ಒಟ್ಟು 14277 ಕಡೆಗಳಲ್ಲಿ , 133 ದಾಸರು , 6728 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃತ್ತಿವಾಸನ ಪ್ರಿಯ ಪುತ್ರನೆ ಗುಹ ಸ- ರ್ವೋತ್ತಮ ಚಿದ್ರೂಪ ಪ ಚಿತ್ತಜ ಪ್ರತಿರೂಪಾ ಪ್ರತಾಪಾಅ.ಪ ದೀನತನದಿ ಕಡುಬೇನೆಯ ಪಡುತಲಿಹೀನಮನುಜನೆನ್ನಾ | ದಾನಿಯಾಗಿಹ ಕರುಣಾನಿಧಿ ಕೈಪಿಡಿ ಧ್ಯಾನಿಪೆ ನಾ ನಿನ್ನ ಪ್ರಸನ್ನ 1 ಸುತ್ತಮುತ್ತಿರುವ ವಿಪತ್ತುಗಳಾ ಭಯ ಮೆತ್ತಿಕೊಂಡಿದೆ ತಾನೇ ಸತ್ವಶಾಲಿಯೇ ನೀ ಕಿತ್ತೊಗೆಯದಿರೆ ಅ- ನ್ಯತ್ರ ಗತಿಯ ಕಾಣೆ ನಿನ್ನಾಣೆ 2 ಪಾಶ ಅಂಕುಶಧರ | ನಾ ಸಹೋದರ ಪಾವಂ- ಜೇಶ ಮಹಾನುಭಾವ | ದಾಸರಿಗೊದಗುವ ತ್ರಾಸವ ಕಳೆ ಸ- ರ್ವೇಶನೆ ಮಹದೇವಾ | ದೇವರ ದೇವಾ 3
--------------
ಬೆಳ್ಳೆ ದಾಸಪ್ಪಯ್ಯ
ಕೃಪೆಯ ತೋರಬಾರದೇನೋ | ಗೋಪಾಲರಾಯ ಪ ತಾಪತ್ರಯ ಬಲು ದೀಪನವಾಗಿದೆನೀ ಪರಿಹರಿಸದೆ ಮತ್ತೋರ್ವರನರಿಯೆ ಅ.ಪ. ಸೂನು ಶ್ರೀನಿವಾಸಾ |ಸಾರುತ ತವಪದ ಸೇವಿಸಿ ಭಕುತಿಲಿ |ದೂರೋಡಿಸಿದನು ಜವನವರಾ 1 ಗಿರಿಜಾತೆಯ ಪ್ರಿಯ ಕುವರಾ | ನೃಪವರದಶರಥ ಸುತ ಭರತಗೆ ಅವರಾ |ಮಾರುತಿ ಮತವನು ಅರುಹುತ ನೀ ಸಂಸಾರಕೆ | ತಾರಕ ನೆನಿಸಿದ ಧೀರಾ 2 ಭೋಗಿ ಶೀಲಾ | ನೀನಘದೂರ ಕಳೆಯೊ ಮೋಹಜಾಲಾ |ಭೋಗಿಶಯನ ಗುರು ಗೋವಿಂದ ವಿಠಲನಬಾಗಿ ಭಜಿಸುವಂಥ ಭಾಗ್ಯವ ನೀಯೋ 3
--------------
ಗುರುಗೋವಿಂದವಿಠಲರು
ಕೃಪೆಯಿಟ್ಟು ಸಲಹೆನ್ನ ಹರಿಯೆ ನರಹರಿಯೆ ದ್ವಿಪÀವರವರದನೇ ಬಾರಯ್ಯ ದೊರೆಯೆ ಪ ದುರಿತಹರÀ ವರ ಚರಣಕಮಲನೆ ಧರಣಿಧರವನು ಕರಸರೋಜದಿ ಧರಿಸಿ ಸುಜನರ ಪೊರೆದ ಮುರಳೀ- ಧರನೇ ಮೋದವಪಡಿಸಿದಂತೆ ಅ.ಪ ನಂದನಂದನ ನಿನ್ನ ಚರಣ ಒಂದೇ ಶರಣ ಎನಗೆಂದು ನಂಬಿರುವುದೇ ಒಳ್ಳೇ ಆಭರಣ ಇಂದಿರೇಶನೆ ಮಾಡೋ ಕರುಣ ಸಿಂಧುಶಯನ ಸುಂದರೀಮಣಿ ಸಹಿತದಲಿ ನೀ ಬಂದು ಎನ್ನಯ ಮಂದಿರದಲಿ ನಿಂದು ಎನ್ನವನೆಂದು ಭಾವಿಸಿ ನಂದಪಡಿಸೈ ನಂದಬಾಲನೆ 1 ದೀನಪಾಲನೆ ಭೂಮಿಭಾರ ಹಾನಿಕಾರ ಪಂಚ ಸೂನಶರನಪಿತ ವಿಗತವಿಕಾರ ಶ್ರೀನಾಥ ಸುಜನಮಂದಾರ ಮೀನಾಕಾರ ನಾನು ನಿನ್ನವನಯ್ಯ ಎನ್ನಯ ಮಾನ ಮತ್ತಪಮಾನ ನಿನ್ನದು ಹೀನಮತಿ ಇವನೆಂದು ತಿಳಿದುದಾ- ಸೀನಮಾಡದೆ ಸಾನುರಾಗದಿ 2 ಸೋಮ ಕುಲಾಂಬುಧಿಸೋಮರಾರಾಮ ಬಲರಾಮ ಸಹಜನೇ ಸುರರಿಪು ಭೀಮ ವಾಮಲೋಚನೇರಿಗೆ ಕಾಮ ಪ್ರೇಮಧಾಮ ಕಾಮಜನಕನೆ ಸಾಮಗಪ್ರಿಯ ನಾಮಗಿರಿ ಶ್ರೀ ರಾಮ ನರಹರೆ ಕಾಮಿತಾರ್ಥವನೀವ ಸುರತರುಕಾಮಧೇನು ಚಿಂತಾಮಣಿಯೆ ನೀ 3
--------------
ವಿದ್ಯಾರತ್ನಾಕರತೀರ್ಥರು
ಕೃಪೆಯಿರಲಿ ಸ್ವಾಮಿ ಕೃಪೆಯಿರಲಿ ಅಪರಿಗಣ್ಯ ಸುಗುಣಾಂಬುಧಿ ಹರಿ ನಿನ್ನ ಪ. ಬೇರಿಗೆ ದಿವ್ಯ ಕಾವೇರಿ ನದಿಯ ಜಲ ಧಾರೆಯಿರಲು ಕೊಂಬೆಗಳುಬ್ಬಿ ಸಾರಭರಿತ ಫಲದೋರುವ ತರುವಂತೆ ಧಾರುಣಿಪರು ಕೈ ಸೇರುವರು 1 ಶತ್ರುಗಳಂಜಿ ಬಗ್ಗುವರು ಕಾಳ ಕೂಟ ಪಥ್ಯವಾಗುವುದು ನಿನ್ನಣುಗರಿಗೆ ನಿತ್ಯ ಮಾಡುವಾ ದುಷ್ಕøತವೆಲ್ಲವು ಪರ- ಮೋತ್ತಮ ಧರ್ಮಕರ್ಮಗಳಾಹಲೂ 2 ಕನಸು ಮನಸಿನಲ್ಲಿ ನೆನೆಸುವ ಕಾರ್ಯಗ- ಳನುಕೂಲವಾಗುವದನುದಿನವು ಮನಸಿಜನಯ್ಯ ನೀನನುವಾಗಿರೆ ಸರ್ವ ಜನರೆಲ್ಲರು ಬಹು ಮನ್ನಿಸುವರು 3 ಋಗ್ಯಜುಸ್ಸಾಮಾಥರ್ವಣಗಳೆಂಬ ವೇದ ಸ- ಮಗ್ರ ನೀ ಕರುಣಿಸಿ ಒಲಿದಿರಲು ಸುಜ್ಞಾನ ಭಕ್ತಿ ವೈರಾಗ್ಯ ಸಹಿತವಾಗಿ ಭಾಗ್ಯದೇವತೆ ಕೈ ಸೇರುವಳು 4 ಈ ಕಾರಣದಿಂದನೇಕರ ಬಯಸದೆ ಶ್ರೀಕರ ನೀ ಕರುಣಿಸಿದರಿಂದು ಸಾಕೆಂದೊದರುವೆನೇಕಮನದಲಿ ದ- ಯಾಕರ ವೆಂಕಟರಮಣನಿಂದು 5
--------------
ತುಪಾಕಿ ವೆಂಕಟರಮಣಾಚಾರ್ಯ
ಕೃಪೆಯಿಲ್ಲವೇನೊ ನಿನಗೆನ್ನ ಮ್ಯಾಲೇ ಪ ಭಾರ ಇನ್ಯಾರಿಗಿಹುದಯ್ಯ | ಮನ್ನಿಸೆಲೊ ದೇವಾ ಅ.ಪ ಭವ ಕೊಂಡು ಹುಟ್ಟಿಸುವ ಭ್ರಮೆಯಿಂದೆರಿ ನಿವಾರಿಸದೆ 1 ಆಧಾರವಾಗದೆ ನಿರಾಧಾರನಾಗುವರೆ 2 ಪರ ಬಿಟ್ಟು ಮೈ ದೋರೊ ದಯವಿಟ್ಟು ಸದಾನಂದ 3
--------------
ಸದಾನಂದರು
ಕೃಷ್ಣ ಗೋಪಿ ಬಾಲನೆ ಬಹುಗುಣಶೀಲನೆಗೋವಳಪಾಲನೆ ನೋಡುವೆ ಬಾ ಬಾ ಬಾ ಪ ಗೋಪ ರೂಪನೆ ಪಾಪ ದೂರನೆನೀಪದೊಳು ಕುಳಿತು ಗೋಪೇರ ವಸ್ತ್ರವಶ್ರೀಪತಿ ನೀಡಿದಿ ಬಾ ಬಾ ಬಾ 1 ಸಿಂಧು ಮಂದಿರ ಸುಂದರಾಂಬರಮಂದಹಾಸವ ಮಾಡಿ ವಂದಾರುಗಳ ಮಾಡಿಆನಂದದಿ ನೋಡುವೆ ಬಾ ಬಾ ಬಾ 2 ದೋಷದೂರನೆ ವಾಸುದೇವನೆಶೇಷಗಿರಿಯಲಿ ನಿಂತು ದಾಸ ಜನರಿಗೆಲ್ಲಇಂದಿರೇಶನೆ ಕಾಯುವಿ ಬಾ ಬಾ ಬಾ3
--------------
ಇಂದಿರೇಶರು
ಕೃಷ್ಣ ಎಂಥಾದೊ ನಿನ್ನ ಕರುಣ ಶಿಷ್ಯ ಜನರುದ್ದೇಶಬಂದ್ಯೊ ನೀ ಕರುಣ ದುಷ್ಟಜನರ ಮಾಡಿದ್ಯೊ ನೀ ಮರ್ದನಿ ದೃಷ್ಟಿಸಿ ಮಾಡುವೆ ಸಾಧು ಸಂರಕ್ಷಣೆ 1 ಹುಟ್ಟಿ ವಸುದೇವನಲ್ಲಿ ಬಂದು ಹೊಳೆದ್ಯೊ ದಿಟ್ಟತನದಲಿ ನಂದಗೋಕುಲದಿ ಬೆಳೆದ್ಯೊ ಮೆಟ್ಟಿ ವಿಷದ ಹಾವಿನ ಹೆಡೆಯ ತುಳಿದ್ಯೊ ಕುಟ್ಟಿ ಕಂಸಾಸುರನ ಪ್ರಾಣವೆಳೆದ್ಯೊ 2 ಮೊಲಿಯನುಂಡು ಕೊಂಡಿ ಪೂತನಿ ಪ್ರಾಣ ಕಾಲಿಲೊದ್ದು ಕೊಂದ್ಯೋ ಶಕಟಾಸುರನ ಬಾಲತನದಲಿ ಕೆಡಹಿದ್ಯೊ ಮಾವನ ನೆಲೆಯು ತಿಳಿಯದು ಇನ್ನೊಬ್ಬರಿಗೆ ಪೂರ್ಣ 3 ತುರುಗಳ ಕಾಯ್ದ್ಯೊ ನೀ ಗೋವಿಂದ ಬೆರಳೆಲೆತ್ತಿದ್ಯೊ ಹಿರಿಯ ಮುಕುಂದ ಮರುಳು ಮಾಡಿದ್ಯೊ ಗೋಪಿಕೇರ ವೃಂದ ಹರುಷಗೈಸಿದೆ ಅನೇಕ ಪರಿಯಿಂದ 4 ಹಾಲು ಬೆಣ್ಣೆ ಕದ್ದು ತಿಂಬು ನಿನ್ನಾಟ ಬಾಲಗೋಪಾಲರ ಕೂಡಿ ನಿನ್ನೂಟ ಚಲುವ ನಾರೇರ ನೋಡುವ ನಿನ್ನೋಟ ಒಲಿದು ಕುಬ್ಜಿಯ ಬೆನ್ನ ಮಾಡಿದ್ಯೊ ನೀಟ 5 ಗುರುಮಗನ ತಂದುಕೊಟ್ಯೋ ನೀ ಪ್ರಾಣ ಸುರಬ್ರಹ್ಮಾದಿಗಳರಿಯರು ನಿನ್ನ ತ್ರಾಣ ಶರಣಾಗತರ ವಜ್ರಪಂಜರು ಪೂರ್ಣ ವರಮುನಿಗಳಿಗಾಗಿಹೆ ನೀ ನಿಧಾನ 6 ಒಲಿದು ಪಾಂಡವರಿ ಗಾದಿ ಸಹಕಾರಿ ಬಲವ ಮುರಿದ್ಯೊ ನೀ ಕೌರವರ ಸಂಹಾರಿ ಪರಿ ಅಟ ನಿನ್ನದೊ ಶ್ರೀ ಹರಿ ಪರಿ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೃಷ್ಣ ಎನಗೆ ಬಂದರಿಷ್ಟವ ಕಳೆದು ನಿನ್ನ ನಿಷ್ಠೆಯಲಿ ಇರುವಂತೆ ಇಷ್ಟೆ ಮಾತುರವೀಯೋ ಪ ನಿರ್ದೋಷ ಗುಣವಾರುಧಿ ನಿರ್ಧಾರವಾಗಿ ನುಡಿವೆ ಸಿದ್ಧಾಂತ ಮತದಲಿ ಪೊದ್ದಿಪದೆ ಸಾಕು 1 ಅಜ ಭವಾದ್ಯರು ನಿನ್ನ ಭಜಿಪರಾರು ದೋಷ ಮಾನವ ತಿಳಿದು ಭಜಿಸಬಲ್ಲೆನೆ ದೇವಾ 2 ಮಧ್ವ ಸರೋವರದಲ್ಲಿ ಇದ್ದು ಪೂಜೆಯಗೊಂಬ ಮುದ್ದು ವಿಜಯವಿಠಲ ಬಿದ್ದೆ ನಿನ್ನಯ ಪದಕೆ 3
--------------
ವಿಜಯದಾಸ
ಕೃಷ್ಣ ಕದ್ದು ಬಂದೆನಯ್ಯ ರಂಗ ಮದ್ದು ಕಾಣೆನಯ್ಯ ಕಣ್ಣು ಕೊಟ್ಟು ಇಟ್ಟೆ ಇಲ್ಲಿ ನಿನ್ನ ನೋಡಲೆಂದು ಪ ನಾನು ನನ್ನದೆಂದು ಭ್ರಾಂತಿ ತಂದುಕೊಂಡೆನಯ್ಯ ನಿನ್ನದೆನ್ನದೆಂದೆ ನಾನು ನನ್ನ ಬಿಟ್ಟು ನೀನು ನಿಂತೆ ಅ.ಪ ಎಲ್ಲಿ ಇಲ್ಲ ನೀನು ದೇವ ಕುಂದು ಕೊರತೆಯುಂಟೆ ನಿನಗೆ ಖುಲ್ಲಮೋಹವೆಂಬ ಮೋಡ ನಿನ್ನ ಬೆಳಕು ಮುಚ್ಚಿತಯ್ಯ ಕಾಲಕಳೆದು ಕಲಿತೆ ನಿನ್ನ ಕಾಲುಬಿಟ್ಟರಿಲ್ಲ ಕೂಲ ಸೇರಿಸಯ್ಯ ಬೇರೆ ದಾರಿಯಿಲ್ಲವಯ್ಯ 1 ಅರಿತು ಪೇಳ್ವೆನಯ್ಯ ಕೃಷ್ಣ ನೀನು ಹೇಳಿ ಕೊಟ್ಟೆ ಆಗ ಬರಿದೆ ಕೆಟ್ಟು ಹೋದೆ ದೇವ ಒಳಿತು ಮಾಡವಯ್ಯ ಈಗ ಮರೆತು ನಿಲ್ಲಲಾರೆ ನಿನ್ನ ಕಲೆತುಬಂದು ನಿಲ್ಲೊ ನೀನು [ವರ]ಶೆಲ್ವ ಭಾಗ್ಯವಯ್ಯ ನೀನು ಭೋಗಮೋಕ್ಷವಯ್ಯ ದೇವ2
--------------
ಸಂಪತ್ತಯ್ಯಂಗಾರ್
ಕೃಷ್ಣ ಕೃಪಾಳೋ ಕೃಷ್ಣ ಕೃಪಾಳೋವ್ಣೃ ಕುಲೋದ್ಭವ ಕೃಷ್ಣ ಕೃಪಾಳೋ ಪವಸುದೇವ ನಂದನ ವರ ರತ್ನ ಭೂಷಣಕುಶಲಕರೇಕ್ಷಣ ಕೃಷ್ಣ ಕೃಪಾಳೋ 1ಭುವನತ್ರಯಾಧಾರ ಬಹುಗೋಪಿಕಾ ಜಾರನವನೀತ ದಧಿ ಚೋರ ಕೃಷ್ಣ ಕೃಪಾಳೋ 2ಮುರಳೀನಾದ ವಿನೋದ ವಿಶ್ವಾತ್ಮಕವಿರಳೀಕೃತಲೀಲ ಕೃಷ್ಣ ಕೃಪಾಳೋ 3ಗುಂಜಾಭರಣ ಸುರಂಜಿತ ಮಣಿಮಯಮಂಜೀರ ಪದಪದ್ಮ ಕೃಷ್ಣ ಕೃಪಾಳೋ 4ರಾಗಾದಿ ದೋಷ ಕಲುಷಮನಸೋ ಮೇಕಾಗತಿರಧುನಾ ಕೃಷ್ಣ ಕೃಪಾಳೋ 5ಆರ್ತಸಂರಕ್ಷಕ ಪಾರ್ಥಸಹಾಯಕಕೀರ್ತಿವಿಧಾಯಕ ಕೃಷ್ಣ ಕೃಪಾಳೋ 6ಕಾಮಸಂಪುಟದಿವ್ಯನಾಮಜಪನಶೀಲಕಾಮಿತಾರ್ಥಪ್ರದ ಕೃಷ್ಣ ಕೃಪಾಳೋ 7ಕಾಳೀಯ ಫಣ ಮಾಣಿಕ್ಯ ರಂಜಿತ ಪಾದಕಾಳಿಂದೀ ಪಾವನ ಕೃಷ್ಣ ಕೃಪಾಳೋ 8ಮಾಮವಲೋಕಯ ಮಾಧವ ಮುರಹರತಾಮಸಮಪಹರ ಕೃಷ್ಣ ಕೃಪಾಳೋ 9ತವ ಸತ್ಕಥಾ ಶ್ರವಣೇ ಕೀರ್ತನೇ ಮಮಶಿವಸುಧಿಯಂ ದೇಹಿ ಕೃಷ್ಣ ಕೃಪಾಳೋ 10ತಿರುಪತಿ ಕ್ಷೇತ್ರನಿಲಯ ಕರುಣಾಲಯವರದ ಶ್ರೀ ವೆಂಕಟಕೃಷ್ಣ ಕೃಪಾಳೋ 11 ಓಂ ಕೃಷ್ಣಾವ್ಯಸನಕರ್ಷಕಾಯ ನಮಃ
--------------
ತಿಮ್ಮಪ್ಪದಾಸರು
ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ನಿನ್ನ ನೋಡುವೆ ಪ. ಹಾಡಿ ದಣಿಯುವೆ ಅ.ಪ ಅನುದಿನದಿ ನಿನ್ನ ನಾಮ ನೆನೆಯುವಂತೆ ಜಿಹ್ವೆಯಲ್ಲಿ ನಿತ್ಯ 1 ಹರುಷದಿಂದ ನಿನ್ನ ನಾಮ ಸ್ಮರಿಸುವೆನೋ ದೇವ ದೇವ ಎನ್ನ ಮರಣ ಸಮಯದಲ್ಲಿ ನಿನ್ನ ಸ್ಮರಣೆ ಇತ್ತು ಕಾಯೋ 2 ಮೊದಲಿನಿಂದ ಭಜಿಸಿದೆನಾ ಹೃದಯದಲ್ಲಿ ನೋಯುತಿರುವೆ ಮುದದಿ ಬಂದು ಎನ್ನ ಜಿಹ್ವೆಗೊದಗೊ ಆಗ ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ
ಕೃಷ್ಣ ಕೃಷ್ಣ ಬಾಂಧವ ಸೃಷ್ಟ್ಯಾದಷ್ಟ ಕರ್ತ ಭವ ನಷ್ಟವಗೈಸೋದು ಅಷ್ಟರೊಳಗೆ ಹರಿ ವಿಷ್ಣು ಸರ್ವೋತ್ತಮ ಇಷ್ಟೆ ಪೇಳುವದಕೆ ನಿಷ್ಟಿಯನೀಯೊ ಪ ಈ ಸುದಿನವಾರಭ್ಯ ಕ್ಲೇಶದೊಳಗೆ ಬಿದ್ದಾ ಯಾಸ ಬಡುತಲಿದ್ದೆ ಲೇಶವಾದರು ಸುಖ ಲೇಶಗಾಣದಿರಲು ಏಸು ಜನ್ಮದ ಪುಣ್ಯ ಸೂಸಿತೋ ನಿನ್ನಯ ದರುಶನ ಲಾಭವಾಗೆ ದೇಶದೊಳಗೆ ನಿನ್ನ ದಾಸರ ದಾಸನೆನಿಸಿಕೊಂಬ ಈ ಸುಲಭ ವೊಂದಿಸನುದಿನ ದು ರಾಶೆಯ ಬಿಡಿಸೆಂದು ನಾಶರಹಿತ ಗುಣರಾಶಿ ರಮೇಶ 1 ವೇದಪರಾಯಣ ಸಾಧುಗಳರಸಾ ವಿ ನೋದಿಗಾ ಪಳ್ಳಿಗನೆ ಆದಿದೈವವೆ ತೀರ್ಥ ಪಾದ ಜಗತ್ಯೆಂತ ಭೇದಾ ಶೃಂಗಾರ ವೇಣು ನಾದ ಸನಕಾದಿ ಮುನಿವಂದಿತಾ ಮಾಧವ ಮಹಿಧರ ಯಾದವ ಕರುಣ ಪ ಯೋಧದಿ ಎನ್ನಪರಾಧವನೆಣಿಸದೆ ಸಾಧನ ಕೆಡಿಸುವ ಕ್ರೋಧವ ಬಿಡಿಸಾರಾಧನೆ ತಿಳಿಯದು ಭೂದೇವರೊಡಿಯಾ 2 ಕರವಾ ಬಿಡದಿರೆನ್ನ ಕರಣ ಶುದ್ಧವ ಮಾಡು ಕರದ ಮಾತಿಗೆ ಭಯಂಕರವ ಓಡಿಸಿ ಮಂದ ಕರಿಯ ಕಾಯಿದ ಶುಭಕರ ಕಾಳಿ ಮಥನ ಸಂ ನಿತ್ಯ ಕರ ಪತಿ ಕುಲ ರತುನಾ ಕರಕೆ ಉಡುಪ ಮಕರಧ್ವಜಪಿತ ತೋರಿಸೊ ಭಜಕರರೊಳಗಿಡುವುದು 3
--------------
ವಿಜಯದಾಸ
ಕೃಷ್ಣ ಕೃಷ್ಣ ಬೇಡಿಕೊಂಡೆ ಕೃಪೆಯ ಪಾಲಿಸೋ ಪ ಎಷ್ಟು ಎಷ್ಟು ಕೇಳಿಕೊಂಡೆ ಎಳ್ಳಷ್ಟು ದಯಬಾರದೇ ಅ.ಪ ಬಳಲುತಿಹೆನು ಎತ್ತೋ ಕರುಣಿ 1 ನಿನ್ನ ಬಿಟ್ಟು ಇರುವೆನೆನೋ ನಿನ್ನದಯದಿ ನನ್ನ ಬದುಕು ನಿನ್ನ ಮರೆತೆ ತಪ್ಪುಕ್ಷಮಿಸು ನಿನ್ನ ದಾಸ ಪ್ರಾಣರಾಣೆ2 ಈಗ ಆಗ ಎಂದು ಹೇಳಿ ಭೋಗದಲ್ಲೇ ರತಿಯ ನೀಡಿ ನಾಗಶಯನ ನಾಮಸುಧೆಯ ಬೇಗ ಕೊಡದೆ ಬಿಡುವರೇನೋ3 ದಾಸನೆಂದು ಭಕ್ತಿಯಿತ್ತು ನಾಶಮಾಡೋ ಕುಂದುಗಳ ನೀ4 ಲೋಕವೆಲ್ಲ ಪೊರೆದ ನಿನಗೆ ಸಾಕೆ ಎನ್ನ ಕಷ್ಟವೇನೋ ನಾಕ ದೊರೆಯೆ ಪುಣ್ಯಶ್ಲೋಕ 5 ಬರಿಯ ಶುಂಠ ನಾನು ಹರಿಯೆ ಅರಿಯೆದಾರಿ ವಲಿಸೆನಿನ್ನ ಶರಣ ಜನರ ಬಿಡನು ಎಂಬ ಬಿರುದೊಂದೆ ಧೈರ್ಯವೆನಗೆ 6 ಶಿರಿಯರಮಣ “ಕೃಷ್ಣವಿಠಲ” ಶರಣು ಜ್ಞಾನ ಸುಖದ ಚರಣವೆರಡು ತೋರಿಸೆನಗೆ ನಿರುತ ಹೃದಯ ಕಮಲದಲ್ಲಿ 7
--------------
ಕೃಷ್ಣವಿಠಲದಾಸರು
ಕೃಷ್ಣ ದ್ವೈ ಪಾಯನ ಕೃಪಣವತ್ಸಲ ಪರ ಮೇಷ್ಠಿ ಜನಕನ ತೋರೊ ಪ ಅನಿಮಿಷ ಕುಲಗುರು ಆನಂದತೀರ್ಥ ಸ ನ್ಮುನಿಮತ ವಿಮಲಾಂಬುಜಾ ಅ.ಪ. ದಿನಕರ ದಯದಿ ನೋಡೆನ್ನನು ಬಾದರಾ ಯಣ ನಾಮಧೇಯರ ತನಯ ಸಂಯಮಿ ವರ 1 ಭೀಮ ತರಂಗಿಣಿ ಬದಿಗನೆನಿಸಿ ಸೀತಾ ಕರ್ಮ ಗುಣಕೀರ್ತನಗೈವ ನಿರ್ಮಲಾತ್ಮಕನ ಸತ್ಪ್ರೇಮದಿ ಸಲಹುವ ಸುಜನ ಶಿರೋಮಣಿ 2 ವಿಗತದೇಹಾಭಿಮಾನಿಯೆ ನಿಮ್ಮೊಡನೆ ನಿತ್ಯ ಹಗೆಗೊಂಬ ಪಾಪಿಗಳ ವಿಗಡಕರ್ಮಗಳೆಲ್ಲ ಮರೆದು ವಿಶ್ವವ್ಯಾಪಿ ಜಗನ್ನಾಥ ವಿಠಲ ಸ್ವತಂತ್ರ ಕರ್ತಯೆಂಬಾ 3
--------------
ಜಗನ್ನಾಥದಾಸರು
ಕೃಷ್ಣ ನೀ ಕರುಣದಿ ಥಟ್ಟನೆ ಸಲಹೊ ದುಷ್ಟಮರ್ದನ ಸಕಲೇಷ್ಟದಾಯಕ ರಾಮ ಪ. ಹುಟ್ಟಿಸಿದ ದೇವರು ಹುಲ್ಲು ಮೇಯಿಸನೆಂದು ಶಿಷ್ಟ ನುಡಿವುದ ನಂಬಿಹೆನು ಮೆಟ್ಟಿ ಬಾಧಿಸುವಂಥ ದಟ್ಟ ದಾರಿದ್ರ್ಯದ ಬಟ್ಟೆ ಒಂದನು ಕಾಣೆ 1 ಊರ ಜನರ ಮುಂದೆ ಸೇರಿದ ಪದವನ್ನು ದೂರಗೊಳಿಸಿ ಬಹು ಗಾರಾದೆನು ಮಾರಮಣ ನೀನ್ನುದಾರ ಗುಣವ ನಂಬಿ ಚೀರುವ ಎನಗೆ ಬೇರಾರು ರಕ್ಷಕರಿನ್ನು 2 ವಿಶ್ವಕುಟುಂಬಿ ಸರ್ವೇಶ್ವರ ನೀನಿಂದು ವಿಶ್ವಾಸದಿಂದ ನಾನಿರುವದನು ತೈಜಸ ಪ್ರಾಜ್ಞ ತುರ್ಯರೂಪಗಳಿಂದ ವಿಶ್ವವ್ಯಾಪಕನಾದ ನಿನಗರುಪುವುದೇನೊ 3 ಖುಲ್ಲ ಮಾನವರೆಂಬ ಕ್ಷುಲ್ಲ ನುಡಿಗಳಿಂದ ತಲ್ಲಣಗೊಳಿಸುವುದುಚಿತವೇನೊ ಮಲ್ಲ ಚಾಣೂರ ಮುಷ್ಟಿಕರನ್ನ ಗೆಲಿÉದರಿ- ದಲ್ಲಣಯನಗೆ ಬೆಂಬಲನಾಗಿ ಸಲಹಿನ್ನು 4 ಇಂದ್ರಾದಿ ದಿವಿಜರ ಪದಗಳನವರಿಗೆ ಪೊಂದಿಸಿ ಪಾಲಿಪ ಕರುಣಿ ನೀನು ಇಂದಿರೆ ಸಹಿತಾಗಿ ಬಂದೆನ್ನ ಮನಸಿಗಾ ನಂದ ತೋರಿಸೊ ಭುಜಗೇಂದ್ರಾದಿ ಒಡೆಯ 5
--------------
ತುಪಾಕಿ ವೆಂಕಟರಮಣಾಚಾರ್ಯ