ನರ್ತನಗೋಪ ಕೃಷ್ಣ | ವಿಠಲ ಪೊರೆ ಇವನಾ ಪ
ಅರ್ತು ನಿನ್ನಂಘ್ರಿಯಲಿ | ದಾಸ್ಯ ಕಾಂಕ್ಷಿಪನಾ ಅ.ಪ.
ಪತಿ ಸುಪ್ರೀಯ | ಮಧ್ವಾಂತರಾತ್ಮಸದ್ಧರ್ಮರತಿಯಿತ್ತು | ತಿದ್ದಿ ಸಂಸ್ಕತಿಗಳನುಶ್ರದ್ಧಾಳು ವೆಂದಿನಿಸು | ಸಿದ್ಧಾಂತ ಸಥದೀ 1
ಬೋಧ ಓದಗಿಸಿಕಾಯೋ | ಬಾದರಾಯಣದೇವಮೋದದಿಂ ಪ್ರಾರ್ಥಿಸುವೆ | ಹೇ ದಯಾಪೂರ್ಣ 2
ಧ್ಯಾನುಪಾಸನವಿತ್ತು | ಶ್ರೀನಿವಾಸನಮನದಿಕಾಣುವ ಸುವಿಜ್ಞಾನ | ನಿನಾಗಿ ಕೊಡುತಾಮೌನಿಕುಲ ಸನ್ಮಾನ್ಯ | ಜ್ಞಾನದಾಯಕ ಹರಿಯೆದೀನಜನ ಮಂದಾರ | ನೀನಾಗಿ ಪೊರೆಯೊ 3
ಪಿತೃ ಮಾತೃ ಪರಿವಾರ | ವ್ಯಾಪ್ತ ಹರಿಮೂರ್ತಿಯನುಅರ್ಥಿಯಿಂದಲಿ ಭಜಿಪ | ಮತಿಯ ಪಾಲಿಸುತಾಕರ್ತೃತ್ವ ಭ್ರಾಂತಿಯನು | ಹತಮಾಡಿ ಶ್ರೀಹರಿಯೆಕೀರ್ತಿವಂತನ ಗೈಯ್ಯೋ | ಆರ್ತರುದ್ಧರಣಾ 4
ಮುನ್ನವೇ ತ್ಯೆಜಸನು | ನನ್ನೆಯಿಂ ಸೂಚಿಸಿಹಚೆನ್ನ ಅಂಕಿತವನ್ನೆ | ಇನ್ನು ಸ್ಥಿರಪಡಿಸೀಘನ್ನ ಉಪದೇಶವನು | ಚಿತ್ಗಾನಿಗೆ ಇತ್ತಿಹೆನೋಮನ್ನಿಸೀಕೃತ್ಯ ಗುರು | ಗೋವಿಂದ ವಿಠಲಾ 5