ಕಾಮಕೋಟಿ ಸುಂದರಾ | ತಿರುಪತಿಯಸ್ವಾಮಿ ತೀರ್ಥಮಂದಿರಾ ಪ
ಕಾಮಜನಕ ಭಕ್ತಪ್ರೇಮಿ ಭವಾಟವಿಧೂಮಕೇತು ಹೃತ್ | ಧಾಮದಿ ನೆಲಿಸೋ ಅ.ಪ.
ವೃಷಭಾಚಲಾ | ಸನ್ನಿಲಯನೆವೃಷಭಾ - ಬಲಾ ||ಒಸೆದು ಪರಿಕಿಸುತ || ಅಸುರನ ಸವರುತಅಸಮಗಿರಿಗೆ ನೀ | ಅಸುರನ ಪೆಸರಿತ್ತೆ 1
ಭಂಜನ ಶರದಿಜೆಕಂಜಜಾಕ್ಷಿ ಪ್ರಿಯ | ಅಂಜನಿವರದಾ 2
ಶೇಷಾ _ ಭೂಧರಾ | ಮನಸಿನ ಬಹುಕ್ಲೇಶಾ _ ಅಪಹರ ||ಶೇಷದೇವ ಮದ | ಲೇಸು ಹರಿಸಿ ಅವನಾಶೆ ಸಲಿಸಿ ಹರಿ | ಶೇಷಾಚಲನಾದೇ 3
ವೆಂಕಟಾಚಲಾ | ಮಾಧವನಾಸಂಕಟಾಗಳಾ ||ಅಂಕುರಿಸದೆ ನಿ | ಷ್ಪಂಕನೆಂದೆನಿಸಿಕಿಂಕರ ತನಯಳ | ಕಂಕಣ ಕಟ್ಟಿದೆ 4
ಶ್ರೀವರ - ಭೂವರಾ | ಪೊರೆಯುವೆ ನೀಜೀವರಾ - ಅಂತರಾ ||ಜೀವನಾಮಕನಾಗಿ | ಜೀವ ಭಿನ್ನ ಹರಿಕೈವಲ್ಯದ ಗುರು | ಗೋವಿಂದ ವಿಠಲ 5