ಜಯ ಜಯ ಮಂಗಳಜಯ ಮಂಗಳ ಸುಂದರಿ ಶಾಂಭವಿಗೆ ಪ
ಕಮಲ ಮುಖಿಯಳೆಹೊಳೆವ ಮುತ್ತಿನ ವಾಲೆಯಳೇನಳಿನ ಮುಖಿಯರ ನಡುವೆ ಕುಳಿತುಥಳ ಥಳ ಹೊಳೆಯುವಳೇಒಳಹೊರಗೆ ತನ್ನ ಪ್ರಭೆಯನು ತೋರಿನೋಡಿ ಓಲಾಡಿ ತಾ ನಗುವವಳೇ 1
ಪಂಚರತ್ನದಾ ಪದಕವನಿಟ್ಟು ಪದ್ಮಾಸನದಲ್ಲಿ ಕುಳಿತಿಹಳೇಮಿಂಚುವ ಮೂಗುತಿ ಮೂಗಲಿ ಹೊಳೆಯುತಮಿಗಿಲಾದಾಭರಣವ ಧರಿಸಿಹಳೇಅಂಚು ರಂಗಿನ ಸೀರೆಯನುಟ್ಟುಅನಂತ ರೂಪವ ತೋರಿಹಳೇಅಂಚೆ ನಡೆಯಲಿ ನಡೆಯುತ ನಲಿಯುತಸದಾ ಮತ್ತಳಾಗಿರುವವಳೇ2
ರತ್ನದ ಉಡಿದಾರ ಚಿನ್ನದ ಚಿಂತಾಕಹೊನ್ನಿನ ಡಾಬನು ತೊಟ್ಟಿಹಳೇಎಡೆ ಎಡೆಗೆ ತಾ ಧರಿಸಿಹಳೇಸಣ್ಣ ಬಣ್ಣದ ಕುಪ್ಪಸ ತೊಟ್ಟುಮುಗುಳ್ನಗೆ ಬೀರುತ ಕುಳಿತಿಹಳೇಧನುರ್ಬಾಣ ಪಾಶವ ಕೈಯಲಿ ಅಂಕುಶಆಯುಧ ಪಿಡಿದಿಹಳೇ 3
ದುಂಡು ಕೈಯವಳೇ ಸುಂದರ ಕಾಯಳೇಚಂಡ ಮುಂಡ ಸಂಹಾರಕಳೇಮಾಂಡಲಿಕಳೇ ಮಹದ್ಭೂತಳೇಮಹಾಯೋಗಿ ವಿಲಾಸಳೇದಂಡಿ ಕಿರೀಟಳೇ ದಂಡೆಯ ಮುಡಿದಿಹಗೊಂಡೆಯಂದೊಲಿದಾ ಜಡೆಯವಳೇಹಿಂಡು ಹಿಂಡಾದ ದೈತ್ಯರನೆಲ್ಲರ ಖಂಡಿಸಿದೇವಿ ತಾ ಕೊಂದಿಹಳೇ 4
ಆದಿರಹಿತಳೇ ಅಧ್ವಯ ರೂಪಳೇಅನಂತ ಕೋಟಿ ಪ್ರಭಾರೂಪಳೆಶುದ್ಧ ಬುದ್ಧಳೇ ನಿತ್ಯಮುಕ್ತಳೇಚಿದಾನಂದ ರೂಪಳೇಸದ್ಯೋಜಾತಳೇ ಸರ್ವಾತೀತಳೆಸಿದ್ಧ ಪರ್ವತ ಬಗಳೇಶುದ್ಧಾದ್ವೈತಳೆ ಸುಷುಮ್ನನಾಳಳೆಸೂಕ್ಷ್ಮವೆನಿಸುವಳೇ 5