ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀನಾಥ ಶ್ರೀನಾಥ ಶ್ರೀನಾಥ ಮೋಹಿನೀ ರೂಪ ತಾ ತಾಳಿದಾನೆ ಸುಕಲಾಪ ತಾನೋಡಿಸುವುದು ಹೃತ್ತಾಪ ವನಂಬೆನೆ ಹರಿಯ ಪ್ರತಾಪ ಪ ಬಂಗಾರದ ಲತೆಯಂತೆ ಬಳುಕುವಳು ಬಾಜು ಬಂದಿಗೆ ಗೊಂಡೆಗಳ ಕಟ್ಟಿಹಳು ಮುಂಗಾಲಿಲೆ ನಿರಿಗಿಗಳ ಚಿಮ್ಮುವಳು ಮೋಹನ ಮಾಲೆಗಳ ಕಟ್ಟಿಹಳು ಕುಂಭ ಕುಚದ ಭಾರಕ್ಕೆ ತಡಿಯಳೂ ತುದಿಬೆರಳಲಿ ಗಲ್ಲವನೊತ್ತಿಹಳು ಕೇಸರಿ ಗಂಧ ಹಚ್ಚಿಹಳು ಹೊಂಗ್ಯಾದಿಗೆ ಪೋಲುವ ಮೈಬಣ್ಣ ಹೊಮ್ಮಸದಲಿ ಹೋಲುವ ಈ ಹೆಣ್ಣು ಹಿಂಗಡೆಯಲಿ ವರ ಹೆರಳು ಭಂಗಾರ ಹಿಮ್ಮಡಿ ಬಡಿಯೋದು ಸರ್ಪಾಕಾರ ಭಂಗಿಸುವಳು ಬಹು ದೈತ್ಯರ ಹೃದಯ ಬಹು ವಿಲಾಸದಿ ತೋರ್ಪಳು ಸಖಿಯ ಅಂಗಜದರು ಗಂಧಕೆ ಅಳಿವೃಂದ ಆಡುತಲಿಗೆ ಝೇಂಕಾರಗಳಿಂದಾ ಸಂಗಡನೆರದ ಸುರಾಸುರರಿಂದ ಸತಿ ಚಲುವಿಂದಾ ಮಂಗಳಮುಖಿ ನಮ್ಮಂಗಳ ಮೋಹಿಸಿ ಭಂಗನ ಪಡಿಸುವಳೈ ತ್ರಿಜಗವ ಜಗಂಗಳ ಪಾಲಿಸುವಳು | ಮನ ಸಂಗಡ ಅಪಹರಿಸುವಳು | ಜಡ ಜಂಗಮಲಿಗೆ ಬಹು ಪ್ರೀತ್ಯಾಸ್ಪದಳು ಸಾರಂಗಿ | ಸಾರಂಗಿ | ಸಾರಂಗೀ ಸಾಂಬಮದ ಭಂಗಿ | ಬಹಳ ಸುಖಸಂಗಿ ಸುಂದರಿ ಲಲಿತಾಂಗಿ | ಮೋಹನಾಪಾಂಗೀ ಬಡು ಹೆಂಗಲ್ಲ ಈಕೆ ಬಹುಭಂಗ ಬಡುವಿರಿ ಜ್ವಾಕೆ || ಶ್ರೀನಾಥ || 1 ಕನ್ನಡಿಯಂದದಿ ಪೋಲುವ ಕಪೋಲ ಕರ್ಪೂರ ರಂಜಿತ ವರ ತಾಂಬೂಲ ಕಣ್ಣಿಗ್ಹಚ್ಚಿಹಳು ಕನಕದ ಕೋಲಾ ಕಾಮಿನಿಯಂದಡಿ ತೋರ್ಪಳು ಜಾಲಾ ಬಿನ್ನುಡಿ ಹಾಕಿದ ಚಂದ್ರದ ಕುಪ್ಪುಸ ಚಪಲಾಕ್ಷಿಯ ನೋಟದ ಬಲು ರಭಸಾ ಕರ್ಣಾಯತ ನೇತ್ರಗಳ ವುಲ್ಲಸಾ ವುನ್ನಂಕಾ ನಾಶಿಕದ ಬುಲಾಕು ವಜ್ರಮಯದ ವರಮಖರೆದ ಬೆಳಕು ಕರ್ಣದಿ ರತ್ನಖಚಿತ ತಟಾಂಕಾ ಕುಸುರು ಹಚ್ಚಿದ ಬಾಹುಲಿಗಳ ಬಿಂಕ ಸಣ್ಣ ನಡುವಿನೊಯ್ಯಾರದ ನಲ್ಲೆ ಸರಸಿಜನಾಭನ ಸೃಷ್ಟಿ ಇದಲ್ಲೆ ಬಣ್ಣಿಸಲಳವಲ್ಲವು ಸೌಂದರ್ಯ ಬಿಡಿಸುವುದು ಕೇಳ ಮುನಿಗಳ ಧೈರ್ಯ ಬೆಣ್ಣೆಯಂತೆ ಮೃದುವಾದ ಶರೀರ ಭಾಗ್ಯಹೀನರಿಗೆ ಇದು ಬಲುದೂರಾ ಕನ್ನೆ ಶಿರೋಮಣಿ | ಕಾಮನ ಅರಗಿಣಿ ಕೌಸ್ತುಭಮಣಿಗಳ ಹಾರೇ ಸುವರ್ಣವರ್ಣ ಸುಕುಮಾರೇ ಮೋಹನ್ನರಸನೆ ಗಂಭೀರೇ ಮೋಹನ್ನೆ ಮಧುರ ಮಧುರಾಧರ ಮಂಜುಳ ವಕುಜಲರೆ ಬಹೋಚ್ಚಧರೆ ಛÅಪ್ಪನ್ನ ಛಪ್ಪನ್ನ ದೇಶಗಳು ಚಲುವರಿದ್ದರೂ ಚಪಲಾಕ್ಷಿಗೆ ಸಮರಾರೇ ಗತ ಪುಣ್ಯದಿಂದ ಕೈಸೇರುವಳಲ್ಲದೇ ಕಾಮಾಂಧsÀರಿಗತಿ ದೂರೇ ಈ ಹೆಣ್ಣು | ಈ ಹೆಣ್ಣು | ಈ ಹೆಣ್ಣು ಸುರಾಸುರರನ್ನೆ ಮೋಹಿಸಳು ಚನ್ನ ಮನಕೆ ತರಳಿನ್ನ ಬಿಡು ವಿಷದ್ಹಣ್ಣು ಅಪೇಕ್ಷಿಸೆ ಮಣ್ಣು ಕೂಡಿಸುವಳು ತನ್ನ ಜನರಿಗಮೃತಾನ್ನ ಕೊಡುವಳು ಮಾನ್ಯಳು ಪರಮಸೋನ್ಯಳು | ಸುಗುಣ ಅರಣ್ಯ ವಿನಾಶೇ ಬ್ರಹ್ಮಾಂಡಜಾದ್ಯಂಗೀತೇ || ಶ್ರೀನಾಥ || 2 ಹುಡುಗಿ ನೋಡು ಹೊಸ ಪರಿಯಾಗಿಹಳು ಹದ ಮೀರಿದ ಯವ್ವನದಿ ಮೆರೆವಳು ಅರಳು ತುಂಬಿಹಳು ಮಂದಸ್ಮಿತದಲಿ ಮೋಹಿಸುತಿಹಳು ಬೆಡಗಿನಿಂ ನುಡಿಯ ಸವಿಯ ತೋರುವಳೂ || ಬಹು ವಿಧದಾಭರಣಗಳನ್ನಿಟ್ಟಹಳು ನಡಿಗಿಗಳಿಂದ ನಾಚುತ ಹಂಸ ನವಮಣಿ ಚಂದ್ರರ ಕೆಡಿಸಿತು | ನಂಬೆ ಜಡಿತ ಮುತ್ತಿನ ತಾಯಿತ ಕಠಾಣೀ ಜಗವನು ಮೋಹಿಸುವಳು ಸುಶ್ರೋಣೀ ಬಿಂಕದ ನುಡಿ ಸೊಬಗಿನ ಚಂದಾ ಅಡಗಿದವೆ ಪಿತಭೃಂಗಗಳಿಂದಾ ಹಿಡಗಿ ಮರಗಿ ಮಧ್ಯಶಮನ ಮರಗೀ ಕೇಸರಿ ಬಹು ಸೊರಗೀ ಉಡುಪತಿ ಕೋಟಿ ಪ್ರಭ ಧಿಕ್ಕಾರಾ ಉಲ್ಲಾಸದಿ ಮನ ಮುಖ ಚಂದಿರಾ ನಡಿಗಗಳಿಂದೆನೆ ರಾಜಿಸುತಿ ಹೋದೆ ನವರತ್ನದಯದೆ ಮಯದ ಫಣಿಕಟ್ಟು ಮೇಲ್ಪೊಡವಿವೊಳಗೆ ಪಡಿಗುಣಕ ಕಡಿಯಿಲ್ಲಾ ಸುಳ್ಳುನುಡಿಯಿಲ್ಲಾ ಯೆನ್ನೊಡೆಯಾ ಶ್ರೀ ವಿಜಯ ವಿಠ್ಠಲನಲ್ಲದೆ ಎಲ್ಲಿಂದ ಬಂದಳೋ ಕೆಳದೀ || ಶ್ರೀನಾಥ || 3
--------------
ವಿಜಯದಾಸ