದರಸನ ವರಪುತ್ರ ನೀನಾಗಿ ಕರಿರಾಜವರದಗೆ ಭಾವನಾಗಿ ಧರಣಿ ಭಾರವೆಲ್ಲ ಹರಿಸಿದೆ ನೀನು 2 ಯತಿಯ ರೂಪವ ತಾಳಿ ಕ್ಷಿತಿಯೊಳು ಚರಿಸುತ ದಿತಿಜರ ಬಾಯ್ಗಳ ಬಡಿಯುತಲಿ ಪತಿತ ಪಾವನ ಶ್ರೀ ರಂಗೇಶವಿಠಲನೆ ಪ್ರತಿಯಿಲ್ಲವೆಂತೆಂಬ ಮತಿಯಿತ್ತದೇವ 3
--------------
ರಂಗೇಶವಿಠಲದಾಸರು