ಒಟ್ಟು 2773 ಕಡೆಗಳಲ್ಲಿ , 112 ದಾಸರು , 1907 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೊಟ್ಟೆ ಎಲೆ ಹೊಟ್ಟೆ ಭ್ರಷ್ಟ ನಿನಗಾಗಿ ಜಗದೊಳು ನಾ ಕೆಟ್ಟೆ ಪ ಜನರ ಗೋಣು ಮುರಿದೆ ನಿನಗಾಗಿ ಪರರಿಗ್ಹಾನಿ ಬಯಸಿದೆ ನಿನಗಾಗಿ ಮಾನಹೀನಾದೆನು ನಿನಗಾಗಿ ಮಾಣದ ಅಪವಾದ ಕ್ಷೋಣಿಯೊಳ್ಹೊತ್ತು ನಾ ಕ್ಷೀಣಿಸುತಿರುವೆನು ಗೇಣ್ಹೊಟ್ಟೆ ನಿನಗಾಗಿ 1 ಬಹು ಸುಳ್ಳನಾಡಿದೆ ನಿನಗಾಗಿ ಮಹ ಕಳ್ಳನೆನಿಸಿದೆ ನಿನಗಾಗಿ ತೊರೆದೊಳ್ಳೆಗುಣವ ನಿನಗಾಗಿ ಗುರು ತಳ್ಳಿಬಿಟ್ಟೆನು ನಿನಗಾಗಿ ತಿಳಿಯದೆ ಕೆಟ್ಟೆನು ಇಳೆಯೊಳು ತಿರುಗುತ ಕಳವಳಿಸುತಲತಿಲೊಳ್ಳೊಟ್ಟಿ ನಿನಗಾಗಿ 2 ನಿನ್ನ ನಂಬಿ ಮರೆದೆ ರಾಮನಾಮ ನಿನ್ನ ನಂಬಿ ತೊರೆದೆ ನಿತ್ಯನೇಮ ನಿನ್ನ ನಂಬಿ ಪಡೆಯದ್ಹೋದೆ ಕ್ಷೇಮ ನಿನ್ನ ನಂಬಿ ಬಿಟ್ಟೆನು ಅತಿಶ್ರಮ ನಿನ್ನಿಂದ ಮತಿಗೆಟ್ಟೆ ನಿನ್ನಿಂದ ವ್ಯಥೆಪಟ್ಟೆ ನಿನ್ನಿಂದ ಗತಿಗೆಟ್ಟೆ ಸತತ ಭುವನದೊಳು 3
--------------
ರಾಮದಾಸರು
ಹೊತ್ತು ವ್ಯರ್ಥಾ ಹೋಗುತಿದಕೋ ಮುತ್ತಿನಂಥಾ ಪ ಹೋಗುತಿದೆ ಮುತ್ತಿನಂಥಾ ದಿನದೊಳು | ಚಿತ್ತ ಸ್ವಸ್ಥ ಮಾಡಿ ಪುರುಷೋತ್ತಮನ್ನ ನೆನೆಯಿರೋ ಅ.ಪ ಉತ್ತುಮರ ಸಂಗಡದಲ್ಲಿ | ನಿತ್ಯ ಶ್ರವಣಮನನ ಮಾಡಿ | ಅತ್ತಲಿತ್ತಲಾಗದೆ | ಸು | ವೃತ್ತಿಯೊಳು ಬೆರಿಯಿರೋ 1 ಪಗಡಿ ಪಂಚಿಯಾಡಿ ಪರರಾ | ಬಗಲಿ ಕಳೆದು ಕಳೆವದೇನು | ಯುಗುತಿ ಹೀನ ರಾಗದೆ | ಪಥ ಪಡಿಯಿರೋ 2 ಮಂದ ಮತಿಯ ಕೊಂಡ್ಯಾಡಿ | ಮಂದ ಮತ್ತೆ ದೊರೆಯದಿದ್ದ | ಇಂದು ನಾಳೆಗೆನ್ನದೇ ಮು | ಕುಂದ ನಾಮವ ನೆನೆಯಿರೋ 3 ಇಂದು ನರದೇಹದಿಂದ | ಬಂದು ಬರಡ ಮಾಡಬ್ಯಾಡಿ | ತಂದೆ ಮಹಿಪತಿ ದಯ | ದಿಂದ ಮುಕ್ತಿಯ ಪಡೆಯಿರೋ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೊರಗ್ಹೋಗಿ ಆಡಬೇಡವೋ ಕಂದಾ ಮಹಾನಂದಾ ಬಹುಸರಸಿಜಾಕ್ಷಿಯರು ದೂರುವರೋ ಗೋವಿಂದಾ ಬಾ ಮನೆಗೆ ಮುಕುಂದಾ ಪ ಹೆಂಗಸ ಕೊಂದನೆಂಬುವರು ಮನೆ ಅಂಗಳದೊಳಗೆ ಬಚ್ಚಿಟ್ಟು ಕೊಂಬುವರೋಶೃಂಗಾರದಲಿ ಮೋಹಿಸುವರೋ ತಮ್ಮ ಕಂಗಳಿಂದಲಿನೋಡಿ ದೃಷ್ಟಿ ಬಿಡುವರೋ1 ಕಳ್ಳತನವ ಕಲಿಸುವರೋ ಏನ ಬಲ್ಲೆ ಕಂದಮ್ಮ ನೀ ಸುಳ್ಳಕಲಿಸುವರೋಒಳ್ಳೆಯವರಲ್ಲ ಗೋಪಿಯರು ಗ್ರಾಮದಲೆ ನಿಲ್ಲಲು ಕೆಟ್ಟ ಸೊಲ್ಲನಾಡುವರೋ2 ಸುಂದರ ಸೌಭಾಗ್ಯನಿಧಿಯೇ ನಿನ್ನಒಂದು ಕ್ಷಣವು ಬಿಟ್ಟು ಇರಲಾರೆ ಹರಿಯೇ ಇಂದಿರೇಶನಸುರ ದೊರೆಯೇ 3
--------------
ಇಂದಿರೇಶರು
ಹೋಗಿ ಗುಡಿಯೊಳಗುಂಡು ಬೇಗ ಬಾರೋಭೋಗಿ ವರ ಕಾಲಿಂಗ ನಾಗ ಮರ್ದನನೇ ಪ ಸರಸಿಜಾಸನ ಬ್ರಹ್ಮ ಸರಸತಿಯ ಒಡಗೂಡಿಸಿರಿ ರಮಣ ವೈಕುಂಠ ಗಿರಿವಾಸನೆಸುರ ನದಿಯ ಜಲದಿಂದ ಎರಡು ತುಳಸಿ ಗಂಧಪರಮ ಕುಸುಮಗಳಿಂದ ಪರಿಚರಿಸುತಲಿಹರು 1 ತರಣಿ ಸಹ ಬಂದಿಹನುಸುರರ ತರುಣಿಯರೆಲ್ಲ ನೆರಹಿಕೊಂಡಿಹರು2 ಸುಂದರಾಂಗಿಯು ಬಕುಲೆ ಮಿಂದು ಪಾಕವ ಮಾಡಿತಂದಿಹಳು ಕ್ಷಿರಾಬ್ಧಿ ನಂದನೆಯುಇಂದಿರೇಶಗೆ ಕಾಮಿತೊಂದೊಂದೆ ಬಡಿಸುವಳುನಂದ ಸುಕುಮಾರ ಗೋವಿಂದ ಗಜವರದಾ 3
--------------
ಇಂದಿರೇಶರು
ಹೋಗಿ ಬರತೇವ ಸಾಗರನ ಮಗಳೆ ಹೋಗಿ ಬರತೇವ ಪ. ರುಕ್ಮಿಣಿದೇವಿ ನಿನ್ನ ದುರ್ಗೆರೂಪವ ಕಂಡು ಅಬ್ಬರಿಸುತಾರೆ ಜನರೆಲ್ಲ ಅಬ್ಬರಿಸುತಾರೆ ಜನರೆಲ್ಲ ಮುಯ್ಯಕ್ಕೆನಿರ್ಭಯದಿಂದ ಬರಬೇಕು ಸಖಿಯೆ 1 ಹಿಂಡು ಹಿಂಡು ಕರೆಸಿ ಕುಣಿಸುತ ಖ್ಯಾತಿಲೆ ಮುಯ್ಯ ತಿರುಗಿಸೆ ಸಖಿಯೆ2 ಹಿಂಡು ಕರೆಸವ್ವ ಸಖಿಯೆ 3 ರಂಭೆ ಸತ್ಯಭಾವೆ ಸಂಭ್ರಮದಿ ಬರುವಾಗ ಒಂಭತ್ತು ವಾದ್ಯ ನಿನಗೆಲ್ಲೆಒಂಭತ್ತು ವಾದ್ಯ ನಿನಗೆಲ್ಲೆ ಮುಯ್ಯಕ್ಕೆಡೊಂಬರ ಡೊಳ್ಳು ಹೊಯಿಸವ್ವ ಸಖಿಯೆ 4 ಹಿಂಡು ಬರಲೆವ್ವ ಸಖಿಯೆ 5 ಆವ್ವ ರುಕ್ಮಿಣಿ ನಿನಗೆ ದಿವ್ಯವಾಹನ ವೆಲ್ಲಿಸಿಂಹ ಶಾರ್ದೂಲ ಕರೆಸವ್ವಸಿಂಹ ಶಾರ್ದೂಲ ಕರೆಸಿ ಏರಿಕೊಂಡುಬಾವಾನ ಹಾಂಗೆ ಬಾರವ್ವ ಸಖಿಯೆ 6 ಕೋಗಿ¯ ಸ್ವರದಂತೆ ರಾಗದಿ ರಾಮೇಶನ ಪಾಡಿ ಕೊಂಡಾಡಿ ಅರಿತಿಲ್ಲಪಾಡಿ ಕೊಂಡಾಡಿ ಅರಿತಿಲ್ಲ ಒಡಗೂಡಿ ಕಾಗೆ ಕೂಗಾಡಿ ಬರಲೆವ್ವ ಸಖಿಯೆ7
--------------
ಗಲಗಲಿಅವ್ವನವರು
ಹೋಗುಣು ನಡಿ ಸಾಧುರ ನೋಡುವಾ ಬೇಗ ಪ್ರಾಣನಾಥನ ಕೂಡುವಾ ಪ ವ್ಯರ್ಥ ಆಯುಷ್ಯ ವೆಚ್ಚ ಮಾಡಬೇಡಿ ಹಿತಾಹಿತ ವಿವರಿಸಿ ನೋಡಿ |ನೀತಿ ಮಾರ್ಗದಲಿ ನಡೆದಾಡಿಭೀತಿ ಭ್ರಮೆ ಮೂಲದಿ ಹೋಗಾಡಿ 1 ಮನಸಿನ ಕಲ್ಪನೆಯ ಬಿಟ್ಟುಗುಣತ್ರಯದ ವೃತ್ತಿ ಕಡೆಗಿಟ್ಟು |ಪೂರ್ಣ ಜ್ಞಾನ ವೈರಾಗ್ಯ ಒತ್ತಿಟ್ಟುಘನ ಹರುಷ ತಮ್ಮೊಳಗಿಂಬಿಟ್ಟು 2 ನಾನಾ ತೀರ್ಥ ಉಂಟು ಸಾಧುರಲ್ಲಿನಾನೇನೆಂದು ಆ ಸುಖ ಹೇಳಲಿ |ಜ್ಞಾನಾಂಬುಧಿ ಸಾಧುರೇ ನೋಡಲಿಜ್ಞಾನಬೋಧ ಸಾರಿದ ಭಕ್ತೀಲಿ 3
--------------
ಜ್ಞಾನಬೋದಕರು
ಹೋಗುತಾದೋ ಹೊತ್ತು ಹೋಗುತಾದೋ ಸಾಗಿ ಮುಂಚೆ ಮತ್ತೆ ತಿರುಗಿ ಬಾರದಂತೆ ಪ ಹಿಂದಿನ ಸುಕೃತದಿಂದ ಒದಗಿದಂಥ ಸುಂದರಮಾದ್ಹೊತ್ತು ಎಂದೆಂದು ಸಿಗದಂತೆ 1 ಅರ್ತುಕೊಂಡವರಿಗೆ ಸಾರ್ಥಕಗೊಳಿಸುತ್ತ ಮರ್ತಕರಿಗೆ ಮತ್ತೆ ಗುರ್ತು ತೋರದಂತೆ 2 ಎಷ್ಟೆಷ್ಟೋ ಯೋನಿಯೊಳ್ಹುಟ್ಟ್ಹುಟ್ಟಿ ಬಲಗೋ ಳಿಟ್ಟು ಪಡೆದ ಹೊತ್ತು ನಷ್ಟವಾಗುತ ವ್ಯರ್ಥ 3 ಅಘನಾಶಗೊಳಿಸಿ ಬಹು ಮಿಗಿಲಾದ ಪದವೀನ ಸಿಗದಂಥ ವಸ್ತಿದು ಅಗಲಿ ತಾ ಸುಮ್ಮನೆ 4 ನೇಮವಲ್ಲೆಲೋ ಮತ್ತೆ ಆ ಮಹ ಸಮಯವು ಪಡಿ 5
--------------
ರಾಮದಾಸರು
ಹೋಗುತಿದೆ ಹೊತ್ತು ಬರಿದೆ ವ್ಯರ್ಥವಾಗಿಹರಿಗುರುಗಳ ನೆನೆಯದೆ ಪ. ನರರ ನೂರಮೂವತ್ತೆರಡುಕೋಟಿವರುಷ ದಿವಸವೊಂದೆ ಬೊಮ್ಮಗೆಪರೀಕ್ಷಿಸಲು ಬ್ರಹ್ಮಕಲ್ಪಸಾಸಿರ ಕೋಟಿನರಕದೊಳಗೆ ಬಿದ್ದು ಮರಳಿ ಭವದಿ ಬಂದು1 ಒಂದೊಂದಕೆ ಇಪ್ಪತ್ತೊಂದುಲಕ್ಷ ಯೋನಿಎಂದೆನಿಸುವ ಸ್ವೇದಜ ಉದ್ಬಿಜಬಂದು ಜರಾಯುಜಾಂಡಜ ಕುಲದಿ ಪುಟ್ಟಿನೊಂದೆ ಎಂಬತ್ತುನಾಲ್ಕುಲಕ್ಷ ಯೋನಿಯಲಿ 2 ಮಾಸ ಒಂಭತ್ತು ಮತಿಗೆಟ್ಟು ಗರ್ಭದಿಹೇಸದೆಬಂದು ಜೀವಿಸಿ ಬಳಲಿಮೋಸವನರಿಯದೆ ಮುನ್ನಿನ ಕರ್ಮದಿಘಾಸಿಯಾದೆನೊ ಯೌವನಮದದಿ ಸೊಕ್ಕಿ 3 ಕೆಲಹೊತ್ತು ಚದುರಂಗÀ ಪಗಡೆ ಆಟಗಳಿಂದಕೆಲಹೊತ್ತು ಹಸಿವೆ ನಿದ್ರೆಗಳಿಂದಲಿಕೆಲಹೊತ್ತು ಕಾಕಪೋಕರ ಕತೆಗಳಿಂದಕೆಲಹೊತ್ತು ಪರನಿಂದೆ ಪರವಾರ್ತೆಗಳಿಂದ 4 ಕಾಲವು ಕಡೆಯಾಗಿ ಹರಿ ನಿಮ್ಮನರ್ಚಿಸೆವೇಳೆಯಿಲ್ಲದೆ ಹೋಯ್ತು ಬಂಜೆಯಾಗಿಜಾಲಿಸಿಹೋಗುತಿದೆ ಈ ವಿಧದಿ ಹೊತ್ತು ಬೇಗನೆಪಾಲಿಸಿ ದಯಮಾಡೊ ಸಿರಿಹಯವದನ 5
--------------
ವಾದಿರಾಜ
ಹೋತಾರ ಪರುವಾಸ ಶ್ರೀ ಲಕ್ಷ್ಮೀಶಾ ಪ ಶ್ರವಣ ಮನನ ನಿದಿಧ್ಯಾಸನಗಳಿಂದ ಭವ ಪರಿಹಾರ ನಿಮ್ಮ ನಾಮ ಗೋವಿಂದ 1 ಭಕ್ತ ----------------------- ----------------ಭಜಿಸುವನೇಕ 2 ಪನ್ನಗಶಯನ ಸುಪನ್ನಗ ವಾಹನ ಹೆನ್ನೆವಿಠಲರಾಯ ಮೋಹನ 3
--------------
ಹೆನ್ನೆರಂಗದಾಸರು
ಹೋದುದಿನ್ಯಾರಿಗೆ ಹೇಳೋಣ ಹೊಲಮೆದ್ದರಾರಿಗೆ ಹೇಳೋಣ ಪ ಎದ್ದನು ದುರ್ಜನ ಬಿದ್ದಬಿನುಗು ಪ್ರಜೆ ಉದ್ದ ಗುದ್ದಗಳೆಲ್ಲ ಸಮನಾಯಿತು ಇದ್ದ ಹೆಣ್ಮಕ್ಕಳ ಮೈಮೇಲಕೆ ಒಂದು ಉದ್ದಿನ ಕಾಳಷ್ಟು ಚಿನ್ನಗಳಿಲ್ಲ 1 ಕಂಚು ತಾಮ್ರವು ಮಾರಿಹೋಯಿತು ಕೊಂಚ ತಣ್ಣೀರ ಕೊಳ್ಳಲಿಕ್ಕಿಲ್ಲ ಸಂಚ ಕಾರವು ಪ್ರಾಣಕಾಯಿತು ನಾವಿನ್ನು ಪಂಚತ್ವವ ನ್ನೈದಿದರೊಳ್ಳಿತು ಎಂಬರು 2 ಭೂರಿ ಹೇಮರಜತಗಳ ಮಾರಿಯಾಯಿತು ಭಾರಿ ತೆರಿಗೆ ಶ್ರಮಸೀಮೆ ಪ್ರಜೆಗಳಿಗಾಯ್ತು ಭೀಮನ ಕೋಣೆ ಲಕ್ಷ್ಮೀರಮಣನ ನಂಬಿ ಭಿಕ್ಷೆಗೆ ಮನವ ತಾಳಿರಣ್ಣ 3
--------------
ಕವಿ ಪರಮದೇವದಾಸರು
ಹೋದ್ಯಾ ಶೇಷಗಿರಿದಾಸ ಸುಲಭ ಹಾದಿಯನು ಮೆಟ್ಟಿ ನಮ್ಮನು ಭವಾಬ್ದಿಯೊಳಿಟ್ಟು ಪ ಸಲಹಿದೆನು ಸಾಕಿದೆನು ಕಾಲಕಾಲಕೆ ನೋಡಿ ತಿಳಿಸಿದೆನು ತತ್ವಗಳು ನಿರುತ ಬಿಡದೆ ಬಳಿವಿಡಿದು ತಿರುಗಿ ಉಣಿಸಿದೆನು ಉಡಿಸಿದೆನು ವೆ- ಗ್ಗಳವಾಗಿ ನೋಡಿ ಸುಖಿಸಿದೆನೊ ಮಾತಾಡಿ 1 ನಿನ್ನ ಮ್ಯಾಲಿನ ಕರುಣ ಕಮಲಾಕ್ಷ ವೇಗದಲಿ ಎನ್ನಮ್ಯಾಲೆ ಇನ್ನು ಮಾಡಲಿಲ್ಲ ಮುನ್ನೆ ಸಾಧನ ಪೂರ್ತಿ ನಿನಗಾಯಿತೇನೋ ಸಂ ಪನ್ನಮತಿ ಉಳ್ಳವನೆ ಸಜ್ಜನ ಶಿರೋಮಣಿ 2 ಧಿಕು ಎನ್ನ ಜನುಮ ನಿನ್ನಂಥ ಪ್ರಿಯನ ಬಿಟ್ಟು | ಅಕಟಕಟ ಭೂಮಿಯೊಳು ಬದುಕುವದೂ | ಸಿರಿ ವಿಜಯವಿಠ್ಠಲ ನಿನ್ನ ಭಕುತಿಗೆ ಮೆಚ್ಚಿ ತಡಮಾಡದಲೆ ಕರದೊಯ್ದು 3
--------------
ವಿಜಯದಾಸ
ಹೋದ್ರೆ ಹೀಗೆ ಹೋಗಬೇಕು ಗೂಡಿನಿಂದ ಜೀವನ ಸಾಧನೆಯನ್ನು ಮಾಡಿದಾತ ಲಾಗವನ್ನು ಹಾಕಿದಂತೆ ಪ ಬೇನೆ ಮೈಯೊಳೇನು ಇಲ್ಲದೆ ಜ್ಞಾನವಿದ್ದು ಎಚ್ಚರಿದ್ದು ಕಾನ ಕಪಿಯ ಮೇಲï ಮನಸು ಹೀನವೃತ್ತಿಗೆ ಹೊಗದಂತೆ 1 ಹುಚ್ಚುಗೊಳದೆ ಭಂಗಿಯನ್ನು ಹಚ್ಚದಾತ ಕುಣಿಯುವಂತೆ ಸ್ವಚ್ಛವಾಗಿ ಕಾಯದೊಳಗೆ ತುಚ್ಛಮನವು ಇಲ್ಲದಂತೆ 2 ಅತ್ತಲಿತ್ತ ಹೊಡೆಕಣಿಲ್ಲದೆ ಸುತ್ತ ಮುತ್ತ ಕಾದುಕೊಂಡ ಪುತ್ರಮಿತ್ರ ಕಳತ್ರದಲ್ಲಿ ಮತ್ತೆ ಮಮತೆಯಿಲ್ಲದಂತೆ 3 ನಾಭ ಹರಿಯೆ ಎನ್ನ ಸಲಹೋ ಬಿಡದೆ ಎನ್ನುತ 4 ವಾಂತಿ ಬ್ರಾಂತಿಯೆರಡು ಇಲ್ಲದೆ ಉತ್ಕ್ರಾಂತಿ ಕಾಲದಲ್ಲಿ ಲಕ್ಷ್ಮೀ ಜಿಹ್ವೆ ನಿರಂತರದಲ್ಲಿ ನುಡಿಯುತಿರ್ದ 5
--------------
ಕವಿ ಪರಮದೇವದಾಸರು
ಹೋಯಿತು ಪರಶುರಾಮನ ದಂಡಿಲಿ ನಷ್ಟ ವಾಯಿತು ಜನರೆಲ್ಲ ಹೊಡೆತ ಕಡಿತದಿ ಪ ಮೇಧಿನಿಯೊಳಗಣ ಜನರಿಂಗೆ ದಂಡಿಂದ ಮಣಿ ಮುತ್ತು ತೀರ್ದುದು ಕಂಚು ತಾಮ್ರಗಳು ಬಹುಕಾಲ ಸಾಧಿಸಿದೊಡವೆ ಸಾಧನ ಸಂಪತ್ತುಗಳೆಲ್ಲ 1 ಉಡುವ ತೊಡುವ ಜವಳಿ ಅಡಕೆ ಮೆಣಸು ಭತ್ತ ಕಡಿತ ಕಂಠಗಳಾಬ್ರ ಮುಡಿ ಉಪ್ಪುಗುಢಕಲ್ಲು ಗಡಿಗೆ ಮಡಕೆ ಎಣ್ಣೆ ಕೊಡವು ಕಬ್ಬಿಣದ ಕತ್ತಿ ಅಡಿಯಿಟ್ಟ ಚಿಟ್ಟು ಪಾಟ್ಟಿಗಳೊಂದುಳಿಯದಂತೆ 2 ಕೊಟ್ಟದೊಳಗೆ ಇಟ್ಟವಸ್ತು ವಡವೆಯೆಲ್ಲ ನಷ್ಟವಾಯಿತು ಹಾರೆ ಕೊಡಲಿ ಗುದ್ದಲಿ ಕುಳ ಬಟ್ಟಲು ಹಂಡೆ ಕೊಪ್ಪರಿಗೆ ಇಕ್ಕುವ ಗುಂಡಿ ಮಣಿ ಮರಿಗೆ ಸರ್ವಸ್ವವು 3 ನಗ ಯೊತ್ತು ಉಂಗುರ ಜಪಮಣಿ ಮಾಲೆ ಹವಳ ಯಾ ರೆತ್ತುವ ನಗನಾಣ್ಯವೆಲ್ಲ ಸುಲಿಗೆಯಿಂದ 4 ಅಂಧಕಾರಕೆ ನೆರವಾದಂತೆ ದುರ್ಭಿಕ್ಷ ಬಂದಿತು ಸಂಗಡ ತಂಡುಲ ಗದ್ಯಾಣವೊಂದಕೈದಾಗಿ ಮುಗಿತು ಹರಿನಂದನ ಕೋಣೆ ಲಕ್ಷ್ಮೀಶನೊಬ್ಬನೆ ಬಲ್ಲ 5
--------------
ಕವಿ ಪರಮದೇವದಾಸರು
ಹ್ಯಾಂಗಾದರು ಎನ್ನ ನೀ ರಕ್ಷಿಸ ಬೇಕೋ ಸಾಗರಶಯನ ಕೃಷ್ಣಾ ಪ ಭಾಗವತರ ಸಂಗ ಬೇಗದಿಂದಲಿ ಇತ್ತು ಹೋಗಲಾಡಿಸು ಭವವ ಶ್ರೀ ಕೃಷ್ಣ ಅ.ಪ ಬಾಲೇರ ಸಲುವಾಗಿ ಕೀಳು ಜನರಲ್ಲಿ ಶೀಲ ಜರಿದು ಯಾಚಿಸಿ ಕಾಳಿ ಮರ್ಧನ ನಿನ್ನ ಒಲುಮೆಯ ಪಡೆಯದೆ ಕಾಲ ಬಲಿಗೆ ಸಿಕ್ಕೆನೊ ಶ್ರೀ ಕೃಷ್ಣ 1 ಅಂಗಜನಾಟಕೆ ಹಗಲಿರುಳೆನ್ನದೆ ಪರ ಅಂಗನೆರ ಕೂಡಿ ಮಂಗಳಮಹಿಮ ತುರಂಗ ವದನ ದೇವ ಭಂಗಕ್ಕೆ ಗುರಿಯಾದೆನೊ ಶ್ರೀ ಕೃಷ್ಣ 2 ದುರುಳರ ಸಂಗವನೆಲ್ಲ ಜರಿದು ಶ್ರೀ ನರಹರೆ ಕಾರುಣ್ಯದಲಿ ಭಕ್ತನ ಅರಿಷಟ್ಕರನೆ ಕೊಂದು ಕರಿವರದನೆ ಘೋರ ನರಕಕ್ಕೆ ಭಯ ತಪ್ಪಿಸೋ ಶ್ರೀಕೃಷ್ಣ 3
--------------
ಪ್ರದ್ಯುಮ್ನತೀರ್ಥರು
ಹ್ಯಾಂಗಾದರ್ಹಾಂಗಾಗಲಿ ಎ- ನ್ನಿಂಗಿತವ ನೀ ಬಲ್ಲೆ ರಂಗಯ್ಯಪ ಮಂಗಳಾಂಗ ನೀ ಕೊಟ್ಟು ಸಲಹೋ ಶುಭಾಂಗ ಅ- ನಂಗಜನಕ ಭುಜಂಗಶಯನ ಮಾ- ತಂಗವರದ ಶ್ರೀ ರಂಗನಾಥನೇ1 ದೇವಾ ನಾ ಸದ್ಭಾವದಲ್ಲಿ ನಿನ್ನ ಪಾದ ಪದುಮ ನಿರುತ ಧೇನಿಸುವೆ ಪವಮಾನ ಜೀವೋತ್ತಮ ನೀ ಧರ್ಮೋತ್ತಮನೆನ್ನುವ ಭಾವ ಎನಗಾವಕಾಲದಿ ಇರಲಿ ಬೇಡೆನು ಇತರ ಸಂಪದವಾ 2 ಶ್ರೀಶಾ ಶ್ರೀ ವೆಂಕಟೇಶ ನಿರ್ದೋಷ ಗುಣ ವಾಸನೆ ನಿನ್ನ ದಾಸಜನಭವಪಾಶ ಕ್ಲೇಶ- ನಾಶನವ ಗೈಸಿ ಸಲಹುವುದು ಶೇಷಶಯನ ಶ್ರೀ ರಂಗಶಾಯಿ 3
--------------
ಉರಗಾದ್ರಿವಾಸವಿಠಲದಾಸರು