ಲಕ್ಷ್ಮೀಶ ಗೋವಿಂದ ವಿಠಲ ಪೊರೆ ಇವಳಾ ಪ
ಪಕ್ಷ್ಮಗಳು ಅಕ್ಷಿಗಳ ಅಗಲದಿಪ್ಪಂತೇ ಅ.ಪ.
ಕುಕ್ಷಿಯಲಿ ಜಗಧರಿಪ ಪಕ್ಷಿವಾಹನ ದೇವಅಕ್ಷರೇಡ್ಯನೆ ಕರುಣದೀಕ್ಷಿಸುತ ಇವಳ |ರಕ್ಷಿಪುದು ಸುಜ್ಞಾನ ಭಕ್ತಿದಾಯಕನಾಗಿಕಕ್ಷೆತರತಮ ಜ್ಞಾನ ಭೇದಪಂಚಕನರುಹಿ 1
ಪತಿಯೆ ಪರದೈವವೆಂಬುನ್ನತದ ಮತಿಯಿತ್ತುಪಥತೋರೊ ಸದ್ಗತಿಗೆ ಸರ್ವವ್ಯಾಪಕನೇ |ಹಿತದಿಂದ ಬಯಸುವಳು ತವಪಾದ ದಾಸ್ಯವನುಕೃತಿ ಪತಿಯೆ ನೀನಿತ್ತು ಸಲಹ ಬೇಕಿವಳಾ 2
ವಾಗ್ದೇವಿ ಪತಿ ಪ್ರೀಯಕೃಪೆಗೈದು | ತವಪಾದ ಹೃದುಹದಿ ನೋಳ್ಪ |ಸುಪಥವೆನೆ ಹರಿಗುರೂ ಸದ್ಭಕ್ತಿ ಕರುಣಿಪುದುವಿಪಗಮನ ಹಯವದನ ಶ್ರೀ ಲಕ್ಷ್ಮೀ ಸದನಾ 3
ಅಂಕಿತಿಲ್ಲದ ದೇಹ ಸಾಧನಕೆ ಸಲ್ಲದೆನೆಅಂಕಿತವ ವಿತ್ತಿಹೆನು ಗುರುಕರುಣದೀ | ನಿಂತು ನೀನಿವಳಲ್ಲಿ ತೋರು ತವ ಮಹಿಮೆಗಳಸಂತತದಿ ನಿನ್ನಂಘ್ರಿ ಸ್ಮರಣೆ ಕರುಣಿಸುತ 4
ಸರ್ವ ಶ್ರುತಿ ಸಮ್ಮತದ ಪವನಮತ ದೀಕ್ಷೆಯನುಸರ್ವ ಕಾರ್ಯದಿ ನಿನ್ನ ಸೇವೆ ಮತಿಯ |ಸರ್ವದಾ ಕರುಣಿಸುತ ಪೊರೆ ಎಂದು ಭಿನ್ನೈಪೆಪವನಾಂತರಾತ್ಮ ಗುರು ಗೋವಿಂದ ವಿಠಲಾ 5