ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಂಕಾರ ಪ್ರತಿಪಾದ್ಯ ಶಂಖಚಕ್ರಾಭಯಕರ ಬಿಂಕದಿಂದ ಬಾಕು ಟೊಂಕದಿ ಕಟ್ಟಿ ಮೆರೆವ ದೇವ 1 ಇಷ್ಟು ಜನರ ರೋಗ ತೊಟ್ಟಿ ತೀರ್ಥದಿಂದ ಕಳೆವ ಕಷ್ಟದ ಕಂಕಣ ಕಟ್ಟಿ ಮೆರೆವ ದೇವಾ 2 ದೇಶದೇಶದಿ ಬರುವ ದಾಸ ಜನರ ಅರ್ಥಿ ಕಾಸುವೀಸಕೆ ಕೊಟ್ಟು ಲೇಸಾಗಿರುವಿಯಿಲ್ಲಿ 3 ನಾಮ ತೀರ್ಥ ಪ್ರಸಾದ ಕಾಮಿಸೆ ವಿಕ್ರಯಿಸುವ ನೇಮಗಳನೆ ಕೊಟ್ಟು ತ್ರಿಧಾಮ ನಿಲಯನೆ 4 ಮಂಗಳ ಮಹಿಮನೆ ಗಂಗಾಜನಕನೆ ಅಂಗಜನಯ್ಯನೆ ವೆಂಕಟರಮಣನೆ 5 ತಾಳ ತಂಬೂರಿ ದಮ್ಮಡಿ ಮೇಳದೊಳು ದಾಸರು ವೇಳೆ ವೇಳೆಗೆ ಸೇವಿಸೆ ಕಾಳ ದೋಷವ ಕಳೆವ 6 ರಮಾ ಸೇವಿತÀ ವಿಜಯ ರಾಮಚಂದ್ರವಿಠಲ ನಿತ್ಯ ನಿನ್ನ ನಾಮಗಳನೆ ನುಡಿಸೊ 7
--------------
ವಿಜಯ ರಾಮಚಂದ್ರವಿಠಲ
ನಾರಾಯಣ ನಾರಾಯಣ ನಾರಾಯಣ ನಾರಾಯಣ ನಾರಾಯಣ ಲಕ್ಷುಮಿ ಅರಸನೇ ಪ. ನಾರಾಯಣ ಲಕ್ಷುಮಿಅರಸನೆ ಹಯವದನ ಸ್ವಾಮಿ ನೀ ಒಲಿದು ದಯವಾಗು ಅ.ಪ. ಕೊಂಡ ಕ್ರೋಧವೆಂಬ ಕನ್ನಡಿ (ಕೆಂಗಿಡಿ?) ಲೋಭಮೋಹಗಳನುವಾದೊ ಲೋಭಮೋಹಗಳನುವಾದೊ ಹಯವದನ ಸ್ವಾಮಿ ನೀ ಒಲಿದು ದಯವಾಗು 1 ಮನುಗಳ ಕಾಲದಲ್ಲಿ ಜಲದೊಳಗವತರಿಸಿ ಜಗವೇಳು ಧರೆಯ ನೆಗಹಿದೆ ಜಗವೇಳು ಧರೆಯ ನೆಗಹಿದೆ ಹಯವದನ ಮತ್ಸ್ಯವತಾರ ದಯವಾಗು 2 ಕೂರ್ಮಾವತಾರದಲಿ ಭೂಮಿಯ ನೆಗಹಿದೆ ಕೂಡೆ ಸಜ್ಜನರ ಸಲಹಿದೆ ಕೂಡೆ ಸಜ್ಜನರ ಸಲಹಿದೆ ಹಯವದನ ಕೂರ್ಮಾವತಾರ ದಯವಾಗು 3 ದುರುಳ ದಾನವಗಂಜಿ ಕೋರೆದಾಡೆಯಲಿ ನೆಗಹಿದೆ ಕೋರೆದಾಡೆಯಲಿ ನೆಗಹಿದೆ ಹಯವದನ ವರಾಹಾವತಾರ ದಯವಾಗು 4 ಸೊಕ್ಕಿದ ಅಸುರನ ಕರುಳ ಕುಕ್ಕಿ ಮಾಲೆಯ ಮಾಡಿ ಭಕ್ತನಿಗಭಯ ಸಲಿಸಿದೆ ಭಕ್ತನಿಗಭಯ ಸಲಿಸಿದೆ ಹಯವದನ ಅಪ್ಪ ನರಸಿಂಹ ದಯವಾಗು 5 ವಾಮನನಾಗಿ ನೀ ಭೂಮಿದಾನವ ಬೇಡಿ ಭೂಮಿ ಪಾದದಲಿ ಅಳೆದೆಯೊ ಭೂಮಿ ಪಾದದಲಿ ಅಳೆದೆಯೊ ಹಯವದನ ವಾಮನಾವತಾರ ದಯವಾಗು 6 ಹೆತ್ತವಳ ಶಿರ ಕಡಿದು ಕ್ಷತ್ರಿಯಕುಲ ಸವರಿ ಮತ್ತೆ ಕೊಡಲಿಯ ಪಿಡಿದೆಯೊ ಮತ್ತೆ ಕೊಡಲಿಯ ಪಿಡಿದೆಯೊ ಹಯವದನ ಅಪ್ಪ ಭಾರ್ಗವನೆ ದಯವಾಗು 7 ಸೀತೆಗೋಸ್ಕರವಾಗಿ ಸೇತುವೆ ಕಟ್ಟಿಸಿದೆ ಪಾತಕಿ ರಾವಣನ ಮಡುಹಿದೆ ಪಾತಕಿ ರಾವಣನ ಮಡುಹಿದೆ ಹಯವದನ ಖ್ಯಾತ ರಘುನಾಥ ದಯವಾಗು 8 ಕೃಷ್ಣಾವತಾರದಲಿ ದುಷ್ಟಕಂಸನ ಕೊಂದೆ ಹೆತ್ತವಳ ಬಂಧನ ಬಿಡಿಸಿದೆ ಹೆತ್ತವಳ ಬಂಧನ ಬಿಡಿಸಿದೆ ಹಯವದನ ಕೃಷ್ಣಾವತಾರ ದಯವಾಗು 9 ಉತ್ತಮ ಸತಿಯರ ಹೆಚ್ಚಿನ ವ್ರತ ಸವರಿ ಮತ್ತೆ ಹಯವೇರಿ ಮೆರೆದೆಯೊ ಮತ್ತೆ ಹಯವೇರಿ ಮೆರೆದೆಯೊ ಹಯ[ವದನ ಉತ್ತಮ ಬೌದ್ಧ ಕಲ್ಕಿ ದಯವಾಗು] 10 ಅಂಗಜನಯ್ಯನೆ ಮಂಗಳಮಹಿಮನೆ ಗಂಗೆಯ ಪೆತ್ತ ಗರುವನೆ ಗಂಗೆಯ ಪೆತ್ತ ಗರುವನೆ ಹಯವದನ ಮಂಗಳ ಮಹಿಮ ದಯವಾಗು 11 ವಾದಿರಾಜರಿಗೊಲಿದೆ ಸ್ವಾದೆಪುರದಲಿ ನಿಂತೆ ವೇದಾಂತ ಕಥೆಯ ಹರಹಿದೆ ವೇದಾಂತ ಕಥೆಯ ಹರಹಿದೆ ಹಯವದನ ವೇದಮೂರುತಿಯೆ ದಯವಾಗು 12
--------------
ವಾದಿರಾಜ
ಯೋಗಿ ವ್ಯಾಸರಾಯರೆಂಬ ವಿಚಿತ್ರ ಮೇಘ ಬೇಗ ವಿಷ್ಣುಪದವ ತೋರುಸುತ್ತ ಬಂತಿದೆಕೊ ಪ ಮಾಯಿಮತವೆಂಬ ತಾರಾಮಂಡಲವ ಮುಸುಕುತ್ತ ವಾಯುಗತಿಯಂತೆ ಗಮಿಸುತಲಿ ಹೇಯ ಕಾಮಾದಿಗಳೆಂಬ ರಜವನಡಗಿಸುತ ನಾಯಕನುಪೇಂದ್ರನಾಜ್ಞೆಯ ಪಡೆದು 1 ಅಂಗಜನಯ್ಯನೆ ಪರನೆಂದು ಫುಡಿಫುಡಿಸುತ್ತ ಕಂಗಳೆಂಬ ಮಿಂಚನೆ ನೆರಹಿ ಲೋಕದಿ ಹಿಂಗದೆ ಪರಿವ ಅಜ್ಞಾನವೆಂಬ ಕತ್ತಲೆಯ ಭಂಗಿಸಿ ಸುರಪಥವ ತೋರಿಸುತ್ತ 2 ಸಿರಿಯರಸನ ಸಮ್ಯಕ್ಜ್ಞಾನವೆಂಬ ಪೈರಿಗೆ ಬೇರುಬಿಡಿಸಿ ಹರಿಕಥೆಯೆಂಬ ಮಳೆಗರೆದು ನೆರೆ ಶಿಷ್ಯಮನವೆಂಬ ಕೆರೆತುಂಬಿಸಿ ಕರಗಳೆಂಬ ಭರಕೋಡಿ ಹರಿಸುತ ವಿಜಯೀಂದ್ರನ ಗುರು 3
--------------
ವಿಜಯೀಂದ್ರತೀರ್ಥರು