ಎಂದಿಗೆ ದೊರಕುವನೋ ಪ.
ಎಂದಿಗೆ ದೊರಕುವ ಸುಂದರ ಪುರುಷನು
ಒಂದು ಗಳಿಗೆ ಯುಗ ಒಂದಾಗಿ ಕಳೆದೆನು ಅ.ಪ.
ಸರಿರಾತ್ರಿ ವೇಳ್ಯದಲಿ ಮೆಲ್ಲನೆ ಒಂದು
ಸರಸವಾಡುತಲಿ
ಪರಿಪರಿ ವಿಧದಲಿ ಸ್ಮರನ ಕಲೆಯ ತೋರಿ
ವಿರಹಗೊಳಿಸಿ ನಾಳೆ ಬರುವೆನೆನ್ನುತ ಪೋದ 1
ಕೌಸ್ತುಭ ರತ್ನಾ-
ಲಂಕೃತ ಶುಭಗ್ರೀವನ
ಶಂಕರಾರ್ಚಿತನು ಮೀನಾಂಕಜನಕ ನಿಷ್ಕ-
ಲಂಕ ಮಹಿಮನು ಶ್ರೀವೆಂಕಟರಮಣನು 2
ಅಂಗಜಕೋಟಿರೂಪ ಪರಮ ಸದಯಾ-
ಪಾಂಗನಿರತ ನಿರ್ಲೇಪ
ಮಂಗಲ ಚರಿತ ಭುಜಂಗಶಯನ ನರ-
ಸಿಂಗ ವರದ ಮಾತಂಗ ಶ್ರೀರಂಗನು3
ಚಂದಿರಶತವದನ ಶೋಭಿಪ ನವ
ಕುಂದ ಕುಟ್ಮಲರದನ
ಸಿಂಧುಶಯನ ಮುಚುಕುಂದಾಪ್ತ ಸಚ್ಚಿದಾ-
ನಂದ ಗೋವಿಂದ ಮುಕುಂದ ನಂದನಕಂದ4
ಅಕ್ಷರಾರ್ಚಿತ ದೇವನು ಶರಣ ಜನ
ಪಕ್ಷ ಪರಾತ್ಪರನು
ಪಕ್ಷೀಂದ್ರ ತುರಗ ಪದ್ಮಾಕ್ಷ ತ್ರಿಲೋಕ ವಿ-
ಲಕ್ಷಣಮೂರ್ತಿ ಶ್ರೀಲಕ್ಷ್ಮೀನಾರಾಯಣ 5