ಜಯರಾಯರ ನೋಡಿರೋ ಸಜ್ಜನರೆಲ್ಲ
ಜಯರಾಯರ ನೋಡಿರೋ ಪ
ಜಯರಾಯರ ನೋಡಿ ಜಪಿಸಿ ಮನದಿ ಪಾಡಿ
ಜಯವಾಗುವುದು ನಿಮಗೆ
ಭಯನಾಶ ಸಂತತ ಅ.ಪ
ದುರುಳಮತವೆಂಬೊ ಕರಿಗೆ ಅಂಕುಶವಿತ್ತು
ಸುರಸಾದ ಗ್ರಂಥ ಆನಂದಮುನಿ
ವಿರಚಿಸಿ ಇರಲಾಗಿ ಪರಮಭಕ್ತಿಯಿಂದ ವಿ
ಸ್ತರ ಮಾಡಿದಾ ಕರದ ಕನ್ನಡಿಯಂತೆ 1
ವಾದಿಗಳನ್ನೆಲ್ಲಾ ಜೈಸಿ ಡಂಗುರ ಹೊಯ್ಸಿ
ಭೇದಾರ್ಥಜ್ಞಾನ ಸತ್ಯವೆನಿಸಿ
ಈ ಧರಿಯೊಳಗೆ ಹರಿಪರ ದೈವವೆಂದು
ಸಾಧಿಸಿ ಉದ್ದಂಡವಾದ ಗುರುತಿಲಕ 2
ಅಕ್ಷೋಭ್ಯತೀರ್ಥರ ಕರದಿಂದ ಜನಿಸಿ
ಮೋಕ್ಷಕೆ ಜಯ ಪತ್ರಿಕೆ ಕೊಡಿಸಿ
ಸಿರಿ ವಿಜಯವಿಠ್ಠಲನನ್ನ
ನೀಕ್ಷಿಸುವದಕೆ ಉಪದೇಶ ಕೊಡುವ ಋಷಿ
ಶ್ರೀ ಮಧ್ವೇಶಾರ್ಪಿತವು3