ಶಂಕರನಂದನ ನಮೋ ನಮೋ
ಕಿಂಕರಪಾಲಕ ನಮೋ ನಮೋ ಪ
ಪಂಕಜಭವನುತ ನಮೋ ನಮೋ
ಸಂಕಟ ಪರಿಹರ ನಮೋ ನಮೋ ಅ.ಪ
ಓಂಕಾರಪ್ರಿಯ ದಿವ್ಯಶರೀರಾ
ಶಂಕರ ಸುಖಕರ ಭವಪರಿಹಾರ
ಅಂಕನಾಥ ಸರ್ವೇಶ ಮನೋಹರ 1
ಗಿರಿಜಾನಂದ ಕುಮಾರ ಶರಣಾಗತ ಪರಿವಾರ
ವರಕೈಲಾಸ ವಿಹಾರ | ಸುರುಚಿರ ವಜ್ರಶರೀರಾ
ಶರವಣಭವ ಭುಜಗೇಶ | ಕರುಣಾಕರ ಜಗದೀಶ
ಹರಿಪರ್ಯಂಕ ಪರೇಶ ಮುದಗಾಂಕಿತ ಧೃತಕೋಶ 2
ಚಿಂತಾ ಜಲನಿಧಿ ಭೀಮ | ಸಂತ ಶರಣಜನ ಪ್ರೇಮ
ಅಂತರ ಭಯಹರ ಜಗದಭಿರಾಮ
ಸಂತಸದಾಯಕ ಮಾಂಗಿರಿಧಾಮ 3