ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃತ್ತಿವಾಸನ ಪ್ರಿಯ ಪುತ್ರನೆ ಗುಹ ಸ- ರ್ವೋತ್ತಮ ಚಿದ್ರೂಪ ಪ ಚಿತ್ತಜ ಪ್ರತಿರೂಪಾ ಪ್ರತಾಪಾಅ.ಪ ದೀನತನದಿ ಕಡುಬೇನೆಯ ಪಡುತಲಿಹೀನಮನುಜನೆನ್ನಾ | ದಾನಿಯಾಗಿಹ ಕರುಣಾನಿಧಿ ಕೈಪಿಡಿ ಧ್ಯಾನಿಪೆ ನಾ ನಿನ್ನ ಪ್ರಸನ್ನ 1 ಸುತ್ತಮುತ್ತಿರುವ ವಿಪತ್ತುಗಳಾ ಭಯ ಮೆತ್ತಿಕೊಂಡಿದೆ ತಾನೇ ಸತ್ವಶಾಲಿಯೇ ನೀ ಕಿತ್ತೊಗೆಯದಿರೆ ಅ- ನ್ಯತ್ರ ಗತಿಯ ಕಾಣೆ ನಿನ್ನಾಣೆ 2 ಪಾಶ ಅಂಕುಶಧರ | ನಾ ಸಹೋದರ ಪಾವಂ- ಜೇಶ ಮಹಾನುಭಾವ | ದಾಸರಿಗೊದಗುವ ತ್ರಾಸವ ಕಳೆ ಸ- ರ್ವೇಶನೆ ಮಹದೇವಾ | ದೇವರ ದೇವಾ 3
--------------
ಬೆಳ್ಳೆ ದಾಸಪ್ಪಯ್ಯ