ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಶುಭಮಂಗಳಂ | ಪ್ರಿಯಕರಾನಂದ ಶ್ರೀ ತುಲಸಿ ಮಾತೆ ಪ ದಿನಕರನು ಉದಯಿಸಲಾಕ್ಷಣದಿ ಭಕ್ತರು ನಿನ್ನ | ನೆನೆದು ಭಕುತಿಯಲಿ ಜೀವನ ನೀಡುತಾ | ಪಣೆಗೆ ಮೃತ್ತಿಗೆ ತೀಡಿ ಪ್ರಣೀತರಾಗುತ ಪ್ರದ ಕ್ಷಣೆ ಮಾಡಿದವರ ಫಲವೆಣೆಸಲಳವೇ 1 ಹರಿಯನಾಗ್ರದಿ ತ್ರಿಪುರಹರನು ಮಧ್ಯದಿ ಬ್ರಹ್ಮ | ನಿರುವ ಮೂಲದಿನಾಕಚರರು ಮುದದೀ | ನಿರುತ ಶಾಖಂಗಳಲಿ ಚರಿಸುತ್ತಲಿಹರೆಂದು | ಧರಣಿ ಸುರರರ್ಚಿಪರು ಹರುಷದಿಂದಾ2 ಕಾರ್ತಿಕಶುದ್ಧ ಸುಮುಹೂರ್ತ ದ್ವಾದಶಿಯಲ್ಲಿ | ಅರ್ತಿಯಿಂದಲಿ ಸುಜನರರ್ತುತ್ವರದೀ | ನರ್ತನದಿ ತವನಾಮ ಕೀರ್ತನೆಯ ಪಾಡುತಲಿ | ಬೆರ್ತುನಿಂದವರ್ಗೆ ನೀ ಸಾರ್ಥಿ ಎನಿಪೆ 3 ಕಾಂತೆ ನಿನ್ನ ನುದಿನವನಂತ ಜನ ವಂದಿಸುತ | ಅಂತರಂಗದಿ ನಲಿದು ನಿಂತರವರಾ | ಚಿಂತೆಪರಿಪರಿಪೆ ಅಳಕಾಂತೆ ದುರಿತಘನಿಚಯ | ಪಾವಕ ಸುಸಂತ ವಿನುತೆ 4 ಅದಿಗಿಂದಿಗೆ ನೀನು ವೃಂದಾವನದಿ ಮಹಿಮೆ | ನಿಂದು ತೋರಿದೆ ಯೋಗಿವೃಂದ ವಂದ್ಯೆ | ತಂದೆ ಶ್ರೀ ಗಿರಿಧರನ ಕಂದನನುದಿನ ಸಲಹು | ಮಂದರೋದ್ಧಾರ ಪ್ರೀಯ ಕುಂದವದನೆ 5 ಅಂಕಿತ-ಗಿರಿಧರಕಂದ
--------------
ಕಾಖಂಡಕಿ ಶ್ರೀ ಕೃಷ್ಣದಾಸರು