ಶ್ರೀ ಗಣಪತಿ ಗಿರಿಜೆ ಪುರಾಂತಕ
ಬಾಗಿನಮಿಸುವೆ ಲಕ್ಷುಮಿಗೆ ನಾರಾಯಣಗನು-
ರಾಗದಲಿ ವಂದಿಸಿ ಪೇಳುವೆನು 1
ನವರತ್ನಖಚಿತ ಮಂಟಪದಲಿ
ನವನವ ಚಿತ್ರಗಳನು ಬರೆಯಿಸಿ
ಭವನರಸಿ ಮುಖ್ಯಾ ಮುತ್ತೈದೆಯರು ಹರುಷದಿ ಲಕ್ಷ್ಮೀ
ಧವನಡಿಗಳ ಬೇಡಿ ಪ್ರಾರ್ಥಿಸುವರು 2
ಮುತ್ತು ಮಾಣಿದ ಹಸೆಗಳ ಹಾಕಿಸಿ
ಪಚ್ಚೆಯ ಮಣಿಗಳ ತಂದಿರಿಸಿ
ಮಿತ್ರೇ ಮಹಲಕ್ಷ್ಮಿಯ ರಮಣೆಗೆ ಅಕ್ಷತೆಯನು ತಳಿದು
ವತ್ತೀದಾರೆಣ್ಣೆ ವಧೂವರರಿಗೆ 3
ಅಂಕಿತವಾಗಳವಡಿಸಿ ಪಣೆಗೆ
ಪಂಕಜಾನನೆಯರು ವೀಳ್ಯವನು ಕರದಲಿಕೊಟ್ಟು
ವೆಂಕಟಾಗೆಣ್ಣೆ ವತ್ತೀದಾರು 4
ನಲ್ಲೆಯರೊತ್ತಲು ನಸುನಗುತಲಿ
ಚಲ್ವಾಗುರುರಾಮವಿಠಲಗೆ ಹರಸಿದರು ಸುರ
ರೆಲ್ಲ ಪೂಮಳೆಯ ಕರೆದಾರು 5