ಬಾಲಕೃಷ್ಣವಿಠಲ | ಕಾಪಾಡೊ ಇವನಾ ಪ
ನೀಲ ನೀರದ ವರ್ಣ | ಕಾಳಿಂದಿ ರಮಣ ಅ.ಪ.
ಮೋದ ತೀರ್ಥರ ಮತದಿಹಾದಿಯಲ್ಲಿರುವವನ | ಕಾದುಕೋ ಹರಿಯೇವೇದಾಣಿ ಸನ್ನುತನೆ | ಭೇದ ಪಂಚಕ ತಿಳಿಸಿಮೋದ ಪಡಿಸುವುದಿವನ | ವೇದಾಂತ ವೇದ್ಯ 1
ವ್ಯಾಪ್ತೋಪಾಸಕ ಜೀವಿ | ಗಿತ್ರಿಹೆನೊ ಅಂಕಿತವಸುಪ್ತೀಶ ಪೇಳ್ದಪರಿ | ಗೋಪ್ತ ಮಹಿಮಾಆಪ್ತ ನಿವ ನೆಂದೆನುತ | ಗೊತ್ತು ಮಾಡಿಹೆ ದೇವದೀಪ್ತ ಮೂರುತಿ ಹರಿಯೆ | ತೃಪ್ತಿ ಪಡಿಸಿವನಾ 2
ಸ್ವಾಪದಲಿ ಸತ್ಪಂಚ | ಪುಷ್ಪ ಬಕುಳವನಿತ್ತುಶ್ರೀಪ ನಿನ್ನನುಗ್ರಹ | ಪ್ರಾಪಕದಸೂಚ್ಯಾನೀ ಪಾಲಿಸುತ್ತಿವಗೆ | ಬಾಷ್ವಾವಾನಂದುದರಿಸೋಪಾನ ಮುಕ್ತಿಗೆನೆ | ವ್ಯಾಪಾರ ನಿನದೋ 3
ಉಂಬುಡುವ ಕ್ರಿಯೆ ಸರ್ವ | ಬಿಂಬ ತಾಗೈಯೈ ಪ್ರತಿಬಿಂಬ ಕುಂಟೆಂಬುವಾ | ಸುಜ್ಞಾನವಿತ್ತುಗುಂಭ ಸಾದನದಿ ಹೃದ | ಯಾಂಬರದಿ ನೀತೋರಿಸಂಭ್ರಮದಲಿರಿಸಿವನ | ಅಂಬುಜದಳಾಕ್ಷ 4
ಎಲ್ಲೆಲ್ಲೂ ನಿನ್ನ ವ್ಯಾಪ್ತಿ | ಸೊಲ್ಲನುಣಿಸುತ ಹರಿಯೆಬಲ್ಲಿದರ ಸಂಗವನು | ಸಲ್ಲಿಸುತ ಇವಗೇಪಲ್ಲಿವಿಸೆ ಸುಜ್ಞಾನ | ಬೇಡ್ವೆ ನಿನ್ನನು ದೇವಚೆಲ್ವ ಹಯಮುಖ ಗುರು | ಗೋವಿಂದ ವಿಠಲಾ 5