ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ನೀ ಕರೆದು ತಾರೆ ಬೇಗನೆ ಪೋಗಿ ಚನ್ನವೆಂಕಟರಾಯನ ಮೊನ್ನೆ ಆಡಿದ ಮಾತು ಒಂದೂ ನಿಜವಲ್ಲಾ ರನ್ನೆ ಈಗಲೆಪೋಗಿ ssssssಸನ್ನೆ ಮಾಡಿಬಾರೆ ಪ. ಅಂಗಜನಯ್ಯನ ಕಾಣದೆ ನಾನು ಹಿಂಗಿರಲಾರೆ ನಮ್ಮಾ ಕಂಬುಕುಚದ ಬಾಲೆ ರಂಗನಾ ಕರತಾರೆ ರಂಗು ಮಾಣಿಕದಹರಳುಂಗುರ ಕೊಡುವೆನು 1 ಕಾಲಿಗೆ ಎರಗುವೆನೆ ಕೋಮಲಮುಖಿ ಆಲಸ್ಯ ಮಾಡದೆಲೆ ನೀಲಕುಂತಳನೀರೆ | ಲೋಲನ ಕರತಾರೆ ವಾಲೆಮೂಗುತಿ ಕಂಠಮಾಲೆಯ ಕೊಡುವೆನು 2 ಮರದಿರಲಾರೆನಮ್ಮಾ ಬೇಗನೆಪೋಗಿ ನೆರವಂತೆ ಮಾಡು ನೀನು ಯರವುತನವುಬ್ಯಾಡಾಮರೆಯಲಾರೆನೆ ನಿಮ್ಮಕರವಪಿಡಿವೆ ಹೆಳವನ ಕಟ್ಟೆರಂಗೈಯ್ಯನ3
--------------
ಹೆಳವನಕಟ್ಟೆ ಗಿರಿಯಮ್ಮ
ಓಂಕಾರ ಪ್ರತಿಪಾದ್ಯ ಶಂಖಚಕ್ರಾಭಯಕರ ಬಿಂಕದಿಂದ ಬಾಕು ಟೊಂಕದಿ ಕಟ್ಟಿ ಮೆರೆವ ದೇವ 1 ಇಷ್ಟು ಜನರ ರೋಗ ತೊಟ್ಟಿ ತೀರ್ಥದಿಂದ ಕಳೆವ ಕಷ್ಟದ ಕಂಕಣ ಕಟ್ಟಿ ಮೆರೆವ ದೇವಾ 2 ದೇಶದೇಶದಿ ಬರುವ ದಾಸ ಜನರ ಅರ್ಥಿ ಕಾಸುವೀಸಕೆ ಕೊಟ್ಟು ಲೇಸಾಗಿರುವಿಯಿಲ್ಲಿ 3 ನಾಮ ತೀರ್ಥ ಪ್ರಸಾದ ಕಾಮಿಸೆ ವಿಕ್ರಯಿಸುವ ನೇಮಗಳನೆ ಕೊಟ್ಟು ತ್ರಿಧಾಮ ನಿಲಯನೆ 4 ಮಂಗಳ ಮಹಿಮನೆ ಗಂಗಾಜನಕನೆ ಅಂಗಜನಯ್ಯನೆ ವೆಂಕಟರಮಣನೆ 5 ತಾಳ ತಂಬೂರಿ ದಮ್ಮಡಿ ಮೇಳದೊಳು ದಾಸರು ವೇಳೆ ವೇಳೆಗೆ ಸೇವಿಸೆ ಕಾಳ ದೋಷವ ಕಳೆವ 6 ರಮಾ ಸೇವಿತÀ ವಿಜಯ ರಾಮಚಂದ್ರವಿಠಲ ನಿತ್ಯ ನಿನ್ನ ನಾಮಗಳನೆ ನುಡಿಸೊ 7
--------------
ವಿಜಯ ರಾಮಚಂದ್ರವಿಠಲ
ನಾರಾಯಣ ನಾರಾಯಣ ನಾರಾಯಣ ನಾರಾಯಣ ನಾರಾಯಣ ಲಕ್ಷುಮಿ ಅರಸನೇ ಪ. ನಾರಾಯಣ ಲಕ್ಷುಮಿಅರಸನೆ ಹಯವದನ ಸ್ವಾಮಿ ನೀ ಒಲಿದು ದಯವಾಗು ಅ.ಪ. ಕೊಂಡ ಕ್ರೋಧವೆಂಬ ಕನ್ನಡಿ (ಕೆಂಗಿಡಿ?) ಲೋಭಮೋಹಗಳನುವಾದೊ ಲೋಭಮೋಹಗಳನುವಾದೊ ಹಯವದನ ಸ್ವಾಮಿ ನೀ ಒಲಿದು ದಯವಾಗು 1 ಮನುಗಳ ಕಾಲದಲ್ಲಿ ಜಲದೊಳಗವತರಿಸಿ ಜಗವೇಳು ಧರೆಯ ನೆಗಹಿದೆ ಜಗವೇಳು ಧರೆಯ ನೆಗಹಿದೆ ಹಯವದನ ಮತ್ಸ್ಯವತಾರ ದಯವಾಗು 2 ಕೂರ್ಮಾವತಾರದಲಿ ಭೂಮಿಯ ನೆಗಹಿದೆ ಕೂಡೆ ಸಜ್ಜನರ ಸಲಹಿದೆ ಕೂಡೆ ಸಜ್ಜನರ ಸಲಹಿದೆ ಹಯವದನ ಕೂರ್ಮಾವತಾರ ದಯವಾಗು 3 ದುರುಳ ದಾನವಗಂಜಿ ಕೋರೆದಾಡೆಯಲಿ ನೆಗಹಿದೆ ಕೋರೆದಾಡೆಯಲಿ ನೆಗಹಿದೆ ಹಯವದನ ವರಾಹಾವತಾರ ದಯವಾಗು 4 ಸೊಕ್ಕಿದ ಅಸುರನ ಕರುಳ ಕುಕ್ಕಿ ಮಾಲೆಯ ಮಾಡಿ ಭಕ್ತನಿಗಭಯ ಸಲಿಸಿದೆ ಭಕ್ತನಿಗಭಯ ಸಲಿಸಿದೆ ಹಯವದನ ಅಪ್ಪ ನರಸಿಂಹ ದಯವಾಗು 5 ವಾಮನನಾಗಿ ನೀ ಭೂಮಿದಾನವ ಬೇಡಿ ಭೂಮಿ ಪಾದದಲಿ ಅಳೆದೆಯೊ ಭೂಮಿ ಪಾದದಲಿ ಅಳೆದೆಯೊ ಹಯವದನ ವಾಮನಾವತಾರ ದಯವಾಗು 6 ಹೆತ್ತವಳ ಶಿರ ಕಡಿದು ಕ್ಷತ್ರಿಯಕುಲ ಸವರಿ ಮತ್ತೆ ಕೊಡಲಿಯ ಪಿಡಿದೆಯೊ ಮತ್ತೆ ಕೊಡಲಿಯ ಪಿಡಿದೆಯೊ ಹಯವದನ ಅಪ್ಪ ಭಾರ್ಗವನೆ ದಯವಾಗು 7 ಸೀತೆಗೋಸ್ಕರವಾಗಿ ಸೇತುವೆ ಕಟ್ಟಿಸಿದೆ ಪಾತಕಿ ರಾವಣನ ಮಡುಹಿದೆ ಪಾತಕಿ ರಾವಣನ ಮಡುಹಿದೆ ಹಯವದನ ಖ್ಯಾತ ರಘುನಾಥ ದಯವಾಗು 8 ಕೃಷ್ಣಾವತಾರದಲಿ ದುಷ್ಟಕಂಸನ ಕೊಂದೆ ಹೆತ್ತವಳ ಬಂಧನ ಬಿಡಿಸಿದೆ ಹೆತ್ತವಳ ಬಂಧನ ಬಿಡಿಸಿದೆ ಹಯವದನ ಕೃಷ್ಣಾವತಾರ ದಯವಾಗು 9 ಉತ್ತಮ ಸತಿಯರ ಹೆಚ್ಚಿನ ವ್ರತ ಸವರಿ ಮತ್ತೆ ಹಯವೇರಿ ಮೆರೆದೆಯೊ ಮತ್ತೆ ಹಯವೇರಿ ಮೆರೆದೆಯೊ ಹಯ[ವದನ ಉತ್ತಮ ಬೌದ್ಧ ಕಲ್ಕಿ ದಯವಾಗು] 10 ಅಂಗಜನಯ್ಯನೆ ಮಂಗಳಮಹಿಮನೆ ಗಂಗೆಯ ಪೆತ್ತ ಗರುವನೆ ಗಂಗೆಯ ಪೆತ್ತ ಗರುವನೆ ಹಯವದನ ಮಂಗಳ ಮಹಿಮ ದಯವಾಗು 11 ವಾದಿರಾಜರಿಗೊಲಿದೆ ಸ್ವಾದೆಪುರದಲಿ ನಿಂತೆ ವೇದಾಂತ ಕಥೆಯ ಹರಹಿದೆ ವೇದಾಂತ ಕಥೆಯ ಹರಹಿದೆ ಹಯವದನ ವೇದಮೂರುತಿಯೆ ದಯವಾಗು 12
--------------
ವಾದಿರಾಜ
ಯೋಗಿ ವ್ಯಾಸರಾಯರೆಂಬ ವಿಚಿತ್ರ ಮೇಘ ಬೇಗ ವಿಷ್ಣುಪದವ ತೋರುಸುತ್ತ ಬಂತಿದೆಕೊ ಪ ಮಾಯಿಮತವೆಂಬ ತಾರಾಮಂಡಲವ ಮುಸುಕುತ್ತ ವಾಯುಗತಿಯಂತೆ ಗಮಿಸುತಲಿ ಹೇಯ ಕಾಮಾದಿಗಳೆಂಬ ರಜವನಡಗಿಸುತ ನಾಯಕನುಪೇಂದ್ರನಾಜ್ಞೆಯ ಪಡೆದು 1 ಅಂಗಜನಯ್ಯನೆ ಪರನೆಂದು ಫುಡಿಫುಡಿಸುತ್ತ ಕಂಗಳೆಂಬ ಮಿಂಚನೆ ನೆರಹಿ ಲೋಕದಿ ಹಿಂಗದೆ ಪರಿವ ಅಜ್ಞಾನವೆಂಬ ಕತ್ತಲೆಯ ಭಂಗಿಸಿ ಸುರಪಥವ ತೋರಿಸುತ್ತ 2 ಸಿರಿಯರಸನ ಸಮ್ಯಕ್ಜ್ಞಾನವೆಂಬ ಪೈರಿಗೆ ಬೇರುಬಿಡಿಸಿ ಹರಿಕಥೆಯೆಂಬ ಮಳೆಗರೆದು ನೆರೆ ಶಿಷ್ಯಮನವೆಂಬ ಕೆರೆತುಂಬಿಸಿ ಕರಗಳೆಂಬ ಭರಕೋಡಿ ಹರಿಸುತ ವಿಜಯೀಂದ್ರನ ಗುರು 3
--------------
ವಿಜಯೀಂದ್ರತೀರ್ಥರು
ರುದ್ರದೇವರು ದೇವತೆಗಳ ದೇವ ಮಹದೇವ ದೇವ ಆವ ನಿಮಗೆ ಸರಿಯು ಕಾವುದೆಮ್ಮನು ಸರ್ವ ಪ ಮೂರನೆ ತತ್ವದ ಒಡೆಯನು ನೀನಯ್ಯ ಕಾರುಣಿಕ ಜನರಿಗಾರ್ಹ ಭಾವಕೆ ಮಾರಮಣನಾ ನೆನೆದು ಮೈಮರೆದು ನೀ ತಾರಕಾ ಉಪದೇಶಿ ಕಾಸಿ ವಾಸಿ 1 ಗಂಗೆಯ ಧರಿಸಿ ನೀ ಭಂಗಬಡುವ ಜನರ ಪೂತನ ಮಾಡಿದ್ಯೊ ಅಂಗಜನಯ್ಯನ ಭಕುತ ಶಿಖಾಮಣಿಯೆ ನಿ ಸ್ಸಂಗ ಜನರ ಪ್ರಿಯ ಸನಕಾÀದಿ ವಂದ್ಯ 2 ಮೋಸಗೊಳಿಸುವಿಯೊ ದುರ್ಜನರ ನಾನೀಶನೆಂದು ವಾಸುದೇವವಿಠಲಗಲ್ಲದವರ ಲೇಸು ಬೋಧಿಸುವಿಯೊ ಯೋಗ್ಯರನು ನೋಡಿ ಎನ್ನಲಿ ವಾಸ ಮಾಡೊ ಎನ್ನ ಮನದೊಡೆಯ 3
--------------
ವ್ಯಾಸತತ್ವಜ್ಞದಾಸರು