ಗುರು ಜಗದೀಶ ವಿಠಲ | ಪೊರೆಯ ಬೇಕಿವನ ಪ
ಮರುತಾಂತರಾತ್ಮ ಹರಿ | ಪ್ರಾರ್ಥಿಸುವೆ ನಿನಗೇ ಅ.ಪ.
ಕಾಕು ಸಂಗವ ಕೊಡದೆ ಮಾಕಳತ್ರನೆ ಕಾಯೊ | ಜೋಕೆಯಿಂದಿವನವಾಕು ಮನ್ನಿಸಿ ಎನ್ನ | ಬೇಕಾದಭೀಷ್ಟಗಳತೋಕನಿಗೆ ಕೊಡು ನೀನೆ |ಶ್ರೀಕರಾರ್ಚಿತನೇ 1
ಶರ್ವಾದಿ ದಿವಿಜೇಡ್ಯ | ಪರ್ವಕಾಲದಿ ಬಪ್ಪಸರ್ವ ವಿಘ್ನಗಳ್ಹರಿಸಿ | ಪೊರೆಯೊ ಇವನದುರ್ವಿಭಾವ್ಯನೆ ಹರಿಯೆ | ದರ್ವಿಜೀವಿಯ ಕಾದಸರ್ವ ಭಾರವು ನಿನದೊ | ಸರ್ವಾಂತರಾತ್ಮ 2
ಸಾರ ಅಂಕಿತವಿತ್ತುಧೀರ ನೀ ಪೊರೆಯೆಂದು | ಪ್ರಾಥಿಸಿಹೆ ಹರಿಯೇ 3
ಕೃಷ್ಣೆಗಕ್ಷಯ ವಸನ | ಕೊಟ್ಟು ರಕ್ಷಿಸಿದಂಥಕೃಷ್ಣ ಮೂರುತಿ ಇವನ | ಸುಷ್ಠುಷ್ಟು ಪಾಲಿಪುದೋಶ್ರೇಷ್ಠ ಹರಿ ಗುರು ಭಕ್ತಿ | ಮತ್ತೆ ತರತಮ ಜ್ಞಾನಕೊಟ್ಟು ಕಾಪಾಡೊ ಹರಿ | ವಿಷ್ಠರಶ್ರವನೇ 4
ಜಲಧಿ | ನಾನೆ ಎಂದೆನಿಪ ತವಭವ್ಯ ನಾಮಾಮೃತವ | ಸಾರ್ವಕಾಲದಲೀತಾವಕಗೆ ಉಣಿಸುತ್ತ | ಭಾವದಲಿ ಮೈದೋರೊಗೋವಿದಾಂಪತಿಯೆ ಗುರು | ಗೋವಿಂದ ವಿಠಲ5