ರಾಘವ ಹರಿ ವಿಠಲ | ಕಾಪಾಡೊ ಇವಳಾ ಪ
ಅಘದೂರ ಶ್ರೀ ಹರಿಯೇ | ಪಾಪಘಗಳ ಕಳೆದೂ ಅ.ಪ.
ಮುಕ್ತಿಗೇ ಸೋಪಾನ | ತಾರತಮ್ಯ ಜ್ಞಾನಮತ್ತೈದು ಭೇದಗಳ | ಅರಿವನೆ ಇತ್ತೂಪ್ರತ್ಯಹರ ತವನಾಮ | ಚಿತ್ತದಲಿ ನೆನೆವಂಥಉತ್ತಮದ ಸಂಸ್ಕøತಿಯ | ಕೊಟ್ಟು ಕಾಪಾಡೋ 1
ಪರಿ | ಇತ್ತಿಹೆನೊ ಅಂಕಿತವಚಿತ್ತದೊಲ್ಲಭ ಹರಿಯೆ | ಕರ್ತೃ ಕರ್ಮದಲೀವ್ಯಾಪ್ತ ನೀನಾಗಿದ್ದು | ಸತ್ಸಾಧನೆಯ ಗೈಸೀಎತ್ತು ಭವದಿಂದಿವಳ | ಉತ್ತಮೋತ್ತಮನೆ 2
ಇತ್ತು ವೈರಾಗ್ಯವನು | ಮತ್ತೆ ಜ್ಞಾನ ಸಂಪದಇತ್ತು ಕಾಪಾಡಿವಳ | ಕರ್ತೃ ರಾಮಚಂದ್ರಾ |ಉಕ್ತಿ ಎನ್ನದು ಇದೂ | ಮತ್ತನ್ಯ ನಾನೊಲ್ಲೆಮುಕ್ತಿ ದಾಯಕ ಗುರೂ | ಗೋವಿಂದ ವಿಠಲಾ 3