ಒಟ್ಟು 14318 ಕಡೆಗಳಲ್ಲಿ , 131 ದಾಸರು , 5549 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಂಡನಾಡುವ ಬಾರೆಲೈ ಪ್ರಾಣೇಶ್ವರ ಪ. ಮಲ್ಲೆ ಜಾಜಿ ಸಂಪಿಗೆ ಮೇಣ್ ಮಲ್ಲಿಗೆ ಇರುವಂತಿಗೆ ಚಲ್ವ ಪಾರಿಜಾತದಿಂದ ಚೆಲ್ವನಾಂತು ಮೆರೆಯುತಿರ್ಪ 1 ಪರಿಮಳಾನ್ವಿತ ಪಾಟಲೀ ಸುರಗಿ ಸೇವಂತಿಗೇ ಸುರಭಿಳÀ ಕರಮಾಗಿ ಯೆಸವಪರಿಯನೋಡಿ ನಲಿಯುತಾವು 2 ವಿಮಲಶೇಷಶೈಲವಾಸ ಕಮಲಬಾಂಧವ ಸದೃಶಭಾಸ ಕಮಲನಾಭ ಭಕ್ತಪಾಲ ರಮಣ ನಿನ್ನ ಕಮಲಪಾಣಿಯಿಂ3
--------------
ನಂಜನಗೂಡು ತಿರುಮಲಾಂಬಾ
ಚಂದಮ್ಮ ಬಲು ಚೆಂದಮ್ಮ ಗೋ ವಿಂದನ ದಾಸರ ಸಂಗಮ್ಮ ಪ ಪಾದ ಪದ್ಮಮ್ಮ ನೀ ನ್ಹೊಂದಿ ಭಜಿಸು ಸದಾನಂದಮ್ಮ ಅ.ಪ ಸಂದೇಹ ಕಡಿಯಂತರಂಗಮ್ಮ ಮು ಕ್ಕುಂದನತಿಳಿ ನಿಜಲಿಂಗಮ್ಮ ನಿಂದೆ ಬಳಸದಿರು ತುಂಗಮ್ಮ ಭವ ಬಂಧವು ನಿನಗಿಲ್ಲ ಗಂಗಮ್ಮ 1 ಸಾಧಿಸು ನಿಜದೃಢ ತುಳಸಮ್ಮ ಸಂ ಪಾದಿಸು ನಿಜಜ್ಞಾನ ಶರಣಮ್ಮ ಸಾಧುಜನಕೆ ಬಾಗು ಸುಶೀಲಮ್ಮ ಪರ ಸಾಧನೆ ನಿನ್ನಗೆ ಸರಸಮ್ಮ2 ಕಾಮಿತಕಳಿ ಭಾಗ್ಯಲಕ್ಷಮ್ಮ ನೀ ತಾಮಸತೊಳಿ ಮನ ಸೀತಮ್ಮ ಸ್ವಾಮಿಧ್ಯಾನಪಿಡಿ ಸತ್ಯಮ್ಮ ಶ್ರೀ ರಾಮನ ನಂಬುನೀ ಮುಕ್ತ್ಯಮ್ಮ 3
--------------
ರಾಮದಾಸರು
ಚಂದಲಾ ಪರಮೇಶ್ವರಿ ವಂದಿಸುವೆನು ಚಂದಲಾ ಪರಮೇಶ್ವರಿ ಪ ಚೆಂದಾಗಿ ಮನಸಿಗಾನಂದ ನೀಡುವ ನಿನ್ನಮುಂದೆಯೆ ಕಂದ ತಾ ಬಂದು ನಿಂದಿಹೆನವ್ವ ಅ.ಪ. ಘನದಯಾವಂತೆ ಕಾಯೆ ಇದು ನಿನ್ನಅನುಗ್ರಹವೆಂಬೆ ತಾಯೆಕನಸಿನೊಳಿರಲಿಲ್ಲ ಮನಸಿನೊಳಿರಲಿಲ್ಲಜನನಿ ನೀನೆ ಕರೆಸಿ ದರುಶನವಿತ್ತವ್ವ 1 ಸನಿತೆಯೊಳ್ಬಂದು ನಿಂತು ದಯಾಮೃತವಹನಿಸುವಿ ಜನರಿಂಗಿತುಜನರ ಪಾವನ ಮಾಡಿ ಘನ ಸಂತಸ ನೀಡಿಅನುದಿನ ಜನ ಪಾಡಿ ಕುಣಿಯುವಂತೆ ಕೃಪೆ ಮಾಡೆ 2 ಸದಯಾಮೂರ್ತಿಯು ನೀ ಸತ್ಯ ನಿನ್ನಯ ಪಾದಪದುಮಕೆ ಮಣಿಯುವೆ ನಿತ್ಯಗದುಗಿನ ವೀರನಾರಾಯಣನೆನ್ನಯಹೃದಯದಿ ಸತತ ನಿಲುವಂತೆ ಕರುಣಿಸೌ 3
--------------
ವೀರನಾರಾಯಣ
ಚಂದಿರವದನೆಯ ತವ ಸನ್ನಿಧಿಗೂ ವಂದಿಪೆ ನಿನ್ನ ಪಾದಾಂಬುಜಗಳಿಗೂ ಪ ಬೇಡುವೆ ಗೋವಿಂದನ ರಾಣಿ [ಕಲ್ಯಾಣಿ] ಅ.ಪ ನನ್ನ ಕರೆಗೆ ಓ ಎನ್ನುವರಿಲ್ಲ ನನ್ನಲ್ಲಿ ಕನಿಕರ ತೋರುವರಿಲ್ಲ ಪನ್ನಗಶಯನ ತಾ ಎನ್ನ ನೋಡುತೆ ಕಣ್ಣ ಸನ್ನೆಯ ಮಾಡಿ ಹೋಗೆನ್ನುವನಮ್ಮಾ 1 ಅಪ್ಪನು ನಿನ್ನ ಮಾತೊಪ್ಪುವನಮ್ಮ ತಪ್ಪನು ಮನ್ನಿಸಲೊಪ್ಪುವನಮ್ಮಾ ತಪ್ಪು ನೆಪ್ಪುಗಳ ನಾನೊ[ಪ್ಪುವೆ ಬೇ]ಗ ನೀ ನಪ್ಪಣೆಗೊಡಿಸು ರಂಗಪ್ಪನನೊಲಿಸು2 ಶೌರಿಯ ಕೃಪೆಯವತಾರೆ ನೀನೆಂಬುದ ನಾರದನೆಲ್ಲೆಡೆ ಸಾರುತಲಿಹನು ಮಾರಜನಕ ಮಾಂಗಿರಿರಂಗನು ನಿನ್ನ ಕೋರಿಕೆಗನುಮತಿ ತೋರುವನಮ್ಮಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಚದುರೇ ವೃಂದಾವನದೊಳು ನಿಂತಿಹನ್ಯಾರೇ ಪೇಳಮ್ಮಯ್ಯಾ ಪ ಸತ್ ಸಖಿಯರಿಗುಣಿಸುವ ಜಾರಚೋರ ಶ್ರೀಕೃಷ್ಣ ಕಾಣಮ್ಮಾ ಅ.ಪ. ನೀರೇ ನೋಡೋಣು ಬನ್ನಿರಿ ಎಂದುಈ ಬಾಲೇರು ಗೋಪಾಲನ ಗಾನಕೆ ಬಂದು ಬೆದರುತ ಮನದೊಳು ಮದನಾಟಕೆ ನಿಂದೂಮೋರೆಯ ತಿರುವುತ ಅಂದು ಮಾರನಯ್ಯ ತವ ಚಾರುಧರಾಮೃತ ಸೂರೆಗೈಯ್ಯೋ ಸದ್ಧೀರಿಯರೊ ನಾವು 1 ಬಾಲೆ ನಿನ್ನಾಳುವ ದಾರಿ ಬ್ಯಾರಿಲ್ಲಾ ಕಾಲಬಂದೊದಗದು ಕೇಳೆನ್ನ ಸೊಲ್ಲ ಮತ್ತಾವದೊ ತಂಗಾಳಿ ಬೀಸುವ ವ್ಯಾಳೆ ಬಂತಲ್ಲಾ ಮೋಹಿಸಿ ಬಂದೆವೊ ನಲ್ಲಾ ಫುಲ್ಲಲೋಚನ ಮೃದು ಮಲ್ಲಿಗೆ ಮುಡಿಸಿ ಮೆಲ್ಲಗೆ ಮರ್ದಿಸು ಮೃದು ಚಲ್ವಯರುಹರೆ 2 ಸಿಂಧೂ ರಾಜಕುಮಾರಿಯ ರಮಣ ಶರದಿಂದೂ ಮಂಡಲ ಮುಟ್ಟುತಲಿದೆ ಧ್ವನಿ ಹಸನಾ ಶಂಭೂರ ಶತ್ರಾದಿಗಳುಗರೆವರು ಪೂಮಳಿ ನಾನಾ ಗಣಶಿರಿಸುತ ಮರುಳಾಗಿ ಪೂ ಬಾಣಾನಾಟವನೋಡುತ ನಾರಿಯ ತ್ಯಜಿಸದೆ ಪರನಾರಿಯ ರೂಪದಿಂದ್ರಮಿಪ ಮುರಾರೇ 3 ಸುರನದಿ ಸ್ಮರಸುತ ರಾಣಿ ನಾಟ್ಯವನಾಡುತ ನವನವ ಪಾಡುತ ದಿದ್ಧಿದ್ಧಿಮಿಕಿಟ ತಾಂ ತಾಳದಿ ನಲಿಯುತ 4 ಶಶಿಸೂರ್ಯನೆಳಸನ್ನಿಭ ಪ್ರಖನಕರಾ ಸರಸೀಜಾದಳ ನುತ ಭಾವಿ ಸಮೀರಾ ಷಟ್ ಶತ ಬಂದು ವಿಂಶತಿಹಂ ಸಾಖ್ಯ ಮಂತ್ರ ಸಹಸ್ತಾದಿಂದ ಸೇವಿಪ ಮಧ್ವಮಧೀಶನ ಲೀಲೆಯನೆನಿಪರ ಬಂದು ತೋರುವಾತ ತಂದೆವರದಗೋಪಾಲವಿಠಲನು 5
--------------
ತಂದೆವರದಗೋಪಾಲವಿಠಲರು
ಚಂದ್ರಭಾಗ ಹರಿ ವಿಠಲ | ಸಲಹ ಬೇಕಿವಳಾ ಪ ಇಂದೀವರಾಕ್ಷ ಹರಿ | ಮಂದರೋದ್ಧಾರೀ ಅ.ಪ. ಮೋದ ಬಡಿಸುವ ಭಾರಮೋದ ಮಯ ನಿನಗಲ್ಲ | ದಧಾರಿಸಿಹುದೋಆದಿ ಮೂರುತಿ ಹರಿಯೆ | ಸಾಧನ ಸಾಧ್ಯವಾಗಿಕಾದುಕೋ ಬಿಡದಿವಳ | ಮಾಧವನೆ ದೇವಾ 1 ತರತಮಾತ್ಮಕ ಜ್ಞಾನ | ಅರುಹುತಿವಳಿಗೆ ಭೇದಎರಡು ಮೂರರ ಅರಿವು | ನೆರೆ ಕೈಗೂಡಲೀಹರಿಯೆ ಸರ್ವೋತ್ತಮನು | ಸುರಪಾದಿ ಸುರರೆಲ್ಲಹರಿಯ ಕಿಂಕರರೆಂಬ | ವರಜ್ಞಾನ ವಿರಲಿ 2 ಆಗು ಹೋಗುಗಳಲ್ಲಿ | ವೇಗ ಸಮತೆಯು ಬರಲಿಜಾಗು ಮಾಡದೆ ದ್ವಂದ್ವ | ಸಹನೆ ಬರುತಿರಲೀನಾಗಾರಿ ವಾಹನನ | ನಾಮ ಸುಧೆ ಸರ್ವದಾಸಾಗಿ ಮನ ಸವಿವಂತೆ | ಹಗಲಿರುಳು ಇರಲೀ 3 ಕಾಲ | ಮೋದದಿಂ ಕಳೆವಂತೆನೀ ದಯದಿ ಪಾಲಿಸುತ | ಕಾದುಕೋ ಇವಳಾಬೋಧ ಮೂರುತಿಯಾಗಿ | ಹೇ ದಯಾಕರ ಕೃಷ್ಣಾಆದರದಿ ಸುಜ್ಞಾನ | ಭಕ್ತಿಯನ್ನೀಯೋ 4 ಭವ ಬಂಧ ಬಿಡಿಸುವುದುಶ್ರೀವರನೆ ಶ್ರೀಗುರೂ | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಚನ್ನಕೇಶವ ಇನ್ನೇನಿನ್ನೇನಿನ್ನು ಯನಗಿನ್ನೇನಿನ್ನೇನಿನ್ನು ಪ. ಚನ್ನಕೇಶವನಿವನನ್ನು ಹೃದಯದೊಳ್ ಚೆನ್ನಾಗಿ ನೆಲಸಿರಲಿನ್ನೇನ ಬೇಡುವೆ 1 ಭುವಿಜಾತೆಯೆನ್ನ ಮಾತೆ - ಭುವಿನಾಥನೆನ್ನ ತಾತ ಇವರೆನ್ನೊಳಿರುತಿರೆ ಭವಕ್ಲೇಶ ಪರಿದಿರೆ 2 ಅಂಡಜವಾಹನಾಖಂಡಲಾರ್ಚಿತನ ಪುಂಡರೀಕಾಕ್ಷನ ಕಂಡು ಕೊಂಡಾಡಿದೆ 3 ಧರೆಯೊಳಧಿಕ ಶೇಷಗಿರಿಯೊಳು ನೆಲಸಿರ್ಪ ವರದ ಶ್ರೀನರಹರಿ ವರದನೆನ್ನೊಳಿರೆ 4
--------------
ನಂಜನಗೂಡು ತಿರುಮಲಾಂಬಾ
ಚನ್ನಕೇಶವ ಚನ್ನಕೇಶವ ಚನ್ನಕೇಶವ ತ್ರಾಹಿಮಾಂ ಪ ಮನ್ನಿಸೆನ್ನನು ರಕ್ಷಿಸೆನ್ನನು ಸನ್ನುತಾಂಗನೆ ಪಾಹಿಮಾಂ ಅ.ಪ. ಭವದಿ ನೊಂದೆನು ಸವೆದು ಬೆಂದೆನು ಜವದಿ ಬಂದೆನು ತ್ರಾಹಿಮಾಂ ಭವಣೆಯನು ಪರಿಹರಿಸಿ ದೇವನೆ ಭವ ವಿದೂರನೆ ಪಾಹಿಮಾಂ1 ನಾನು ಏನನು ನಿನ್ನ ಮರತೆನು ನಾನು ಬಡವನು ತ್ರಾಹಿಮಾಂ ಗಾನ ಲೋಲನೆ ಬಿಡದೆ ಭಜಿಸುವೆ ದೀನ ವತ್ಸಲ ಪಾಹಿಮಾಂ 2 ಭಕ್ತವತ್ಸಲ ಭಕ್ತದಾಯಕ ಭಕ್ತಿಯರಿಯೆನು ತ್ರಾಹಿಮಾಂ ಮುಕ್ತಿದಾಯಕ ಶಕ್ತಿ ಮೂರುತಿ ಮುಕ್ತಿ ಪಾಲಿಸಿ ಪಾಹಿಮಾಂ3
--------------
ಕರ್ಕಿ ಕೇಶವದಾಸ
ಚನ್ನಕೇಶವ ನಿನ್ನ ಭಜನೆಯೊಂದುಳಿದು ನಾ ನನ್ಯರ ನಂಬೆನು ಸಲಹಯ್ಯ ಹರಿಯೇ ಪ ತರಳಾ ಧೃವನಂತೆ ತಪಸ ನಾನರಿಯೆನು ಸರಳೆ ದ್ರೌಪದಿಯಂತೆ ಸ್ತೋತ್ರವನರಿಯೇ ಸರಸ ಜಾಂಬುಕಿಯಂತೆ ಸೇವೆಯನರಿಯೆನು ಕರಿಯಂತೆ ಸ್ಮರಣೆಯ ಮೊದಲು ನಾನರಿಯೇ 1 ದಾಸ ಕನಕನಂತೆ ಭಕ್ತಿಯ ನರಿಯೆನು ವಾಸುಕಿಯಂತೆ ನಾ ಯಾಚನೆಯರಿಯೇ ದಾಸ ಮಾರುತಿಯಂತೆ ದಾನತ್ವವರಿಯೆನು ವಾಸವನಂತೆ ನಾ ಕೀರ್ತನೆಯರಿಯೇ 2 ಹರಿಯ ಲೀಲೆಗಳನ್ನು ಒಂದಿಷ್ಟನರಿಯೆನು ಹರಿ ಪೂಜೆ ಸೇವೆಯ ಸ್ಮರಣೆಯನರಿಯೇ ಹರಿಯ ಮನೆ ಘಂಟೆಯ ಬಾರಿಸಲರಿಯೆನು ಸಿರಿ ಚನ್ನಕೇಶವ ಮಹಿಮೆಯನರಿಯೇ 3
--------------
ಕರ್ಕಿ ಕೇಶವದಾಸ
ಚಂಪಕನಾಸೇ ವಿರೂಪಾಕ್ಷಜಾಯೆನೋಂಪಿಗೈವೆನಮ್ಮ | ಕರುಣದಿಂದ ಕಾಯೆ ಪ ಇಂಪು ಹರಿಯ ನಾಮ | ಸ್ಮರಣೆ ಕರುಣಿಸುತ್ತಮಾಂ ಪಾಹಿ ಗೌರೀ | ಅನ್ಯ ಬೇಡೆ ದೇವಿ ಅ.ಪ. ಅಂಗನಾಮಣೀ | ನುಡಿಗಭಿಮಾನೀಸಂಗೀತ ಲೋಲೆ | ವಿಸ್ತøತ ಸುಫಾಲೆಕಂಗಳು ವಿಶಾಲೆ | ಕೊರಳೊಳು ಸುಮಾಲೆಅಂಗಜನ ವೈರೀ | ಶಿವ ಮನೋಹರೀ 1 ಧವಳಗಂಗೆ ಪೊತ್ತ | ಶಿವನ ಸ್ಮರಿಸುತ್ತಸವನ ಮೂರು ಕಳೆವ | ಭುವಿ ಪಾಲಿಸುವಭುವಿಧರಭಿಧಶಯೈ | ಕವನ ನುಡಿಸಮ್ಮಶರ್ವಳೆ ನಿನ್ನನು | ಸರ್ವದ ಸ್ಮರಿಸುವೆ 2 ಮಾವಾರಿ ಎನಿಪ | ಗೋವುಗಳ ಪಾಲಗೋವ್ರಜ ಸುಪೋಷ | ಗೋವತ್ಸ ಧ್ವನಿಗೇಧಾವಿಪಂತೆ ಗುರು | ಗೋವಿಂದ ವಿಠಲನತೀವ್ರದುಪಾಸನ | ನೀ ಪಾಲಿಸಮ್ಮ
--------------
ಗುರುಗೋವಿಂದವಿಠಲರು
ಚರಣ ಕಮಲಕರ್ಪಿಸುವೆ ಗುರುನಾಥಾ ಈ ಸೇವೆಯು ಕರುಣನಿಧಿಯೆ ಜ್ಞಾನರೂಪ ರಾಜವಿದ್ಯೆ ರಾಜಗುಹ್ಯ ಆತ್ಮತತ್ವ ಬೋಧಿಸಿ ನೀ ಮೂಢತನದ ತಮವ ಕಳೆದು ತೇಜದಿಂದ ಮೆರೆವ ನಿನ್ನ 1 ಬಾಲನ ತೊದಲಾದ ನುಡಿಯ ಕೇಳಿ ಜನನಿ ನಲಿವ ತೆರದಿ ಲೀಲೆಯಿಂದ ಆಲಿಸುತಲಿ ಪಾಲಿಸು ಗುರುಶಂಕರನೆ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಚರಣಕಮಲಯುಗಕೆ ನಮಿಪೆ ನಿರುತವನುದಿನ | ಶ್ರೀ ರಾಘವೇಂದ್ರ ಪ ಕರುಣಾಸಾಂದ್ರ ಯತಿಕುಲೇಂದ್ರ ಅ.ಪ ವೇನಮತವಿದಾರ ಸುಂದರ ಜ್ಞಾನದಾತ ಗುರುವರ | ಶ್ರೀನಾಥನ ಪದಪಂಕಜಧ್ಯಾನನಿರತ ಸುಗುಣಭರಿತ 1 ಮಧ್ವಶಾಸ್ತ್ರಪಠಿಸಿ ಬಹುಪ್ರಸಿದ್ಧಟೀಕೆ ರಚಿಸುತ | ಸದ್ವೈಷ್ಣವ ಸಿದ್ಧಾಂತವೇ ಶುದ್ಧವೆನಿಸಿ ಮೆರೆದ ಧೀರಾ 2 ನರಹರಿ ಸಿರಿರಾಮಕೃಷ್ಣ ವರವೇದವ್ಯಾಸರು | ಇರುತಿರುವರು ನಿನ್ನೊಳು ತವ ಪರಿಜನ ಸೇವೆಗಳ ಕೊಳುತ3 ವಾರಾಹಿ ಸುಕ್ಷೇತ್ರನಿಲಯ ಚಾರುಚರಿತ ಗುಣಮಯ | ಆರಾಧಿಪ ದೀನಾಳಿಗೆ ಸಾರಸೌಖ್ಯವೀವ ಕಾವ 4 ಶ್ರೀಶಕೇಶವಾಂಘ್ರಿದೂತ ದಾಸಜನನುತ | ಲೇಸಾಗಿಹ ಭೂಸುರ ಸಹವಾಸವಿತ್ತು ಕರುಣಿಸಯ್ಯ 5
--------------
ಶ್ರೀಶ ಕೇಶವದಾಸರು
ಚರಣಕಮಲವನು ನೆನೆವೆ ನಾ ನಿನ್ನ ಪ. ಚರಣಕಮಲವನು ನೆನೆವೆ ನಾ ದುರಿತರಾಶಿಗಳ ಸಂಹರಿಪನ ಅ.ಪ. ಶ್ರುತಿಯನುದ್ಧರಿಸಿದುದಾರನ ಸಿಂಧು- ಮಥನಕೊದಗಿದ ಗಂಭೀರನ ಕ್ಷಿತಿಯನೆತ್ತಿದ ಬಲುಧೀರನ ಶಿಶು ಸ್ತುತಿಸೆ ಕಂಬದಿ ಬಂದ ವೀರನ 1 ಇಂದ್ರನ ಧಾರೆಯ ನಿಲಿಸಿದನ್ನ ತನ್ನ ತÀಂದೆಯ ಮಾತು ಸಲಿಸಿದನ್ನ ಕಂದರದಶನ ಸೋಲಿಸಿದನ್ನ ವ್ರಜ- ದಿಂದುಮುಖಿಯರ ಪಾಲಿಸಿದನ್ನ 2 ವಧುಗಳ ವ್ರತವ ಖಂಡಿಸಿದನ್ನ ದುಷ್ಟ ರುದಿಸಲು ತುದಿಯ ತುಂಡಿಸಿದನ್ನ ಇದಿರಾದ ಖಳರ ಖಂಡಿಸಿದನ್ನ ಹಯ ವದನಪೆಸರ ಕೊಂಡುದಿಸಿದನ್ನ 3
--------------
ವಾದಿರಾಜ
ಚರಣಕೆರಗುವೆ ಕೃಷ್ಣಾ ಪರಿಹರಿಸು ಜನ್ಮವನುಶರಣಜನಬಂಧು ನೀನು ಕೃಷ್ಣಾ ಪಕರುಣನಿಧಿಯಡಿಗೊಮ್ಮೆ ಶಿರವೆರಗಿದವರು ಭವಶರಧಿಯೊಳು ಬೀಳರೆಂದೂ ಕೃಷ್ಣಾ ಅ.ಪಹಲವು ದೇಹಂಗಳಲಿ ಮಾಡಿದಘ ವೃಂದಗಳುಬಲವಂದಡವಕೆ ಲಯವು ಕೃಷ್ಣಾಜಲಜಸಂಭವ ತೊಡಗಿ ಶಲಭಾಂಕದೊಳಗೊಂದನುಳಿಯದೇ ಪ್ರಾಣಿಗಳಲಿ ಕೃಷ್ಣಾತೊಳಲಿ ಬಂದೆನು ನೀನು ನಿರ್ಮಿಸಿದ ಪರಿಯಲ್ಲಿತೊಲಗಿಸಿನ್ನೀ ಭವವನು ಕೃಷ್ಣಾನಳಿನಾಕ್ಷ ನಿನ್ನ ಪ್ರಾದಕ್ಷಿಣವು ಬಳಿಕಾಯ್ತುನಿಲಿಸೆನ್ನ ನಿನ್ನಡಿಯೊಳು ಕೃಷ್ಣಾ 1ಜನನ ಜನನಗಳಲ್ಲಿ ಕಿವಿಮುಚ್ಚಿ ತಲೆವಾಗಿನಿನಗೆರಗಿದವನಾದೆನು ಕೃಷ್ಣಾಗಣನೆುಲ್ಲದ ಜನ್ಮಗಳಲಿನಿತು ನಮಿಸಿದರೆಗಣನೆಗೊಳದಿಪ್ಪುದೇನು ಕೃಷ್ಣಾಅಣು ಮಾತ್ರದವನಾಗಿ ಘನತರದವಿದ್ಯೆಯಲಿಮನಮುಳುಗಿ ಬಹು ನೊಂದೆನೋ ಕೃಷ್ಣಾಯೆಣಿಸದಪರಾಧ ಕೋಟಿಗಳ ಭವ ಭೀತನನುಅನುಪಮನೆ ಕೊಡು ಗತಿಯನು ಕೃಷ್ಣಾ 2ಮರೆಯೊಕ್ಕವರ ಕಾಯ್ವ ಬಿರಿದು ನಿನ್ನದು ದೇವಮರೆಯೊಕ್ಕೆನೆಂದೆನೀಗ ಕೃಷ್ಣಾಮರಳಿ ನುಡಿವರೆ ಗುಣಗಳಡಿಮೆಟ್ಟುತಿವೆ ಬೇಗಸ್ಮರಣೆದೊರಕೊಳ್ಳದಾಗ ಕೃಷ್ಣಾಸೆರೆಯವನ ಬಂಧುಗಳು ಬಿಡಿಸುವರು ಕಂಡಾಗಸೆರೆಯವನಿಗುಂಟೆ ಯೋಗ ಕೃಷ್ಣಾತಿರುಪತಿವಿಹಾರಿ ದುರಿತಾರಿ ವೆಂಕಟರಮಣಕರವಿಡಿಯೆ ಸದ್ಗತಿ ಸರಾಗ ಕೃಷ್ಣಾ 3ಓಂ ವಿದುರಾಕ್ರೂರಾಯ ನಮಃ
--------------
ತಿಮ್ಮಪ್ಪದಾಸರು
ಚರಣಯುಗವ ತೋರೋ ಪ ಶರಣರ ಪೊರೆಯುವ ಕರುಣಿಗಳರಸನೆ ನಿರುತವು ನಿನ್ನನೆ ನೆರೆನಂಬಿದೆ ಹರಿ ಅ.ಪ ದಿಕ್ಕು ನೀನೆ ಎಂದು ನಂಬಿದೆನಕ್ಕರಿಂದ ಬಂದು ತಕ್ಕುದೇನು ಘನ ರಕ್ಕಸವೈರಿಯೆ 1 ಇಷ್ಟದೇವನಾರೋ ಮನಸಾಭೀಷ್ಟವ ಕೊಡುಬಾರೋ ಕೃಷ್ಣಮೂರ್ತಿ ನೀಂ ದೃಷ್ಟಿಸು ನಮ್ಮನು2 ಕೇಣವ್ಯಾಕೋ ಹರಿಯೆ ಕಣ್ಣಲಿ ಕಾಣು ಬಾರೋ ದೊರೆಯೇ ಕಾಣೆನಿನಗೆ ಸರಿ ಜಾಣತನದಿ ಹರಿ 3 ವಾರಿಧಿಕೃತಶಯನ ವಿಕಸಿತ ವಾರಿಜದಳನಯನ ಕ್ಷೀರದೊಳದ್ದುನೀ ನೀರೊಳಗದ್ದು ಕಂ ಸಾರಿ ನಿನ್ನನೆ ಸಾರಿದೆ ನರಹರಿ 4 ಧರೆಯೊಳಧಿಕವಾದ ಶ್ರೀ ಪುಲಿಗಿರಿಯೊಳು ನೆಲೆಯಾದ ವರದವಿಠಲ ದೊರೆ ದಯಾನಿಧೆ 5
--------------
ವೆಂಕಟವರದಾರ್ಯರು