ಕಂಡು ಧನ್ಯನಾದೆ ನಂದತನಯನ ಕಣ್ಣಾರ
ಕಂಡು ಧನ್ಯನಾದೆ ನಂದ ತನಯನ
ಕಂಡು ಧನ್ಯನಾದೆ ದಣಿಯವೆನ್ನವೆರಡು ಕಂಗಳೀಗ
ತಿರುಗಿ ಪೋಗಲಾರೆ ತಿಮ್ಮಲಾಪುರೀಶ ದೊರೆಯ ಬಿಟ್ಟು ಪ
ಸಾಲುದೀವಿಗೆ ಸಣ್ಣನಾಮ ಸರದ ಮಧ್ಯೆ ವೈಜಯಂತಿ
ಸೂರ್ಯನಂತೆ ಹೊಳೆವ ಮುದ್ದು ಮುಖವು ಮಹಾದ್ವಾರದಲ್ಲೆ 1
ಶಂಚಕ್ರ ಶ್ಯಾಮವರ್ಣ ಅಂಕಿತವುಳ್ಳ ನಾಮಗಳಿಂದ
ಪಂಕಜಾಕ್ಷ ಪರಮಪುರುಷ ವೆಂಕಟನೆಂಬೊ ನಾಮಾಂಕಿತದವನ 2
ಆ ಮಹಾ ವೈಕುಂಠದಲ್ಲಾವಾಸವಾದ ನಮ್ಮ ಕುಲ-
ಸ್ವಾಮಿ ಎನಿಸಿಕೊಂಡ ಭೀಮೇಶ ಕೃಷ್ಣನ ದಯದಿಂದೀಗ 3