ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧೀನ ಸ್ತೋತ್ರ ನಿನ್ನಧೀನವು ಎಲ್ಲ ಘನ್ನ ಸುಮಹಿಮನೆ ಪ ಬೊಮ್ಮನ ಪಿತ ನೀನು ಅಮ್ಮ ಲಕುಮಿಪತೆ ಎಮ್ಮನು ಪೊರೆ ಶ್ರೀನಿವಾಸ 1 ಬೃಹದಣುರೂಪನೆ ಮಹದಣು ಸರ್ವದಿ ಬಹಿರಂತರದಿ ಇಹ ಮಹಾವಿಷ್ಣು ಪರಮಾತ್ಮ 2 ಸಿರಿಯು ನಿನ್ನೊಡಗೂಡಿ ಚರಿಪಳು ಎಲ್ಲೆಲ್ಲೂ ಸರಿ ಯಾರು ನಿನಗಿಲ್ಲ ಪರರುಂಟೆ ಸಿರಿಸೇವ್ಯ 3 ಅಜ ನರಹರೇ ನಮೋ ಸೃಜಾಸೈಜ ಅಂಗಗಳೊಳ್ ಜ್ವಲಿಸುವೆ ಶಕ್ತೀಶ 4 ಪೋಷ ಕಲುಷಹ ಶೇಷಗಿರೀಶನೆ ದೋಷವೇನಿಲ್ಲದ ಹೃಷೀಕೇಶ ಕ್ಷೇತ್ರಜ್ಞ 5 ಏಕಮಾದ್ವಿತೀಯ ಸರ್ವೋತ್ತಮ ಭೂಮನ್ ಸಾಕಲ್ಯ ನಿನ್ನ ತಿಳಿಯಲು ಅಶಕ್ಯ 6 ಪ್ರಾರ್ಥಿಸಲರಿಯೆ ನಾ ದಯದಿ ನೀ ಸಲಹೆನ್ನ ವೃತತಿಜಾಸನ ತಾತ ಪ್ರಸನ್ನ ಶ್ರೀನಿವಾಸ 7
--------------
ಪ್ರಸನ್ನ ಶ್ರೀನಿವಾಸದಾಸರು