ಒಟ್ಟು 44 ಕಡೆಗಳಲ್ಲಿ , 23 ದಾಸರು , 44 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅ) ಆರೈದು ಸಲಹೋ ಎನ್ನ - ಶ್ರೀ ರಾಮಚಂದ್ರ ಪ ಆರೈದು ಸಲಹೋ ಎನ್ನ ಸಾರಿದೆ ನಿನ್ನ ಚರಣ ವಾರಿಜಯುಗಳವನ್ನು - ಶ್ರೀ ರಾಮಚಂದ್ರ ಅ.ಪ ಕಕ್ಕಸಭವದೊಳು ದಿಕ್ಕೆಟ್ಟು ತುಕ್ಕೆ ಬಲು ದುಃಖಿಸುತಿಹೆನು ಕೇಳು - ಶ್ರೀರಾಮಚಂದ್ರ 1 ತಂದೆ ತಾಯಿಯು ನೀನೆ ಬಂಧು ಬಳಗ ನೀನೇ ಎಂದೆಂದು ಗತಿ ನೀನೆ - ಶ್ರೀ ರಾಮಚಂದ್ರ 2 ಭವ ಬನ್ನ ಈ ಪರಿಯರೋಷವೊ ಘನ್ನ - ಶ್ರೀ ರಾಮಚಂದ್ರ 3 ಘೋರ ತಾಪದ ನೋವ ಪಾರಗಾಣಿಸೋ ದೇವ ದೂರನೇ ನಾ ನಿನ್ನ - ಶ್ರೀ ರಾಮಚಂದ್ರ 4 ಯಾಕೆ ಬಾರದೋದಯ ಶ್ರೀಕಾಂತ ಎನ್ನಯ ವಾಕುಸೋಕದೆ ಕಿವಿಯ - ಶ್ರೀರಾಮಚಂದ್ರ 5
--------------
ಲಕ್ಷ್ಮೀನಾರಯಣರಾಯರು
(ಅ) ಏನೆಂದು ಪೇಳಲೋ ರಾಮ ನಿನ್ನಾ ದೀನವತ್ಸಲತೆಯ ಆಶ್ರಿತ ಪ್ರೇಮ ಪ ಕಲ್ಲಾಗಿ ಪಥದಲ್ಲಿ ಬಿದ್ದ | ಮುನಿ ವಲ್ಲಭೆಯನು ಸಲಹಿದ ಸುಪ್ರಸಿದ್ಧ ಕಲ್ಲೆದೆಯವ ನಾನು ಸಿದ್ಧ | ಎನ್ನ ಅನಿರುದ್ಧ 1 ಪಶುಜಾತಿ ಸುಗ್ರೀವ ಮುಖರ | ನೀ ಹಸನಾಗಿ ಪೊರೆದದ್ದು ಕೇಳಿದೆ ವಿವರ ವಶವಲ್ಲದಿಂದ್ರಿಯನಿಕರವುಳ್ಳ ಪಶುಪ್ರಾಯ ನಾನಯ್ಯ ರಕ್ಷಿಸೋ ಚತುರ 2 ಚೆಂಡಾಲನಾದ ಗುಹನ | ಕೈ ಗೊಂಡು ಕಾಪಾಡಿದೆ ಕುರುಣದಿಂದವನ ಖಂಡಿತ ಪೇಳುವೆ ಘನ್ನ | ಕರ್ಮ ಚೆಂಡಾಲ ನಾನು ಶ್ರೀ ಕಾಂತ ಪ್ರಸನ್ನ 3
--------------
ಲಕ್ಷ್ಮೀನಾರಯಣರಾಯರು
(ಅ) ಕಾಕು ಮುನುಜಾ ಹೀಗೆ ಪ ಯಾರಿಗೆ ಯಾರಿಲ್ಲ ಸಾರುವೆ ಕೇಳೆಲಾ ಸ್ಥಿರವಲ್ಲ ಭಾಗ್ಯ ಯೌವ್ವನವೊ 1 ಮಡದಿ ಮಕ್ಕಳಿಗೆಂದೇ ಒಡವೆ ವಸ್ತ್ರವ ತಂದೆ ಒಡನೆ ಬರುವರೇ ಮಡಿದರೆ ನೀ 2 ನಿತ್ಯ ನರಕಕೆ ದ್ವಾರ ಮುಕ್ತಿಯ ಪಡೆಯೆ ಶ್ರೀಕಾಂತನ ನೆನೆಯೋ 3
--------------
ಲಕ್ಷ್ಮೀನಾರಯಣರಾಯರು
(ಅ) ಗುರುರಾಯರ ನಂಬಿದೇ - ಶ್ರೀ ರಾಘವೇಂದ್ರ ಪ ವರಮಂತ್ರಾಲಯದಲ್ಲಿ ಇರುತ ಸೇವೆಯಗೊಂಬ ಅ.ಪ ಗ್ರಾಸ ಬೇಡಿದ ಮುನಿಯಾಶೆಯ ತಣಿಸಿದ ದಾಶರಥಿಯ ಭಕ್ತ ದೇಶಿಕವರ್ಯರ 1 ಸಂತಾನಸೌಭಾಗ್ಯ ಚಿಂತಿತಾರ್ಥವನೀವ ಪಾದ ಸ್ವಾಂತದಿ ಭಜಿಸುವ 2 ಅಜ್ಞಾನ ತಿಮಿರಕ್ಕೆ ಸುಜ್ಞಾನಪರಿಪೂರ್ಣ ಪ್ರಜ್ಞರ ಗುರುವ್ಯಾಸರಾಜ್ಞಾಧಾರಕರಾದ 3
--------------
ಲಕ್ಷ್ಮೀನಾರಯಣರಾಯರು
(ಅ) ಗೋಪಾಲಕುಲ ಬಾಲ ಗೋವಿಂದ ಗುಣಶೀಲ ನೀ ಪಾಲಿಸೆನ್ನನು ದೇವ ಪ ಶರನಿಧಿ ಸಂಚಾರ ವರ ಮಂದರೋದ್ಧರ ಪರಮಾತ್ಮ ಭೂಧರ ದೇವ 1 ನರಭಕ್ತ ಭಯಹಾರ ಸುರಕಾರ್ಯಕೃತ ಧೀರ ಧರಣೇಸುರೇಶ್ವರ ದೇವ 2 ಸಕಲಾರ್ತಿಹರ ಶÀೂರ ಕುರುತೇಷ್ಟದಾತಾರ ವಿಕಟಾರ್ತ ಶ್ರೀಕರ ದೇವ 3 ಕಲಿದೋಷ ಪರಿಹಾರ ಸಲೆ ಧರ್ಮವಿಸ್ತಾರ ಜಲಧೀಶ ಮಂದಿರ ದೇವ 4 ಶ್ರೀಕಾಂತ ಶ್ರೀಮಂತ ಶ್ರೀಕೃಷ್ಣ ಜಯವಂತ ನೀ ಪಾಲಿಸೆನ್ನನು ದೇವ 5
--------------
ಲಕ್ಷ್ಮೀನಾರಯಣರಾಯರು
(ಅ) ಜಯಜಯತು ಶ್ರೀರಾಮ ಜಯಜಯತು ಘನಶ್ಯಾಮ ಜಯಜಯತು ಮುನಿಪ್ರೇಮ - ರಿಪು ಭೀಮ ಜಯಜಯತು ಸುರಸ್ತೋಮ - ವಿನಮಿತ ಮಂಗಳ ನಾಮ ಜಯತು ಸದ್ಗುಣಧಾಮ - ರಘುರಾಮ 1 ಆನಂದ ಜ್ಞಾನದನೆ - ಆನಂದ ಮಾಸದನೆ ಆನಂದ ಸಿದ್ಧಿದನೆ - ಅನಘನೇ ಆನಂದ ಮಂದಿರನೆ - ಆನಂದ ಚಂದಿರನೆ ಆನಂದ ಸುಂದರನೆ - ಅಘಹಾನೇ 2 ಸುರಾರಿದರ್ಪಹರ - ಪುರಾರಿ ಮಿತ್ರವರ ದರಾರಿ ಅಭಯಕರ-ಸುಕುಮಾರ ಕಾರುಣ್ಯಪಾಂಗವರ-ಲಾವಣ್ಯರೂಪಧರ ವರೇಣ್ಯನಿಕರ - ಸಿರಿಕಾಂತ 3
--------------
ಲಕ್ಷ್ಮೀನಾರಯಣರಾಯರು
(ಅ) ತಂದೆ ಮುದ್ದುಮೋಹನ ದಾಸರೆನಿಸಿದ ತಂದೆ ಶ್ರೀ ಗುರುವರ್ಯರೆ ಪ. ತಂದಿರಿ ಜ್ಞಾನಾಂಬುಧಿ ಮಧ್ಯದೊಳಗೀಗ ತಂದಿಹ ಎನ್ನ ದುಷ್ಕರ್ಮವ ತರಿಯುತ ಅ.ಪ. ಬಂದೆನು ಭವದೊಳು ನಿಂದೆನು ತಾಪದಿ ಮಂದಮತಿಯಿಂದ ಜಗದೊಳಗೆ ಕುಂದುಗಳೆಣಿಸದೆ ಬಂದು ದರ್ಶನವಿತ್ತು ಕಂದನಂದದಿ ದಯದಿಂದ ಪಾಲಿಸಿದಿರಿ 1 ಯೋಗಿಗಳೆನಿಸಿದ ಭೋಗಿವರರೆ ಶಿರ ಬಾಗಿ ನಮಿಸುವೆ ಈಗ ನಾನು ನಾಗಶಯನನ ತೋರಿ ಬೇಗ ಪಾಲಿಸಿರಿ ಪೋಗುತಿದೆ ದಿನ ಜಾಗು ಮಾಡದೆ ಮುನ್ನ 2 ನರಸಿಂಹನನು ಹೃತ್ಸರಸಿಜದಲಿ ಕಾಂಬ ಗುರುವರ ನಿಮ್ಮಂಘ್ರಿಗೆರಗುವೆನು ಪರಿಪರಿ ತಾಪವ ಹರಿಸಿ ಎನ್ನ ಮನ ಹರಿಗುರು ಚರಣದೊಳಿರುವಂತೆ ಕೃಪೆಗೈದೆ 3 ಪರಮ ಗುರುಗಳಿಗೆ ಪ್ರಿಯರಾಗಿ ಇಳೆಯೊಳು ಚರಿಸಿ ಸುಜನರ ಪಾವನಗೈದು ಪರಮ ಗುಪ್ತದಿಂದ ಹರಿಯ ಧ್ಯಾನಿಸುತ್ತ ಧರೆಯೊಳಗಿರುವ ಪಾಮರರ ಮೋಹಿಸುವಂಥ 4 ಕಷ್ಟವ ಬಿಡಿಸಿರಿ ತುಷ್ಟರಾಗಿ ನೀವೆ ಇಷ್ಟು ಪರಿಯಿಂದ ಬೇಡಿಕೊಂಬೆ ಇಷ್ಟದೈವರು ನೀವೆ ಶ್ರೇಷ್ಠ ಶ್ರೀ ಗೋಪಾಲ ಕೃಷ್ಣವಿಠ್ಠಲನ ಉತ್ಕøಷ್ಟದಿ ತೋರಿರಿ5
--------------
ಅಂಬಾಬಾಯಿ
(ಅ) ಧಾಮ - ನಿಸ್ಸೀಮ ಸುಮನೋರಮ ಪ ಕಾಮಾರಿಸ್ತುತ ಮಂಗಳನಾಮ ಅ ದುರಿತ ವಿದೂರ ಕರುಣಾಕರ ಸುಂದರ ಗಂಭೀರ 1 ದೀನೋದ್ಧಾರ ವಿಪಿನವಿಹಾರ ದಾನವಹರ ಸುರಕಾವ್ಯ ವಿಚಾರ 2 ಸೀತಾನಾಥ ವಾನರಯೂಥ ವಾತಾತ್ಮಜ ನುತ ಶ್ರೀ ಲಕ್ಷ್ಮೀಕಾಂತ 3
--------------
ಲಕ್ಷ್ಮೀನಾರಯಣರಾಯರು
(ಅ) ಪರತರ ಕರುಣಾಕರ ವಿಧಿಮುಖ ಸುರವರ ನುತಚರಣಯುಗ ಪಾಹಿ ಪ ಭವಭಯಸಾಗರ ತರಣಿಯೆಂದೆನಿಸಿದೆ ತವಪದ ಧ್ಯಾನವ ಸದಾ ಕೊಟ್ಟೆನ್ನನು 1 ತರಳನ ಬಾಧಿಪ ದುರಳನ ಸಭೆಯಲಿ ನರಮೃಗ ರೂಪವ ತಾಳಿ ನೀ ಬಂದೆಯೋ 2 ಸಕಲ ಚರಾಚರದೊಳಗೆ ನೀನಿರುವುದು ಪ್ರಕಟಿಸಿ ತೋರಿದೆ ಶ್ರೀಕಾಂತ ಶಾಶ್ವತ 3
--------------
ಲಕ್ಷ್ಮೀನಾರಯಣರಾಯರು
(ಅ) ಪರತರ ಪಾವನ ಶ್ರೀರಾಮ ಜಯ ಪ ಶರಣ ಜನಾವನ ಶ್ರೀರಾಮ ಜಯ ಅ.ಪ. ಖರತರ ನಿಶಾಚರ ದಹನ ಪರಾವೃತ ಸರಸಿಜಭವನುತ ಶ್ರೀರಾಮಜಯ 1 ಸೀತಾಲಕ್ಷ್ಮಣ ಭರತ ಶತ್ರುಹನ ವಾತಜ ಸೇವಿತ ಶ್ರೀರಾಮ ಜಯ 2 ಸ್ವಾಂತ ಧ್ವಾಂತ ನಿಕೃಂತ ಲಕ್ಷ್ಮೀ- ಕಾಂತ ನಮೋ ನಮೋ ಶ್ರೀರಾಮ ಜಯ 3
--------------
ಲಕ್ಷ್ಮೀನಾರಯಣರಾಯರು
(ಅ) ಪಾಲಯ ಶರಣಾಭರಣ ಹರಿ ಪಾಲಯ ಶರಣಾಭರಣ ಪ ಶೌರಿ ದುರಿತ ವಿದಾರಿ ಘೋರಧ್ವಾಂತ ಹರಿ ವೀರ ನರಸಿಂಹ ತೇನಮೋ ಪರಾತ್ಪರ ಕೃಪಾಕೂಪಾರ 1 ತಾತನ ಖತಿಗೆ ಭೀತಿಯ ಪಡದೆ ನಾಥ ಬಾರೆನಲು ಆಮರಸ್ಥಂಭದಲೀ ತಕ್ಷಣದೊಳು ಮೈದೋರ್ದೆ 2 ತುಡುಕೀ ಖಳನಾ ಪಿಡಿದೂ ಅವನಾ ಬಡಿದೂ ನೆಲಕೊರಿಸೇ ನೋಡಿ ಪಾಡೆ ಭಕ್ತನಾ ಕಾಪಾಡಿದೆ ನಮೋ ಶ್ರೀಕಾಂತ 3
--------------
ಲಕ್ಷ್ಮೀನಾರಯಣರಾಯರು
(ಅ) ಬಾರೋ ವರಶೂರ ಕುಮಾರ ಸುಂದರಾಕಾರ ಪ ಪರಾತ್ಪರ ಕೃಪಾಕರ ಸುರೇಶ್ವರ ಹಿತಕರ ಅ.ಪ ವೇದವ ತಂದಿತ್ತನೆ ಭೂಧರವೆತ್ತಿದನೆ ಮೇದಿನೀ ಸಾಧಕನೆ ಅದ್ಭುತ ವಿಕ್ರಮನೆ 1 ವಾಸವ ವಂದಿತನೆ ಭೂಸುರ ವರದನೆ ಪಾಶೀನುತಮಹಿಮನೆ ಕೇಶವನೆ ದೇರ್ಶಿಕನೆ 2 ವ್ಯಾಕುಲ ಕಳೆವನೆ ಕಾಕೋದರಶಯನನೆ ಸಾಕುವ ಶ್ರೀಕಾಂತನೆ ಏಕಾ ಮೇವಾ ದ್ವಿತೀಯನೆ 3
--------------
ಲಕ್ಷ್ಮೀನಾರಯಣರಾಯರು
(ಅ) ಮಂಗಳಾರತಿಯನ್ನು ಬೆಳಗಿರೆ - ಮಂಗಳಾಂಗಿಯರೆಲ್ಲರು ಪ ಅಂಗನಾಮಣಿ ಗೌರಿದೇವಿ-ಶುಭಾಂಗ ಮೃದ್ಛವ ಗಣಪಗೆ ಅ.ಪ ದಾಸರೀಪ್ಸಿತವನ್ನು ಸಲಿಸುವ ಈಶನಂದನ ಗಣಪಗೇ ಪಾಶ ಅಂಕುಶ ಧರಿಸಿಹ ವಿಘ್ನೇಶ ವಿಘ್ನ ವಿನಾಶಗೇ1 ವಿದ್ಯವೀವಗೆ ಬುದ್ಧಿ ಕೊಡುವಗೆ ಸಿದ್ಧಿದಾಯಕ ಗಣಪಗೇ ಶುದ್ಧಮನದಲಿ ಶರಣುಹೊದ್ದಲು ಉದ್ಧರಿಪ ಸದ್ದಯನಿಗೇ 2 ಇಕ್ಷುಚಾಪನ ಲಕ್ಷ್ಯಮಾಡದೆ ದಕ್ಷನಾಗಿಹ ಗಣಪಗೇ ಕುಕ್ಷಿಯೊಳು ಜಗವಿಟ್ಟು ರಕ್ಷಿಪ ಲಕ್ಷ್ಮೀಕಾಂತನ ಭಜಕಗೇ 3
--------------
ಲಕ್ಷ್ಮೀನಾರಯಣರಾಯರು
(ಅ) ಮಾಡುವುದೋ ಕೃಪೆ ದಾಸನೊಳು ರಾಮ ಮಾಡುವುದೋ ಕೃಪೆ ದಾಸನೊಳು ಪ ನೋಡ ನೋಡುತ ಕೈಯ್ಯ ಬಿಡುವರೆ ಬೇಡ ಬೇಡಿಕೊಂಬೆನು ರೂಢಿಯೊಳು ನಿನ್ನಂಥ ಕರುಣಿಯ ನೊಡಲಿಲ್ಲವೋ ಎಲ್ಲಿಯು ಅ ಬಂದೆನೋ ನಾನಾ ಜನ್ಮದಲೀ | ರಾಮ ನೊಂದೆನೋ ನಾ ಬಹು ಭವಣೆಯಲೀ ದ್ವಂದ್ವ ದುಃಖದಿ ಕಂದಿ ಕುಂದುತ ಮುಂದುಗಾಣದೆ ಕೆಟ್ಟೆನೋ ಕಂದನೆನ್ನುತ ಬಂದು ಪೊರೆ ಪರಮಾತ್ಮ ನಂಬಿದೆ ನಿನ್ನನು 1 ದಾನ ಧರ್ಮಗಳ ನಾನರಿಯೆ | ರಾಮ ಮೌನ ಮಂತ್ರಗಳ ನಾನರಿಯೆ ಧ್ಯಾನ ಧಾರಣ ಜ್ಞಾನಸಾಧನವೇನೊಂದನು ಅರಿಯೆ ಹಾನಿಯಿದ ನಾನೇನನೊರೆಯಲಿ ಮಾನನಿಧಿ ನಿನ್ನವನು ನಾ 2 ಕಾಮಿನಿ ಕಾಂಚನ ಭೂಮಿಗಳ | ರಾಮ ಕಾಮಕೆÉ ಸಿಕ್ಕಿದೆನೋ ಬಹಳ ನೇಮ ನಿಷ್ಠೆಗಳೇನೂ ಇಲ್ಲದೇ ತಾಪದಿ ನಾ ಕೆಟ್ಟೆನೋ ನಾಮಸುಧೆಯ ಪಾನ ಕರುಣಿಸು ಪ್ರೇಮದಲಿ ಶ್ರೀಕಾಂತನೇ 3
--------------
ಲಕ್ಷ್ಮೀನಾರಯಣರಾಯರು
(ಅ) ಯಾಕೆ ಬಾರದೋ ದಯವು ಶ್ರೀಹರೀ ಪ ಲೋಕನಾಥ ನಿನಗೆ ಅಹಿತನೆ ನಾನು ನೂಕದಿರೆನ್ನ ಭವದೀ - ಶ್ರೀ ಹರೀ 1 ಆರು ನಿನ್ನ ಹೊರತೂ ಪೊರೆವರೋ ಶೌರೀ ಭೂರಿ ಕರುಣಾಶರಧೀ - ಶ್ರೀ ಹರೀ 2 ಚಿಂತಿತಾರ್ಥವನು ಕೊಡುವ ಶ್ರೀಕಾಂತ ಅಂತು ಕೃಪೆಯಿಂ ಪೊರೆಯೋ - ಶ್ರೀ ಹರೀ 3
--------------
ಲಕ್ಷ್ಮೀನಾರಯಣರಾಯರು