ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಂಕಜ ಪತಿ | ಪಂಕಜ ಸಖ ಸಂಕಾಶಾನೇಕಾ | ಸಂಕಟಳಿದು ನಿಃಶಂಕನ ಮಾಡೊ | ಅಂಕೆಯವನೆಂದು || ಪ ಬಂದೆ ಎದುರಿಲಿ ನಿಂದೆ ಸಿರಬಾಗಿ | ಒಂದೆ ವಂದನೆಯೆಂದೆ ಲೋಕದ ತಂದೆ ಮನಸಿಗೆ | ತಂದೆ ನಿನಗ ಇಂದೆ ಅಂದದನು | ಹಿಂದೆ ಯೆಸಗಿದ ದ್ವಂದ್ವ ಪಾಪಕೆ ಒಂದೆ ನಿನ್ನಂಘ್ರಿ | ಎಂದೆಗೆಂದಿಗೆ ಮುಂದೆ ಜನನಗಳು 1 ನೋಡು ಎನ್ನ ಕೂಡಾಡು ದಯವನ್ನು | ಮಾಡು ಮುದದಿಂದಲಾಡು ಮಾತನು | ನೀಡು ಕರುಣವ | ಹೋಡುಗಾರರು ಬೀಡಿನೊಳಗಿದ್ದು | ಕಾಡುವದು ನಾನಾಡಲೇನು | ಈಡು ನಿನಗೆಲ್ಲಿ ನಾಡೊಳು ಕಾಣೆ ಮೂಡಲಾದ್ರಿ ನಿಲಯಾ 2 ಸಾರಿದೆನೊ ಮನಸಾರ ನಿನ್ನಂಘ್ರಿ ಸಾರಾ| ಸಾರವೆಂಬದಾಸಾರವನು ನೂಕಿ | ಸಾರ ಹೃದಯರ ಸಾಲೆಲಿರಸೆನ್ನ | ಕಂಸಾರಿ ಪ್ರತಿದಿನ | ಸಾರಥಿಯಾಗೊ ಸಾರಿಸಾರಿಗೆ | ಸಾರಬೋಕ್ತಾ ವಿಜಯವಿಠ್ಠಲ ಕೆಲಸಾರದೆ ಸಾರಲಿರೊ 3
--------------
ವಿಜಯದಾಸ