ಶ್ರೀನಾಥ ವಿಠಲ ಹರಿ | ನೀನೆ ಪೊರೆ ಇವನಾ ಪ
ಮಾನನಿಧಿ ಮಧ್ವಾಖ್ಯ | ವಂದಿತ ಸಂಚರಣಾ ಅ.ಪ.
ಯೋನಿ ಆನೇಕದಲಿ | ಜನುಮಗಳ ತಾಪೊತ್ತುಮೌನಿ ಜನ ಸಂಯೋಗ | ಸತ್ಸಂಗಗಳ ಪಡೆದೂಧ್ಯಾನ ಸಾಧನಕಾಗಿ | ಮೌನಿರಾಯರ ಸೇವೆಸಾನುರಾಗದಿ ಗೈಯ್ಯೆ | ಶ್ರೀನಾಥ ಒಲಿದೇ 1
ದಾಸ ಸತ್ಪಂಥಾನು | ವಾಸಿಪೆನು ಎಂದೆನುತವಿೂೀಸಲದ ಸನ್ಮನದಿ | ಪ್ರಾರ್ಥಿಸುತ್ತಿಹಗೇಲೇಸು ತೈಜಸನಾಜ್ಞೆ | ಪೋಷಿಸುತ ವಿಠಲನ ಸಸೂಸಿ ಸೇವಿಸಿ ಇತ್ತೆ | ಅಂಕಿತವನಿವಗೇ 2
ಮಾರಾರಿ ಸದ್ವಿನುತ | ತಾರತಮ್ಯವ ತಿಳಿಸಿಮಾರೆರಡು ಭೇಧಗಳ | ಅರಹುತಲಿ ಇವಗೇಪಾರಗಾಣಿಸು ಭವವ | ನೀರೋಜೋದ್ಭವನಯ್ಯಕಾರುಣಿಕ ಶ್ರೀಹರಿಯೆ | ಕಾರುಣ್ಯ ಮೂರ್ತೇ 3
ಸಖನಾಗಿ ಇವನಲ್ಲಿ | ಸುಖ ಕವನ ಪೇಳಿಸುತ ಪ್ರಕಟ ಗೈ ತವರೂಪ | ನಿಕಟ ಹೃದ್ಗುಹದೀವಿಖನಸಾಂಡದ ಓಡೆಯ | ಸಕಲ ಪ್ರೇರಕ ನಿನ್ನಅಕುಟಿಲದೆ ಮನದಿಂದ | ಪ್ರಾರ್ಥಿಸುವೆ ಹರಿಯೇ 4
ಸಿರಿ ಭೂಮಿ ರಮಣನೇಅರಹಲೇನಿಹುದಿನ್ನು | ಸರ್ವಜ್ಞ ಮಾರ್ತೇಕರುಣ ದೃಷ್ಟಿಲಿ ನೋಡಿ | ಪರಿಹರಿಸೊ ದುಷ್ಕರ್ಮಹರಿಯೆ ಗುರು ಗೋವಿಂದ | ವಿಠಲ ಮಾರುತಿಯೆ 5