ಪರಮಪ್ರೀಯಾ ದಾಸರಾಯಾ | ಸತ್ಕವಿಜನಗೇಯಾ ಪ
ಸುರತರು | ಕರಿಗಿರಿ ನಿಲಯನೆಉರುಗಾಯನ ಸಂದರುಶನ ಕೊಡಿಸಯ್ಯ ಅ.ಪ.
ಆರ್ಮೂರೇಳು ನಾಲ್ಕೆಂಟು ಗ್ರಂಥ | ಅವುಗಳ ಸಾರಾರ್ಥಸಾರುತ್ತ ಭಕುತರಿಗೆ ಪುರುಷಾರ್ಥ | ಮಾರ್ಗವ ತೋರುತ್ತ ||ಚಾರು ಚರಿತ ಶ್ರೀರಮಾರಮಣನಗುಣವಾರಿಧಿಯೊಳು ಬಹು ಈಸಿದ ನಿಪುಣ 1
ಪಥ ಪುನರುದ್ಧರಿಸಿದ 2
ಪರತತ್ವ ಸಾರಾಂಬುಧಿ ಬೆಳಗುವನ ಪರಿಪರಿಕಲೆಯವನಶರಣರ ಹೃತ್ತಾಪವ ಹರಿಸುವನ | ನಿರತೈಕರೂಪನನಪರಮಾರ್ಥೇಂದು ವರೋದಯ ಕರುಣಿಸಿಧರಣಿಯ ಸುರರನು ಪೊರದೆಯೊ ಗುರುವೆ 3
ಅಂಕೀತವಿಲ್ಲದ ದೇಹಗಳೊಂದು | ನಿಷಿದ್ಧವೆಂದೂಪಂಕಜಾಕ್ಷನ ನಾಮಗಳೊಂದೊಂದು | ಬಳಸುತ ನೀನಂದೂ ಅಂಕನ ಗೈಧರಿ ಲೆಂಕತನವನಿತ್ತುಬಿಂಕದಿ ಜನ ಹೃತ್ಸಂಕಟ ಕಳೆದೀ 4
ಬಿಂಬೋಪದೇಶವೆ ತಾರಕವೆಂದೂ | ನಿಸ್ಸಂಶಯವೆಂದೂಹಂಬಾಲ ಹಚ್ಚುತ ಶರಣರಿಗೆಂದೆಂದೂ | ಕರುಣಾ ಸಿಂಧೂಬಿಂಬನು ಗುರುಗೋವಿಂದ ವಿಠಲ ಪಾದಾಂಬುಜದಲ್ಯನ ಹಂಬಲವಿರಿಸಿದೆ 5