ಪತಿ ವಿಠಲ | ಬುಧಜನೇಡ್ಯಾಮುದದಿಂದ ಲೀಕೆಯನು | ಸಲಹೊ ಶ್ರೀ ಹರಿಯೇ ಪ
ನೊಂದು ಭವದಲಿ ಬಹಳ | ಇಂದಿರಾರಮಣ ತವಅಂದ ಪದದಾಸ್ಯ ಮನ | ಮಂದಿರದಿ ಬಯಸೀ |ಬಂದು ಬೇಡ್ದಳಿಗೆ ನಾ | ನೊಂದು ಅಂಕಿತವಿತ್ತೆತಂದೆ ತೈಜಸನೆ ನೀ | ನಂದೆ ಪೇಳ್ದಂತೇ 1
ಬಹಳ ಭಕ್ತಿಯಲಿಂದ | ವಿಹಿತ ಕರ್ಮಾಸಕ್ತೆಅಹಿಶಯ್ಯ ಕೃಪೆಯಿಂದ | ಮಹಿಮೆ ತೋರೀ |ಅಹಿತ ವಿಹಿತಗಳೆರಡ | ಸಹನೆ ದಯಪಾಲಿಸುತಮಹಮಹಿಮ ಪೊರೆ ಇವಳ ಸುಹೃತ ಜನರ ಬಂಧೋ2
ಜ್ಞಾನಾಯು ರೂಪನಿಗೆ | ನೀನಿವಳನೊಪ್ಪಿಸುತಸಾನುಕೂಲಿಸು ಮುಕುತಿ | ಜ್ಞಾನ ಭಕುತಿಗಳಾ |ಕಾಣೆ ತವ ಕಾರುಣ್ಯ | ಕೆಣೆಯು ತ್ರೈಭುವನದಲಿಮಾಣದಲೆ ಪೊರೆ ಇವಳ | ದೀನ ಜನ ಪಾಲಾ 3
ಪತಿ ಕೃಷ್ಣ | ಕಾಳಿಪತಿನುತ ಹರಿಯೆಕಾಳಘಾವಳಿಗಳನು | ಕಳೆದು ಪೊರೆ ಇವಳಾ4
ಪಾವನಾತ್ಮಕ ದೇವ | ಪಾವಮಾನಿಯ ಪ್ರೀಯಜೀವ ಪರತಂತ್ರತೆಯ | ಭಾವ ಅನುಭವದೀದೇವ ಸಾಧನಗೈಸಿ | ಜೀವಿ ಇವಳನು ಪೊರೆಗೋವಿಂದಾಂಪತಿ ಗುರು | ಗೋವಿಂದ ವಿಠಲಾ 5