ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೈ ಜೈ ವೆಂಕಟರಾಯ ಸಲಹು ಗಡ ಪ ಶುಭ ಕಾಯ ಐಹಿಕ ಮಹಮಾಯವ ಬಿಡಿಸಯ್ಯಅ.ಪ ಪಂಕಜಾಕ್ಷ ಹರಿ ಸಂಕರುಷಣ ಭವ ಸಂಕಟ ಪರಿಹಾರ ಶುಭಕರ ಶಂಖಶಕ್ರಧರ ಮಂಕುದನುಜಹರ ಕಿಂಕರಘದೂರ ಶಂಖಸುರನ ಬಲು ಬಿಂಕಮುರಿದ ಬಲದಂಕ ಅದಟವೀರ ಶೂರ ಅಂಕುರಿಸೆನ್ನೊಳಾತಂಕತಾರದೆ ಪೊರೆ ಲಂಕಾ ವಿಜಯಕಾರ 1 ದಾತ ಮೂರುಜಗನಾಥ ಪರಮ ಅ ದ್ಭೂತ ಮಹಿಮೆಗಾರ ಚದುರ ಪ್ರೀತ ಭಕುತ ಭವಭೀತರಹಿತ ಮಾಯಾ ಪೂತನಿ ಸಂಹಾರ ನೀತಿಕೋವಿದ ವಿಧಿತಾತ ಅಸಮ ವಿ ಖ್ಯಾತ ಕರುಣನಿಕರ ಸುಂದರ ಘಾತಿಸಿ ಕಂಸನ ಮಾತಪಿತರ ಕಾಯ್ದ ಪಾತಕ ನಿವಾರ 2 ಬಾಲನಂತರಿಯದೆ ಆಲಯಗಳ ಪೊಕ್ಕು ಪಾಲು ಮೊಸರು ಕದಿದ ಸವಿದ ಬಾಲೆರುಡುವ ದುಕೂಲ ಕದಿದು ತಾ ಮೇಲು ಮರವನೇರ್ದ ಕಾಲಿಂದಿ ಧುಮಕಿದ ಕಾಳಿಯಮೆಟ್ಟಿದ ಕಾಳರಕ್ಕಸರೊದೆದ ಸದೆದ ಲೀಲಾ ಜಾಲ ನಂದ ಬಾಲನಾಗಿ ಬಲು ಬಾಲಲೀಲೆಗೈದ 3 ಪರಮ ಪರಾತ್ಪರ ಪರಮಪುರುಷ ಸಿರಿ ಪರಮ ಪಂಚಪ್ರಾಣ ದುರಿತ ಹರಣಜನನಮರಣ್ಹರಸುರವಿನಮಿತ ಧರಣಿಗಧಿಕ ತ್ರಾಣ ಕರಿಧ್ರುವರಿರ್ವರನು ಭರದಿ ನೀಡಿ ನಿಂತು ಪೊರೆದ ಪಾಂಚಾಲೀಮಾನ ಜಾಣ ಶರಣಜನರ ಮೈನೆರಳು ನಿಗಮಾತೀತ ನಿರಂಜನ 4 ಸೋಮವದನ ಸತ್ಯಭಾಮಾರಮಣ ಸುಖ ಧಾಮ ಸುಜನಹೃದಯನಿಲಯ ಕಾಮಜನಕ ಪುಣ್ಯನಾಮ ರಕ್ಕಸಕುಲ ಭೀಮ ಪಾಲಿಸಭಯ ಶಾಮವರ್ಣ ಮಮಸ್ವಾಮಿ ಭಜಿಪೆ ಶ್ರೀ ರಾಮಪಿಡಿಯೋಕಯ್ಯ ಸದಯ ಕಾಮಿತ ವರ ಸುಪ್ರೇಮದಿ ಇತ್ತೆನ್ನ ಪ್ರೇಮದುದ್ಧರಿಸಯ್ಯ 5
--------------
ರಾಮದಾಸರು