ಗೃಹಸಮರ್ಪಣೆ
ಪುರುಷಾರ್ಥದಾಯಿ ಶ್ರೀವರ ನೀ ನಿಲಯದಿ
ಸ್ಥಿರವಾಗು ಕರುಣಾನಿಧೆ
ವರದೇಶ ನಿಜಪಾದ ಸರಸೀಜ ಮಕರಂದ
ನಿತ್ಯ ಪ.
ಆವ ಕಾಲಕು ಸಿರಿದೇವಿಯರಸ ನೀನೆ
ಕಾವಲಾಗಿರುವಿ ಎಂದು ಭಾವಶುದ್ಧದಿ ನಿನ್ನ
ಸೇವಾರತಿಯನಿತ್ತು ಪಾವನಗೊಳಿಪ ಬಂಧು ಕಾರುಣ್ಯಸಿಂಧು
ವಿರಿಂಚಿ ಭವಾಹಿ ವಿಪತಿ ಸು-
ರಾವಳೀಶಯವೆಂದು ರವಿಮುಖ
ದೇವ ಋಷಿಗಣ ದೇವ್ಯ ನಿನ್ನ ಕ-
ನಿತ್ಯ ಬಯಸುವೆ 1
ನಿನ್ನ ಕಟಾಕ್ಷ ಸಂಪೂರ್ಣವಾಗಿರಲೆನ-
ಗನ್ಯರ ಭಯವಿಲ್ಲವು ಪರಮ ಸುಗು-
ಣಾರ್ಣವ ನಿನಗೆಲ್ಲವು ತಾ ಸೇರಿರುವವು
ಪನ್ನಗಾರಿ ಧ್ವಜ ಪರೇಶ ಮ-
ಹೋನ್ನತಿ ಪ್ರದ ಮೂಜಗದ್ಭವ
ನಿನ್ನ ದಾಸರದಾಸನೆಂದರಿ-
ದೆನ್ನ ಮೇಲ್ಕಡೆಗಂಣನಿರಿಸುತ 2
ಪಂಕಜಾಲಯ ಭೂವರ ಕಿಂಕರಾಧಾರನಿ:-
ಶಂಕ ಕೃಪಾಕರ ಅಂಕಿತ ಕೊಡು ಸಾದರ ಬಲಭದ್ರ ಸೋದರ
ಶಂಕರನೆ ಶುಭಕರ ಕಮಲವನು
ಶಂಕಿಸಿದೆ ಶಿರದಲ್ಲಿ ಕಲ್ಪಿಸಿ
ಅಂಕುರಿತ ಭಯ ಬಿಡಿಸು ಸಕಲಾ-
ಶಂಕವಾರಣ ವೆಂಕಟೇಶ್ವರ 3