ಕಣ್ಣು ಮುಚ್ಚಿದರೂ ಕಾಣ ಬರುತಿದೆ ಪ್ರಣವ ಸ್ವರೂಪ |ಭೃಕುಟಿ ಮಧ್ಯದಲಿ ಪ್ರಕಟವಾಗಿದೆ ಉದಯವಾಗಿ ರೂಪ ಪ ನಾಸಿಕಾಗ್ರದಲಿ ವಾಸವಾಗಿದೆ ಬೀಸುವ ಗಾಳಿಗೆ ಭಿನ್ನವಿಲ್ಲದೆ |ಏಸೇಸು ದಿನ ತಪವ ಮಾಡಿದರೂ ಯೋ- ಗೇಶ್ವರ ಮುನಿಗೆ ದುರ್ಲಭ 1 ಝೇಂಕರಿಸುವದಾ ನಾದ ನೆತ್ತಿಯೊಳು ಓಂಕಾರ ಶಬ್ದವು ಶೂನ್ಯವಾಗದೆ |ಶಂಕರ ಸ್ವರೂಪ ತಿಳಿದ ದತ್ತನ ಬೀಜಮಂತ್ರ ಅಂಕುರದಿಂದೆ2
ಇದೇ ಜ್ಞಾನವೊ ಇದೇ ಮಾನವೊ ಧ್ರುವ ಕೇಳಿ ಕೇಳಿ ಕೇಳಿ ಕೇಳುವ ಮಾತಿದು ಕೇಳಿದಂತೆ ನೀವು ಬಾಳಿ ಬಾಳಿದ ಮ್ಯಾಲಿನ್ನು ಹೇಳ್ಯಾಡುವ ಮಾತಿನ ಮೊಳೆ ಅಂಕುರನೆ ಸೀಳಿ ಒಳಿತಾಗಿದೆ ಪೂರ್ಣ ಕೇಳಿ ಕಳೆದ ದುಸ್ಸಂಗವು ಕೇಳುವನಾದರೆ ತಿಳಿಸಿಕೊಡುವನು ಗುರು ಹೇಳಿ 1 ಸೂಟಿ ತಿಳಿದು ನಿಜಧಾಟಿಗೆ ಬಂದರೆ ಕೋಟಿಗವನೇ ಒಬ್ಬ ಙÁ್ಞನಿ ನೀಟಾಗಿಹ್ಯ ಘನಕೂಟವು ತಿಳಿದರೆ ನೋಟದಲ್ಲವ ಬಲು ತ್ರಾಣಿ ನೋಟದಲ್ಲಿಹುದು ತ್ರಾಟಿವ ಬಲ್ಲನೆ ಬೂಟಕ ದೇಹಾಭಿಮಾನಿ ನಾಟಿ ಮನದೊಳು ಮಾಟಿಸಿಕೊಂಬುದು ಘಟಿಸಿತಿದೆ ಸಾಧನ 2 ನೆನೆಯಲಿಕ್ಕೆ ಮನ ಘನಬೆರದಾಡುವ ಖೂನಾಗುವದಿದೆ ರಾಜಯೋಗ ಅನುಭವಿಗಳಿಗೆ ಅನುಕೂಲವಾಗಿನ್ನು ಅನುವಾಗಿದೋರುದು ಬ್ಯಾಗ ಭಾನುಕೋಟಿತೇಜ ತಾನೆತಾನಾದನು ಎನ್ನ ಮನದೊಳು ಈಗ ದೀನ ಮಹಿಪತಿಗೆ ಸನಾಥಮಾಡುವ ಸ್ವಾನುಭವದ ಬ್ರಹ್ಮಭೋಗ 3
ಐದನೆ ವರ್ಷದ ಅಂತ್ಯ ಭಾಗದೊಳಗೆ ಐದುವೊ ಮಾರ್ಗವನು ನಿಶ್ಚಯಿಸಿದೆ ಪ. ಆದಿಮಾಸದ ಶುದ್ಧನವಮಿ ಸ್ಥಿರವಾರದಲಿ ಮೋದಗುರುಗಳು ಬೋಧಿಸೆ | ದಯದಿ ಅ.ಪ. ಐದನೆ ತಿಂಗಳಲಿ ಅಂಕುರುವು ಪಲ್ಲೈಸಿ ಐದು ಇಂದ್ರಿಯವು ಕಲೆತು ಕಾಯ ಐದಲಾರದು ಜೊತೆಗೆ ಕರ್ಮ ಒಂದು ಈ ದಿವ್ಯ ಮತಿಯೆನಗೆ ಸಾದರದಿ ಪುಟ್ಟಲು ಮೋದವಾಗುತ ಮನದೊಳು ಆದಿದೈವನ ಕರುಣವಾದ ಬಳಿಕಿನ್ನೇನು ಪಾದಪದ್ಮವ ತೋರೆಲೊ | ಸ್ವಾಮಿ 1 ಐದೆರಡು ಒಂದು ಇಂದ್ರಿಯಗಳನೆ ಬಂಧಿಸಿ ಐದಿಸಿ ಮೂಲಸ್ಥಳಕೆ ಐದು ರೂಪಾತ್ಮಕನ ಆದರದಿ ಪೂಜಿಸುತ ಐದೊಂದು ದೂರ ತ್ಯಜಿಸಿ ಐದು ನಾಲ್ಕು ತತ್ವದಧಿಪತಿಗಳನು ಆದರದಿ ಧ್ಯಾನಮಾಡಿ ಐದು ಮೂರು ದಳದಿ ಆದಿತ್ಯನಂತಿರುವ ಶ್ರೀಧರನ ನುತಿಸಿ ನುತಿಸಿ | ಸ್ತುತಿಸಿ 2 ಐದು ಭೇದಗಳ ಮತ ಸ್ಥಾಪಕರ ಕರುಣದಲಿ ಐದು ಮೂರನೆ ಖಂಡಿಸಿ ಐದೆರಡು ರೂಪಕನ ಆದರದಿ ಸ್ತುತಿಸುತ್ತ ಭೇದಿಸಿ ಹೃದಯಗ್ರಂಥಿ ಶ್ರೀದ ಶ್ರೀಗೋಪಾಲಕೃಷ್ಣವಿಠ್ಠಲನ ಪದ ಆದರದಿ ನಂಬಿ ಸ್ತುತಿಸಿ ಈ ದಾರಿ ಕಾಣಲು ಇದಕೆ ಕಾರಣದಿವ್ಯ ಮೋದ ಶ್ರೀಗುರು ಕರುಣವೋ | ದಯವೋ 3
ಗೋಪಾಲವಿಠ್ಠಲ ನಿನ್ನ ಪೂಜೆ ಮಾಡುವೆನು ಕಾಪಾಡೊ ಈ ಮಾತನು ಪ ಅಪರಾ ಜನುಮದಲಿಡುವನೆ ಮ್ಯಾಲೆ ನೀ ಪ್ರೀತಿಯನು ಮಾಡಿ ನಿಜದಾಸರೊಳಿದು ಅ.ಪ ಶ್ರುತಿಶಾಸ್ತ್ರ ಪುರಾಣ ಮಿಕ್ಕಾದ ಗ್ರಂಥಗಳ ಸತತ ಅಭ್ಯಾಸ ಮಾಡಿ ದಾನ ವ್ರತಗಳನೆ ಬಿಡದೆ ಮಾಡಿ ತೋಪಾಸನಗಳನು ಮಾಡಿ ಮಾಡಿದೆನು ಚ್ಯುತಿದೂರ ನಿನ್ನ ಕೊಂಡಾಡಿದೆ 1 ಕ್ಷೋಣಿಯೊಳಗೆ ನಡಿಸುತ ಮೇಣು ಧನ್ಯನ್ನ ಮಾಡು ಪರಿ ಕೀರ್ತಿ ತುಂಬಿರಲಾಗಿ ಧ್ಯಾನದಲಿ ಅಮರರಿಗೆ ಬೆಡಗುಗೊಳಿಸುವ ದೇವಾ2 ಅಂಕಿತವ ನಾನಿತ್ತೆ ನಿನ್ನ ಪ್ರೇರಣೆಯಿಂದ ಕಿಂಕರಗೆ ಲೌಕಿಕದ ಡೊಂಕು ನಡತೆಯ ಬಿಡಿಸಿ ಮಂಕು ಜನುಮ ಜನುಮದಲ್ಲಿದ್ದ ಪಂಕವಾರವ ತೊಲಗಿಸಿ ಶಂಕೆ ಪುಟ್ಟದಂತೆ ಕಾವ್ಯಗಳ ಪೇಳಿದದು ನೀನೆ ವಿಜಯವಿಠ್ಠಲಯೆಂದು ಅಂಕುರವ ಪಲೈಸಿ ಫಲಪಾಪ್ತಿಯಾಗದೊ3