ಅಂಕಿತನಾಮ ಪದಗಳು
ಅಚ್ಯುತಾನಂತವಿಠಲ | ಸಲಹ ಬೇಕಿವನಾ ಪ
ಸ್ವಚ್ಛಶಪಥದಿ ಹರಿಯ | ನಾಮ ನಂಬಿಹನಾ ಅ.ಪ.
ಜೀವಕಾರಣವೆನೆ | ಆವನ ವಿದ್ಯಾಪಟಲಓವಿಕಡಿಯಲು ಸಾಧ್ಯ | ನಾಮ ಸಾಧನದೀಈ ವಿಧದ ಸಂಪ್ರಜ್ಞೆ | ಭಾವ ಉಳ್ಳವನೀತತೀವರದಿ ಕೈಪಿಡಿದು | ಕಾಯೋ ಕೃಪ ಸಾಂದ್ರ 1
ಗುರು ಭಕ್ತಿಯುಳ್ಳವನು | ಸುಜ್ಞಾನಕಾಂಕ್ಷಿತನುಇರುವನೀತನು ಎಂದು | ವರ ಸು ಉಪದೇಶಹರಿಯ ನಾನಿತ್ತಿಹೆನು | ಸ್ವಪ್ನ ಸೂಚೀಯಂತೆಕರುಣದಿಂ ನಿಜತೋರೊ | ಮರುತಂತಾರಾತ್ಮ 2
ಹರಿ ನಾಮ ವೆಂಬಂಥ | ವಜ್ರಾಂಗಿ ತೊಡಿಸಿವಗೆದುರಿತರಾಶಿಗಳಳಿದು | ಪೊರೆಯ ಬೇಕಿವನಾಸುರು ಭೂರಹವು ಆಗಿ | ಪರಿಪರಿಯ ವರಗಳನುಗೆರೆಯುತ್ತ ಹರ್ಷವನೆ | ಸುರಿಸೊ ಶ್ರೀಹರಿಯೇ 3
ಸತ್ಸಂಗವನೆ ಕೊಟ್ಟು | ದುಸ್ಸಂಗವನೆ ಕಳೆಯೊಮತ್ಸಕೇತನ ಜನಕ | ಸಚ್ಚಿದಾನಂದಾತ್ಮಾವತ್ಸಾರಿ ಕೃಷ್ಣ ಗೋ | ವತ್ಸ ದನಿಗಾವು ಬಹುಉತ್ಸವದಿ ಬರುವಂತೆ | ನೀನೆ ಪೊರೆ ಇವನಾ4
ಭಾವಜ್ಞ ನೀನಿರುವೆ | ಪೇಳ್ವದೇನಿಹುದೆನಗೆದೇವ ದೇವೇಶನೆ | ಹರಿ ಸಾರ್ವಭೌಮಗೋವರ್ಧನೊದ್ಧಾರನೆ | ಗೋವಿಂದ ಪತಿಯೆ ಗುರುಗೋವಿಂದ ವಿಠಲ ಮದ್ | ಭಿನ್ನಪವ ಸಲಿಸೊ 5