ಮುದ್ದು ಮೋಹನ ದಾಸರೇ ನಿಮ್ಮ | ಶುದ್ಧ ಪಾದವ ನಂಬಿದೇತಿದ್ದಿಯೆನ್ನಯನಾದ್ಯ ವಿದ್ಯೆಯ | ಬುದ್ಧಿ ನಿಲಿಸಿರಿ ಹರಿಯಲೀ ಪ
ನಡುಮನೆ ದ್ವಿಜನೆಂಬನಾ | ವಡ್ಡಲೊಳು ಉದಿಸೀದನಾ |ಆಡ್ಯಮತವನುಕರಿಸಿದಾ | ದೊಡ್ಡ ಬಳ್ಳಾಪುರದಲೀ1
ವಿಕೃತಿ ಸಂವತ್ಸರದಲೀ | ಪ್ರಕೃತ ಜನ್ಮವ ಪಡೆದನಾಸುಕೃತ ಪೊಗಳುವ ಜನರ ದು | ಷ್ಕøತವ ನೀ ಪರಿಹರಿಸುವೀ 2
ಚಿಪ್ಪಗಿರಿ ಸುಕ್ಷೇತ್ರದೀ | ಗೊಪ್ಪ ಶ್ರೀ ಅಂಕಿತವನೂ ಅಪ್ಪ ಶ್ರೀ ವರರಿಂದಲೀ | ವಪ್ಪಿ ನೀ ಕೈಗೊಂಡೆಯೋ 3
ಮೂರೊಂದು ಸಲ ಶ್ರೀಕಾಶಿಗೇ | ಭೂರಿಸಲ ಶ್ರೀ ಉಡುಪಿಗೇಸಾರಿ ವೆಂಕಟ ಪತಿಯನೂ | ಬಾರಿ ಬಾರಿಗೆ ನೋಡಿದೇ4
ದಾಸ ಪೀಳಿಗೆ ಬೆಳೆಸಲೂ | ಶೇಷನಾಮಕ ದಿವಿಜಗೇಭಾಸಿಸುವ ಅಂಕಿತವನಿತ್ತೂ | ಪೋಷಿಸಿದೆ ಸದ್ವೈಷ್ಣವತತ್ವ 5
ಸುಜನ ಜನ ಸಂಸೇವಿಸೆ | ವಿಜಯ ವಿಠಲನ ಸ್ಥಾಪಿಸೇಭಜನೆ ಗೈಯುತ ಮೆರೆದೆಯೊ | ನಿಜಪುರದಿ ನೀ ನಿಲ್ಲುತಾ 6
ಸಿರಿಯಧರಿಸಿ ಮೆರೆಯುವ ಗುರು | ಗೋವಿಂದ ವಿಠಲನ ಭಜಿಸುವಾಪರಮ ಗುರುಗಳೆ ನಿಮ್ಮ ಚರಣವ | ಪರಿಪರೀಯಲಿ ಪೂಜಿಪೆ 7