ನೋಡಿದ್ರ್ಯಾ ಕಂಡಿದ್ರ್ಯಾ ಶ್ರೀಸುಬ್ಬರಾಯ ದಾಸರ್ಯರಾ ಪ
ಕಾಡೂವ ಭವದ ದೂರೋಡಿಪ ಮಾರ್ಗದಜಾಡನೆ ತಿಳಿಸುವಾಗಾಢ ಮಹಿಮರ ಅ.ಪ.
ಪುರಂದರ | ದಾಸರ ಪೀಳಿಗೆ ಶರಧಿಗಾಶಶಿಗೊಪ್ಪುವ ದಾಸವರ್ಯರನ 1
ಮುದ್ದು ಮೋಹನ ಗುರು | ಮುದ್ದು ಶಿಷ್ಯರು ತಂದೆಮುದ್ದು ಮೋಹನರು | ಪ್ರಸಿದ್ಧರಾಗಿಹರಾ 2
ಪರ | ಮಾರ್ಥ ಚಂದಿರ ಹರಿಕೀರ್ತನೆ ಗೈವ ಸ | ತ್ಪಂಥ ಬೀರಿದರಾ 3
ಅಂಕಿತರಹಿತ ನಿ | ಷಿದ್ಧ ದೇಹವು ಎಂದುಅಂಕನಗೈಧರಿ | ಲೆಂಕತನವ ಬೀರ್ದರ 4
ಸಹಸ್ರಾರು ಅಂಕಿತ | ವಿಹಿತೋಪದೇಶ ಸ-ನ್ನಿಹಿತರ ಗೈದೂ | ದ್ಧರಿಸಿದ ಗುರುಗಳ5 |
ದಾಸಕೂಟಾಬ್ಧಿ ತಾ | ರೇಶನ ಪರಿಯಲಿಭಾಸಿಸಿ ಶರಣರ | ಪೋಷಿಸಿದವರನು 6
ಸಾರ ಶಾಸ್ತ್ರದ ಸವಿ | ಆರು ಮೊಗನ ಪರಿಆರು ಬಗೇಯಲಿ | ಬೀರಿದ ವರನ 7
ಸುಂದರೇಶ ಪ್ರಾಣ | ಅಂದ ಪ್ರತೀಕವಅಂದೇಭ ಗಿರಿಯಲ್ಲಿ | ಚಂದದಿ ನಿಲಿಸಿದರ 8
ಪ್ರಥಮ ಮಾಸವು ವರ | ಸಿತ ನವಮಿ ಮಧ್ಯಾಹ್ನಪೃಥುವಿ ಸಂಬಂಧವ | ಮತಿಯಿಂದ ತ್ಯಜಿಸಿದರ 9
ಇಂದು ಕರಿಗಿರಿಲಿಹರ 10
ಗೋವಿದಾಂಪತಿ ಗುರು ಗೋವಿಂದ ವಿಠಲ ಪರಾವರೇಶನು ಎಂದು | ಓವಿ ತುತಿಸುತ್ತಿಹರ11