ಪವಮಾನವಿಠಲ | ಕಾಪಾಡೊ ಇವನಾ ಪ
ಭುವಿ ಭವ್ಯ ಮರುತಮತ | ದೀಕ್ಷೆಯುಳ್ಳವನಾ ಅ.ಪ.
ಭಾವಿಮಾರುತರ ದಿವ್ಯ | ಪಾದಗಳನಾಶ್ರಯಿಸಿದೇವ ಗುಹ್ಯವು ಎಂಬ | ಆಖ್ಯಾನ ಪಠಿಸೀಭಾವಭಕ್ತಿಯಲಿಂದ | ಪೂರಿತನು ತಾನಾಗಿಧಾವಿಸಿ ಬಂದಿಹನೊ | ಎನ್ನ ಬಳಿಗಾಗಿ1
ಗುರುವನುಗ್ರಹ ಪಡೆದು | ಗುರುದತ್ತ ಅಂಕಿತವನೆರವಿನಾ ಸಾಧನವ | ವಿರಚಿಸಲು ಮಾರ್ಗಅರಿಯದಲೆ ಪ್ರಾರ್ಥಿಸುವ | ಕರುಣಪಯೋನಿಧಿಯೇಪೊರೆಯ ಬೇಕಿವನ ಪರಿಯ | ಮರುತಾಂತರಾತ್ಮ 2
ತರತಮಜ್ಞಾನವನು | ಹರಿಗುರು ಸದ್ಭಕ್ತಿಪರಿಪರಿಯಲಿಂ ವೃದ್ಧಿ | ಗೈಸಿವಗೆ ಹರಿಯೇಗುರು ಕರುಣ ಕವಚದಿಂ | ಹರಿಯ ಸರ್ವೊತ್ತಮತೆಅರಿವಾಗಲಿವಗೆಂದು | ಪ್ರಾರ್ಥಿಸುವೆ ಹರಿಯೆ 3
ಮೂರ್ತಿ | ಕೃತಿರಮಣ ದೇವ 4
ಮಧ್ವ ರಮಣನೆ ದೇವ | ಹೃದ್ಯ ಹರಿ ನಿನಕಾಂಬಹೃದ್ಯ ಸಾಧನ ಗೈಸಿ | ಉದ್ದರಿಸೊ ಇದನಾಶುದ್ಧ ಮೂರುತಿ ಗುರು | ಗೋವಿಂದ ವಿಠಲನೆಬುದ್ಧಿಯಲಿ ನೀನಿಂತು | ಶುದ್ಧ ಮತಿ ಈಯೋ 5