ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೀಂಗಾಯಿತ್ಹೀಂಗಾಯಿತೆ ಎನ್ನಯ ಬಾಳು ಪ ಗಂಗಾಜನಕ ಪಾಂಡುರಂಗ ಮೂರುತಿಯನು ಹಿಂಗದೆ ಭಜಿಸದೆ ಅಂಗಜನ್ವಶನಾದೆ 1 ಕಂತು ಜನಕ ಲಕ್ಷ್ಮೀಕಾಂತ ಮೂರುತಿಯನ್ನು ಚಿಂತಿಸದೆ ವಿಷಯ ಚಿಂತನೆಯಲ್ಲಿರುವೆ 2 ಹಿಂಡು ಜನರ ಮುಂದೆ ಸಂಭಾವಿತನಂದದಿ ಶುಂಭ ನಾ ಮೆರೆದೆನೊ 3 ಅಂಗನೆಯರ ಅಂಗಸಂಗ ಬಯಸಿ ಅಂತ ರಂಗದಿ ಕುಳಿತು ಬಹು ಸಂಗತಿ ಕಲ್ಪಿಸಿದೆ 4 ನಾನು ಪೇಳುವುದೇ ಸನ್ಮಾನ್ಯವೆಂದುಸುರಿ ನಾ ಮಾನಿನಿಯರ ಕೂಡಿ ಶ್ವಾನನಂದದಿ ಬಾಳ್ವೆ 5 ಬಿಡಿಸೋ ಬಿಡಿಸೋ ಹರಿ ಕೇಡು ಬುದ್ಧಿಗಳನ್ನು ಈಡು ನಿನಗಿಲ್ಲೆಂಬೊ ದೃಢಮನಸನೆ ಕೊಡೊ 6 ಘನತೆ ನಿನಗಲ್ಲವೊ ದೀನರ ಬಳಲಿಪುದು ಮಾನದಿಂದಲಿ ಕಾಯೊ ಶ್ರೀ ನರಹರಿಯೇ7
--------------
ಪ್ರದ್ಯುಮ್ನತೀರ್ಥರು