ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತನಾಡಿಸೋ ತಮ್ಮ ಮೃದÀುವಚನದಿ ಪ ಈತನನು ನೀನೀಗ ಸ್ನೇಹಭಾವದಲಿ ಅ.ಪ. ಕಪಿರಾಜ ಸುಗ್ರೀವ ಸಚಿವ ಶೇಖರನೀತ ವಿಪುಲಮತಿ ಸಂಯುತನು ವ್ಯವಹಾರ ಚತುರ ಅಪಶಬ್ದವಿನಿತಾದರಿಲ್ಲವೀತನ ಮುಖದಿ ಸುಪವಿತ್ರದಾಕಾರ ಶೋಭಿತ ಸುಲಕ್ಷಣನು 1 ನಾಲ್ಕು ವೇದಾಧ್ಯಯನ ಮಾಡಿದವನಲ್ಲದೊಡೆ ನಾಲಿಗೆಯೊಳೀರೀತಿ ನುಡಿಯಲಳವೆ ವ್ಯಾಕರಣ ಶಾಸ್ತ್ರದಲಿ ಪಾಂಡಿತ್ಯದಿವಗಿನ್ನು ವಾಕು ಈ ಪರಿಬಹುದೇ 2 ಮುಖನೇತ್ರ ಭ್ರೂಮುಖ್ಯ ಅಂಗಚೇಷ್ಟೆಗಳಿಲ್ಲ ಸುಖ ಮಧ್ಯಸ್ಥಾಯಿಯಲಿ-ಮಾತುಮಿತವು ಅಕಳಂಕ ಶ್ರೀ ಕರಿಗಿರೀಶನ ಪದಕಿಂಕರನು ಸಕಲಲಕ್ಷಣಯುಕ್ತನಿವನತುಳ ಶಕ್ತ 3
--------------
ವರಾವಾಣಿರಾಮರಾಯದಾಸರು