ತಂದೆ ಮುದ್ದು ಮೋಹನಾ | ನಿನ್ | ಅಂದ ಪಾದವ ಭಜಿಸುವೆ ಪ
ನಂದ ಕಂದನ ತಂದು ತೋರಿಸಿ | ಬಂಧನವ ಪರಿಹರಿಸು ನೀ ಅ.ಪ.
ವತ್ಸರ | ತರಳನಾಗಿರುವಾಗಲೇ 1
ಹರಿಯ ವ್ಯಾಪ್ತಿಯ ಕಂಡು ನೀ | ಗಿರಿ ಗುಹೇಯಲಿ ಚರಿಸುತಾತೊರೆದು ಮಮತೆಯ ಚರಿಸಿದೇ | ಕರೆಕರೆಯ ಸಂಸಾರದೀ 2
ತಪವನಾಚರಿಸುತ್ತಲೀ | ವಿಪಿನವಸಿ ಸಂಚರಿಸುತಾವಿಪವರಸ ಪೆಗಲೇರಿದವನ್ನ | ಅಪರೋಕ್ಷದಿ ಕಾಣುತಾ 3
ನಡುನಡುವೆ ಮನೆಗೈದುತಾ | ಮಡದಿಯನೆ ತಕ್ಕೈಸುತಾ ಎಡ ಬಲದ ಒಡನಾಡಿ ಜನ ಕಡು | ಮೋಹಬಡುವಂತಾಡುತಾ 4
ಇಭಗಿರೀ ರಥೋತ್ಸವಕ್ಕೇ | ಪ್ರಭು ಮುದ್ದು ಮೋಹನ ದಾಸರುವಿಭವದಿಂದಲಿ ಬಂದು ನಿಮಗೆ | ಶುಭದ ಅಂಕಿತವಿತ್ತರು 5
ಶಾಂತ ಚಿತ್ತದಿ ಜಪಿಸುತಾ | ಮಂತ್ರ ಸಿದ್ಧಿಯ ಪಡೆಯುತಾ ಭ್ರಾಂತ ಜನರನು ಭಕ್ತಿ ಪಂಥದಿ | ನಿಂತು ನಲಿವಂತೆ ಮಾಡುತಾ6
ಸಾಹಸ್ರಾರಂಕಿತವನಿತ್ತೂ | ಮಾಹಿತಾಂಘ್ರಿಯ ಭಜಿಸಿದಾ ಸಾಹಸಿಗ ಶೇಷಾಂಶ ಭಕ್ತರ | ಮೋಹ ಕಳೆದುದ್ಧರಿಸಿದಾ 7
ನಕ್ರಹರಗತಿ ಪ್ರೀತನಾ | ವಿಕ್ರಮದಿ ಸಂಸ್ಥಾಪಿಸೀಚಕ್ರಿಪುರಿಗಾ ರಾಮನವಮಿಲಿ | ವಿಕ್ರಮದಿ ನೀ ಹೊರಡುತಾ 8
ಅಹಿ ಭವ ವಂದ್ಯನಾ | ಗುರುಗೋವಿಂದ ವಿಠಲನನಿರುತ ಭಜಿಸುವ ಜ್ಞಾನವಾ | ಕರುಣಿಸೀ ಸಲಹೆನ್ನನು 9