ಲಂಕೆ ನಿರ್ಧಾಮ ಮಾಡಲು ಇಲ್ಲದೆ ಈ ಸೀತಾ
ಲಲನೆ ಕ್ಷೇಮವು ತರಲು ಶಂಕೆಯಿಲ್ಲದ
ಬಿರುದಾಂಕನ ಸೇವಕರು ಅಂಕರಲಿ
ಪೇಳಿರಲಧಿಕ ಬಲವಂತರೆಲ್ಲಾ ಪ
ಭೇದಿಸಿ ದೈತ್ಯರ ಹಿಡಿಯಲೊ ಆಪುರಿಸೇರಿ
ಹೊಡೆದು ಮಾರಿಯ ಮಾಡಲು
ದೃಢವು ಎನ್ನಯಮಾತುಬಿಡದೆ ಆರಾವಣನಾ
ಹೊಡೆದು ಹೆಡ ಮುಡಿ ಕಟ್ಟಿ ----ಲ್ಲಿ ತರಲು ಇಲ್ಲದೆ 1
ವಾರಿಧಿ ಲಂಘಿಸಲು ಒಳಹೊಕ್ಕು
ದೈತ್ಯ ವಂಶವೇ ಭೇದಿಸಲೆ ಸಾರಿ
ಹೇಳುವೆ ಇನ್ನು ಸರಸಜ್ಞರೆಲ್ಲ ಕೇಳಿ ವಾರೆಲ್ಲ
ಎನ್ನ ಮಾತು ಒಂದೇ ನಿಮಿಷದಿ ಹೇಳಿನ್ನೂ 2
ನಿಟ್ಟಾಗಿ ಒಳಹೋಗಲು ಹೋಗುತಲಿ
ನಗರಸುಟ್ಟು ಬೂದಿಯ ಮಾಡಲು
ಘಟ್ಟ್ಯಾಗಿ ಕೇಳಿರಿನ್ನು ಘನ 'ಹೊನ್ನವಿಠ್ಠಲ 'ನಾದ
ಧಿಟ್ಟ ಶ್ರೀರಾಮರ ಭಂಟ ಹನುಮಂತನಾನು 3