ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೊಲ್ಲತಿಯರ ಕಣ್ಣದೃಷ್ಟಿ ಮಗಗಾಯಿತಮ್ಮ ಬಹು ನಲ್ಲೆಯರು ಬಂದು ಮೆಚ್ಚುಮದ್ದು ಮಾಡಿ ಹೋದರಮ್ಮ ಪ. ಅಂಗಕೆ ಒಳಿತಿಲ್ಲವಮ್ಮ ಕಂಗಳು ಮುಚ್ಚಲೊಲ್ಲನಮ್ಮ ಹೆಂಗಳ ನೋಡುತಲೆ ಚಟ್ಟಿಕ್ಕಿದನಮ್ಮ ತಂಗಿ ನೀರು ಎರೆದೆವಮ್ಮ ತುಂಗಗಾತ್ರ ಎದ್ದು ನಮ್ಮ ಭಂಗಪಡಿಸುತ ಬಾಯ ತೆರೆದನಮ್ಮ 1 ನೀನು ಮೈಯ ನೋಡಮ್ಮ ತನುವು ಕಿರಿದಾಯಿತಮ್ಮ ಮೊಲೆಯಾನ ಕೊಡಲಿ ತಾಯ ನೋಡನಲ್ಲಮ್ಮ ಅನ್ನವ ಕೊಳಲೊಲ್ಲನಮ್ಮ ಅತಿಭೀತನಾದ ದೈತ್ಯ ಕನ್ನೆ ಮೊಲೆಹಾಲನುಂಡು ಬೆಳೆದನಲ್ಲಮ್ಮ 2 ನಮ್ಮ ಮಾತು ಕೇಳನಮ್ಮ ಒಮ್ಮೆಗೆ ಮೈಹೊದಿಯ ನಮ್ಮ ಸುಮ್ಮನೆ ಘೊರಸುತಾನೆ ಮಲಗನಲ್ಲಮ್ಮ ಬೊಮ್ಮಜೆಟ್ಟಿಗೆ ಮಾಡಿದೆವಮ್ಮ ಒಮ್ಮೆಗಿಷ್ಟೆಲ್ಲವಾಯಿತಮ್ಮ ನಮ್ಮ ಹಯವದನಗಿನ್ನು ಅಂಜಿಕಿಲ್ಲಮ್ಮ 3
--------------
ವಾದಿರಾಜ
ರಂಗಧ್ಯಾನ ಶ್ರೀರಂಗನ ಧ್ಯಾನ ಮುಕ್ತಿಗೆ ಸಾಧನ ಮಂಗಲಮೆನಿಪ ಅಂಗಕೆ ಶೋಭೆ ಪ ಮನುಮುನಿ ಸುರಗಣ ಮನಮಂದಿರನ ನೆನವನುದಿನದಲಿ ಮನಕಚಲಾನಂದನ 1 ಉರಗಶಯನ ಗಿರಿಧರ ಮುರಾರಿ ಚರಣಸ್ಮರಣ ಸ್ಥಿರ ಪರಲೋಕಕರವಶ 2 ಆ ಮಹಾಮಹಿಮ ಸ್ವಾಮಿ ಶ್ರೀರಾಮ ನಾಮಭಜನ ಸದಾ ಕ್ಷೇಮಸಂಪದ ಸುಖ 3
--------------
ರಾಮದಾಸರು
ಎಂಥ ಶ್ರೀಮಂತಾನಂತನೆ ಶ್ರೀಕಾಂತೆಯ ಕಾಂತಎಂಥ ಶ್ರೀಮಂತಾನಂತನೆ ಪ.ಬೊಮ್ಮನು ಹೆಮ್ಮಗ ಮೊಮ್ಮ ಮೃಡಮ್ಮರಿಮೊಮ್ಮ ಶಚಿಮನೋರಮ್ಮ ಸ್ಮರಮ್ಮಗಅಮ್ಮರಸಮ್ಮೂಹ ನಿಮ್ಮನುಗಮ್ಯರುನಮ್ಮೊ ನಮ್ಮೊ ಪರಮ್ಮ ಮಹಿಮ್ಮ 1ಪನ್ನಗಾಪನ್ನ ಶಯನ್ನಕ್ಕೆ ಬೆನ್ನೀವಪನ್ನಗಾಶನ್ನ ವಾಹನ್ನ ರತುನ್ನ ಭವನ್ನ ಸುಖೋನ್ನತರನ್ನಾಗರ ನಿಜನಿನ್ನಿದಿರಿನ್ನಾರೆನ್ನೊಡೆಯನ್ನೆ 2ಬಲ್ಲ ಕೈವಲ್ಯಜÕರೊಲ್ಲಭ ಸುಲ್ಲಭಬಲ್ಲಿದಕ್ಷುಲ್ಲರದಲ್ಲಣನಲ್ಲವೆಹುಲ್ಲಲುಗಲಳವಲ್ಲ ನೀನಿಲ್ಲದೆಸಲ್ಲದು ಸೊಲ್ಲದು ನಿಲ್ಲದಿದೆಲ್ಲ 3ಅಂಗಕೆ ಹೆಂಗಳಾಲಿಂಗನಾಂತ ಗಡಮಂಗಳಾಪಾಂಗ ವಿಶ್ವಂಗಳ ಮಂಗಳಸಿಂಗರದುಂಗುಟ ಸಂಗದಗಂಗೆ ಜಗಂಗಳಘಂಗಳ ಹಿಂಗಿಪಳು ರಂಗ 4ಅಂಬರದಂಬುಗೆ ತುಂಬೆ ವಿಶ್ವಂ ಬಸುರಿಂಬಿಲಿ ಇಂಬಿಟ್ಟುಕೊಂಬ ಕೃಪಾಂಬುಧಿಡಿಂಬಕದಂಬದ ಬಿಂಬ ಪ್ರಸನ್ವೆಂಕಟನಂಬಿದರ್ಗಿಂಬೀವನೆಂಬ ಕುಟುಂಬಿ 5
--------------
ಪ್ರಸನ್ನವೆಂಕಟದಾಸರು